ಹಾವೇರಿಜಿಲ್ಲೆಯಲ್ಲಿ ಅತಿವೃಷ್ಟಿ-೧೧೩೦ ಮನೆಗಳಿಗೆ ಹಾನಿ- ಸಾರ್ವಜನಿಕರ ಸುರಕ್ಷತೆಗೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ

Date:

ಹಾವೇರಿಜಿಲ್ಲೆಯಲ್ಲಿ ಅತಿವೃಷ್ಟಿ-೧೧೩೦ ಮನೆಗಳಿಗೆ ಹಾನಿ-
ಸಾರ್ವಜನಿಕರ ಸುರಕ್ಷತೆಗೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ

ಹಾವೇರಿ: ಜಿಲ್ಲೆಯಲ್ಲಿ ಜುಲೈ ಮಾಹೆಯಲ್ಲಿ ಕಳೆದ ಏಳು ದಿನಗಳಿಂದ ಸತತ ಮಳೆಯಾಗುತ್ತಿದ್ದು, ವಾಡಿಕೆ ೩೩.೪ಮೀ. ಮೀ. ಮಳೆಗೆ ವಾಸ್ತವಾಗಿ ೧೦೨.೯ ಮಿ.ಮೀ. ಮಳೆಯಾಗಿದ್ದು, ಶೇ.೨೦೮ ರಷ್ಟು ಹೆಚ್ಚುವರಿ ಮಳೆಯಾಗಿದೆ. ೧೧೩೦ ಮನೆಗಳಿಗೆ ಹಾನಿಯಾಗಿದ್ದು, ಇನ್ನೂ ಮೂರ‍್ನಾಲ್ಕು ದಿನ ಮಳೆ ಮುಂದುವರೆಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರ ಸುರಕ್ಷತೆಗೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದ್ದಾರೆ.
ಮಳೆ ವಿವರ: ಜುಲೈ ೨೨ ರಿಂದ ೨೮ರವರೆಗೆ ಬ್ಯಾಡಗಿ ತಾಲೂಕಿನಲ್ಲಿ ೨೫.೫ ಮೀ ಮೀ ವಾಡಿಕೆ ಮಳೆ, ವಾಸ್ತವ ೧೨೫.೭ ಮೀ ಮೀ ಮಳೆಯಾಗಿದೆ. ಹಾನಗಲ್ ತಾಲೂಕಿನಲ್ಲಿ ೫೩.೫ ಮೀ ಮೀ ವಾಡಿಕೆ ಮಳೆ, ವಾಸ್ತವ ೧೪೯.೨ ಮೀ ಮೀ ಮಳೆಯಾಗಿದೆ. ಹಾವೇರಿ ತಾಲೂಕಿನಲ್ಲಿ ೨೫.೫ ಮೀ ಮೀ ವಾಡಿಕೆ ಮಳೆ, ವಾಸ್ತವ ೮೪.೧ ಮೀ ಮೀ ಮಳೆಯಾಗಿದೆ. ಹಿರೇಕೆರೂರು ತಾಲೂಕಿನಲ್ಲಿ ೩೮.೮ ಮೀ ಮೀ ವಾಡಿಕೆ ಮಳೆ, ವಾಸ್ತವ ೧೧೯.೬ ಮೀ ಮೀ ಮಳೆಯಾಗಿದೆ.
ರಾಣೇಬೆನ್ನೂರ ತಾಲೂಕಿನಲ್ಲಿ ೨೦.೦ ಮೀ ಮೀ ವಾಡಿಕೆ ಮಳೆಗೆ, ವಾಸ್ತವ ೮೧.೫ ಮೀ ಮೀ ಮಳೆಯಾಗಿದೆ. ಸವಣೂರ ತಾಲೂಕಿನಲ್ಲಿ ೨೩.೨ ಮೀ ಮೀ ವಾಡಿಕೆ ಮಳೆಗೆ, ವಾಸ್ತವ ೮೧.೯ ಮೀ ಮೀ ಮಳೆಯಾಗಿದೆ. ಶಿಗ್ಗಾಂವ ತಾಲೂಕಿನಲ್ಲಿ ೩೨.೫ ಮೀ ಮೀ ವಾಡಿಕೆ ಮಳೆಗೆ, ವಾಸ್ತವ ೧೦೬.೧ ಮೀ ಮೀ ಮಳೆಯಾಗಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ ೩೬.೨ ಮೀ ಮೀ ವಾಡಿಕೆ ಮಳೆಗೆ, ವಾಸ್ತವ ೮೩.೩ ಮೀ ಮೀ ಮಳೆಯಾಗಿದೆ.
ಮನೆಹಾನಿ ವಿವರ: ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ೧೧೧ ಮನೆಗಳಿಗೆ, ಜೂನ್‌ನಲ್ಲಿ ೧೯ ಹಾಗೂ ಜುಲೈ ಮಾಹೆಯಲ್ಲಿ ೯೮೯ ಮನೆಗಳಿಗೆ ಭಾಗಶಃ ಹಾನಿ(ಜೂನ್‌ನಲ್ಲಿ ಐದು ಜುಲೈನಲ್ಲಿ ೯ ಮನೆಗಳಿಗೆ ತೀವ್ರ ಹಾನಿಯಾಗಿದೆ) ಸೇರಿ ೧೧೩೦ ಮನೆಗಳಿಗೆ ಹಾನಿಯಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ಜುಲೈ ಮಾಹೆಯಲ್ಲಿ ೫೦ ಮನೆಗಳಿಗೆ ಭಾಗಶಃ ಹಾನಿಯಾಗಿದೆ, ಹಾನಗಲ್ ತಾಲೂಕಿನ ಮೇ ಮಾಹೆಯಲ್ಲಿ ೨೬ ಮನೆಗಳಿಗೆ, ಜೂನ್‌ನಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿ, ಜುಲೈ ಮಾಹೆಯಲ್ಲಿ ಎರಡು ಮನೆಗಳಿಗೆ ತೀವ್ರಹಾನಿ ಹಾಗೂ ೧೨೬ ಮನೆಗಳಿಗೆ ಭಾಗಶಃ ಹಾನಿ ಸೇರಿ ೧೫೬ ಮನೆಗಳಿಗೆ ಹಾನಿಯಾಗಿದೆ.
ಹಾವೇರಿ ತಾಲೂಕಿನಲ್ಲಿ ಮೇ ಮಾಹೆಯಲ್ಲಿ ೪೮ ಮನೆಗಳಿಗೆ ಹಾಗೂ ಜುಲೈ ಮಾಹೆಯಲ್ಲಿ ೧೪೨ ಮನೆಗಳಿಗೆ ಭಾಗಶಃ ಹಾನಿ ಸೇರಿ ೧೯೦ ಮನೆಗಳಿಗೆ ಹಾನಿಯಾಗಿದೆ. ಹಿರೇಕೆರೂರು ತಾಲೂಕಿನಲ್ಲಿ ಜುಲೈ ಮಾಹೆಯಲ್ಲಿ ೫೯ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ರಾಣೇಬೆನ್ನೂರ ತಾಲೂಕಿನಲ್ಲಿ ಮೇ ಮಾಹೆಯಲ್ಲಿ ೦೪ ಮನೆಗಳಿಗೆ, ಜೂನ್‌ನಲ್ಲಿ ಒಂದು ಮನೆಗೆ ಹಾಗೂ ಜುಲೈ ಮಾಹೆಯಲ್ಲಿ ೧೩೭ ಮನೆಗಳು ಸೇರಿ ೧೪೨ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಸವಣೂರ ತಾಲೂಕಿನಲ್ಲಿ ಮೇ ಮಾಹೆಯಲ್ಲಿ ೨೭ ಮನೆಗಳಿಗೆ, ಜೂನ್‌ನಲ್ಲಿ ೧೩ ಹಾಗೂ ಜುಲೈನಲ್ಲಿ ೨೯೦ ಮನೆಗಳು ಸೇರಿ ೩೩೦ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಶಿಗ್ಗಾಂವ ತಾಲೂಕಿನಲ್ಲಿ ಮೇ ಮಾಹೆಯಲ್ಲಿ ಆರು, ಜೂನ್‌ನಲ್ಲಿ ಐದು(ತೀವ್ರಹಾನಿ) ಹಾಗೂ ಜುಲೈನಲ್ಲಿ ೧೩೭ ಮನೆಗಳು ಸೇರಿ ೧೪೮ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ ಮೇ ಮಾಹೆಯಲ್ಲಿ ಜುಲೈ ಏಳು ಮನೆಗಳಿಗೆ ತೀವ್ರ ಹಾಗೂ ೪೮ ಮನೆಗಳಿಗೆ ಭಾಗಶಃ ಸೇರಿ ೫೫ ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಮನೆಗಳ ಪರಿಶೀಲನೆ ನಡೆಯುತ್ತಿದ್ದು, ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಜಾನುವಾರು ಜೀವ ಹಾನಿ: ಜಿಲ್ಲೆಯಲ್ಲಿ ೧೬ ಜಾನುವಾರುಗಳಿಗೆ ಜೀವಹಾನಿಯಾಗಿದೆ. ಹಾವೇರಿ ತಾಲೂಕಿನಲ್ಲಿ ಒಂದು ಎಮ್ಮೆ, ಶಿಗ್ಗಾಂವ ತಾಲೂಕಿನಲ್ಲಿ ಎರಡು ಆಕಳು ಹಾಗೂ ಒಂದು ಕರು, ಹಾನಗಲ್‌ನಲ್ಲಿ ೧೧ ಕುರಿ, ರಾಣೇಬೆನ್ನೂರಿನಲ್ಲಿ ಒಂದು ಎಮ್ಮೆ ಜೀವನಹಾನಿಯಾಗಿದೆ. ಈ ಜಾನುವಾರುಗಳ ಮಾಲೀಕರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ರೂ.೧.೯೪ ಲಕ್ಷ ಪರಿಹಾರ ಪಾವತಿಸಲಾಗಿದೆ.
ಮಾನವ ಜೀವಹಾನಿ: ಜಿಲ್ಲೆಯಲ್ಲಿ ಮೂರು ಜೀವಹಾನಿಯಾಗಿದ್ದು, ಹಾನಗಲ್ ತಾಲೂಕಿನ ಮಹಾರಾಜಪೇಟೆಯ ನಾಗರಾಜ ಕಲ್ಲಪ್ಪ ಮುತ್ತಿನಹಾಳ (ದಿ.೨೩-೦೫-೨೦೨೩)ಸಿಡಿಲು ಬಡಿದು ಹಾಗೂ ನೆಲ್ಲಿಬೀಡ ಯಮುನಪ್ಪ ದುರ್ಮಣ್ಣ ಬಂಡ್ಡಿವಡ್ಡರ(೨೩-೦೭-೨೦೨೩) ಧರ್ಮಾನದಿಯಲ್ಲಿ ಕೊಚ್ಚಿಹೋಗಿ ಹಾಗೂ ಹಾವೇರಿ ತಾಲೂಕಿನ ಮಾಳಾಪುರ ಗ್ರಾಮದ ಭಾಗ್ಯಾ ಮಲ್ಲಪ್ಪ ಚಳ್ಳಮರದ (ದಿ೨೪-೦೭-೨೦೩)ಗೋಡೆ ಕುಸಿದು ಮರಣಹೊಂದಿದ್ದಾರೆ. ಮೃತರ ಕುಟುಂಬದ ವಾರಸುದಾರರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನ್ವಯ ರೂ. ಐದು ಲಕ್ಷ ಪರಿಹಾರ ಪಾವತಿಸಲಾಗಿದೆ.
ಕಾಳಜಿ ಕೇಂದ್ರ: ಸವಣೂರ ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಿದ್ದು, ಈ ಕಾಳಜಿ ಕೇಂದ್ರದಲ್ಲಿ ೨೧ ಕುಟುಂಬಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ೯೪ ಗಂಡಸರು, ೪೨ ಜನ ಹೆಣ್ಣುಮಕ್ಕಳು, ೪೪ ಮಕ್ಕಳು ಹಾಗೂ ೧೫ಜನ ವೃದ್ಧರು ಸೇರಿ ೧೩೬ ಜನರಿರುತ್ತಾರೆ. ಪರಿಹಾರ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಳೆಹಾನಿ: ಪೂರ್ವ ಮುಂಗಾರು ಹಾಗೂ ಮುಂಗಾರು ಸೇರಿ ೨೨೦.೫೩ ಹೆಕ್ಟೇರ್ ಬೆಳೆಹಾನಿಯಾಗಿದೆ. ಮುಂಗಾರು ಹಂಗಾಮಿನಲ್ಲಿ ೯೫ ಹೆಕ್ಟೇರ್ ಕೃಷಿ ಬಿಳೆ, ಪೂರ್ವ ಮುಂಗಾರಿನಲ್ಲಿ ೮೨.೯೮ ಹೆಕ್ಟೇರ್ ಹಾಗೂ ಮುಂಗಾರಿನಲ್ಲಿ ೪೨.೫೫ ಹೆಕ್ಟೇರ್ ಸೇರಿ ೧೨೫.೫೩ ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ.
ಮೂಲಭೂತ ಸೌಕರ್ಯಹಾನಿ: ಜಿಲ್ಲೆಯ್ಲಲಿ ರಸ್ತೆ, ಸೇತುವೆ, ಕಟ್ಟಡ ಸೇರಿ ರೂ.೩೯.೩೫ ಕೋಟಿ ಮೊತ್ತದ ಮೂಲ ಸೌಕರ್ಯಗಳ ಹಾನಿಯಾಗಿದೆ(ಎನ್.ಡಿ.ಆರ್.ಎಫ್ ರೂ.೩೪.೪೬ ಕೋಟಿ). ಲೋಕೋಪಯೋಗಿ ಇಲಾಖೆಯ ೩೪.೯೧ ಕಿ.ಮೀ., ಜಿಲ್ಲಾ ಮುಖ್ಯರಸ್ತೆ ೧೦೩.೮೫ ಕಿ.ಮೀ ಹಾಗೂ ೧೫ ಸೇತುವೆಗಳಿಗೆ ಹಾನಿಯಾಗಿದೆ. ರೂ.೧೯೯.೨೦ ಲಕ್ಷ ಹಾನಿ ಅಂದಾಜಿಸಲಾಗಿದೆ (ಎನ್.ಡಿ.ಆರ್.ಎಫ್ ರೂ.೧೫೩.೪೯ ಲಕ್ಷ).
ಪಂಚಾಯತ್ ರಾಜ್ ಇಲಾಖೆಯ ೩೦೯ ಕಿ.ಮೀ. ಗ್ರಾಮೀಣ ರಸ್ತೆ, ೨೦ ಸೇವೆಗಳು, ೧೨ ಕೆರೆ-ಕಟ್ಟೆ ಹಾಗೂ ಮೂರು ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ರೂ.೫೩೨.೭೨ ಲಕ್ಷ ಹಾನಿ ಅಂದಾಜಿಸಲಾಗಿದೆ (ಎನ್.ಡಿ.ಆರ್.ಎಫ್ ರೂ.೨೨೭.೧೦ ಲಕ್ಷ).
ಹೆಸ್ಕಾಂನ ೩೭೮ ಕಂಬಗಳಿಗೆ ಹಾಗೂ ೧೪ ಟ್ರಾನ್ಸ್‌ಫಾರ್ಮಗಳಿಗೆ ಹಾನಿಯಾಗಿದೆ. ಅಂದಾಜು ರೂ. ೪೪.೨೪ ಲಕ್ಷ ಹಾನಿಯಾಗಿದೆ(ಎನ್.ಡಿ.ಆರ್.ಎಫ್ ರೂ. ೪೪.೨೪ಲಕ್ಷ).
ಶಿಕ್ಷಣ ಇಲಾಖೆಯ ೬೨೭ ಶಾಲಾ ಕಟ್ಟಡಗಳಲ್ಲಿ ೧೨೭೩ ಕೊಠಡಿಗಳಿಗೆ ಹಾನಿಯಾಗಿದ್ದು, ರೂ.೨೫.೪೬ ಕೋಟಿ ಹಾನಿ ಅಂದಾಜಿಸಲಾಗಿದೆ(ಎನ್.ಡಿ.ಆರ್.ಎಫ್ ರೂ. ೨೫.೪೬ ಕೋಟಿ).
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ೨೩೬ ಅಂಗವಾಡಿಗಳಿಗೆ ಹಾನಿಯಾಗಿದೆ. ರೂ.೪.೭೨ ಕೋಟಿ ಹಾನಿ ಅಂದಾಜಿಸಲಾಗಿದೆ(ಎನ್.ಡಿ.ಆರ್.ಎಫ್.ರೂ.೪.೭೨ ಕೋಟಿ).
ನಗರಾಭಿವೃದ್ಧಿ ಇಲಾಖೆಯ ೨೦.೧೫ ಕಿ.ಮೀ. ರಸ್ತೆ ಒಂದು ಸರ್ಕಾರಿ ಕಟ್ಟಡ ಹಾನಿಯಾಗಿದ್ದು, ರೂ.೧.೨೬ ಕೋಟಿ ಅಂದಾಜು ಹಾನಿಯಾಗಿದೆ(ಎನ್.ಡಿ.ಆರ್.ಎಫ್.ರೂ.೧೪.೦೯ ಲಕ್ಷ).
ಸಣ್ಣ ನೀರಾವರಿ ಇಲಾಖೆಯ ಎರಡು ಕಾಲುವೆ ಒಂದು ಒಡ್ಡು ಹಾನಿಯಾಗಿದ್ದು, ರೂ.೧೫ ಲಕ್ಷ ಹಾನಿ ಅಂದಾಜಿಸಲಾಗಿದೆ( ಎನ್.ಡಿ.ಆರ್.ಎಫ್.ರೂ.೪.೫೦ ಲಕ್ಷ).
ಜಿಲ್ಲೆಯ ಎಲ್ಲ ತಾಲೂಕು ಹೋಬಳಿಗಳಲ್ಲಿ ಈವರೆಗೂ ಸರಾಸರಿಗಿಂತ ಹೆಚ್ಚು ಮಳೆಯಾಗಿದ್ದು, ಕಳೆದ ಎಂಟಹತ್ತು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಕಾರಣ ಎಲ್ಲಾ ತಾಲೂಕುಗಳಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಅತಿವೃಷ್ಟಿ ಮತ್ತು ನಿರಂತರ ಮಳೆಯಿಂದ ತುತ್ತಾಗಬಹುದಾದ ಗ್ರಾಮಗಳ ವಿವರಗಳು, ಕಾಳಜಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಹಾಗೂ ಈಜುಗಾರರ ವಿವರಗಳನ್ನು ಮತ್ತು ಹಾವುಗಳನ್ನು ಹಿಡಿಯುವ ವಿವರವನ್ನು ಪಡೆಯಲಾಗಿದೆ. ಇವರಿಂದ ಅತಿವೃಷ್ಟಿಯ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಜುಲೈ ೨೯ ರಂದು ಅಧಿಸೂಚನೆ

ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಜುಲೈ ೨೯ ರಂದು ಅಧಿಸೂಚನೆ ನ್ಯಾಯ ಸಮ್ಮತ...

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ: ಸಚಿವ ಸಂಪುಟ ಅಸ್ತು

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ:...

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...