
ಹಾವೇರಿಜಿಲ್ಲೆಯಲ್ಲಿ ಏ.೧ ರಿಂದ ಮೊದಲ ಹಂತದ ಜನಗಣತಿ
ಮಾಹಿತಿ ಗೌಪ್ಯವಾಗಿರುತ್ತದೆ- ನಿಖರ ಮಾಹಿತಿ ನೀಡಿ-ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ ಡಾ.ವಿಜಯಮಹಾಂತೇಶ
ಹಾವೇರಿ : ಜಿಲ್ಲೆಯಲ್ಲಿ ಮೊದಲ ಹಂತದ ಜನಗಣತಿ ಏಪ್ರಿಲ್ ೧ ರಿಂದ ಮೇ ೧೫ರವರೆಗೆ ಜರುಗಲಿದೆ. ಸಾರ್ವಜನಿಕರು ನೀಡಿದ ಮಾಹಿತಿ ಗೌಪ್ಯವಾಗಿರುತ್ತದೆ ಹಾಗೂ ಯಾವುದೇ ಸೌಲಭ್ಯಗಳು ಕಡಿತವಾಗುವುದಿಲ್ಲ. ಹಾಗಾಗಿ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ನಿಖರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರಧಾನ ಜನಘನತಿ ಅಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳ ಜಾರಿಗೆ ಜನಸಂಖ್ಯೆ ಹಾಗೂ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಬಹಳ ಮುಖ್ಯವಾಗಿದೆ. ದೇಶದ ಅಭಿವೃದ್ಧಿ ಹಿತದೃಷ್ಟಿಯಿಂದ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಜನಗಣತಿಯಲ್ಲಿ ಭಾಗವಹಿಸಬೇಕು ಎಂದರು.
ಜನಗಣತಿ ಎಂದರೆ ಒಂದು ನಿರ್ಧಿಷ್ಟ ಸಮಯದಲ್ಲಿ ಒಂದು ದೇಶದಲ್ಲಿನ ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ವ್ಯಕ್ತಿ ಮತ್ತು ಅವರ ಜನಸಂಖ್ಯಾ, ಆರ್ಥಿಕ ಮತ್ತು ಸಾಮಾಜಿಕ ಮಾಹಿತಿಗಳ ಅಧಿಕೃತ ಸಂಫೂರ್ಣಎಣಿಕೆಯಾಗಿದೆ ಎಂದರು.
೧೬ನೇ ಜನಗಣತಿ: ಭಾರತದಲ್ಲಿ ೧೮೭೨ ರಿಂದ ಇದು ೧೬ನೇ ಜನಗಣತಿ ಯಾಗಿದೆ ಹಾಗೂ ದೇಶದಲ್ಲಿಯೇ ಪ್ರಥಮಬಾರಿಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತದೆ. ಭಾರತದ ಸ್ವಾತಂತ್ರ್ಯದ ನಂತರದ ೮ನೇ ಜನಗಣತಿ ಇದಾಗಿದೆ. ಭಾರತೀಯ ಜನಗಣತಿಯು ಜನಸಂಖ್ಯಾಶಾಸ್ತ್ರ (ಜನಸಂಖ್ಯಾಗುಣಲಕ್ಷಣಗಳು) ಆರ್ಥಿಕ ಚಟುವಟಿಕೆ, ಸಾಕ್ಷರತೆ ಮತ್ತು ಶಿಕ್ಷಣ, ವಸತಿ ಮತ್ತು ಮನೆಯ ಸೌಲಭ್ಯಗಳು, ನಗರೀಕರಣ, ಫಲವತ್ತತೆ (ಈeಡಿಣiಟiಣಥಿ) ಮತ್ತು ಮರಣ, ಪರಿಶಿ? ಜಾತಿ ಮತ್ತು ಪರಿಶಿ? ಪಂಗಡ, ಬಾ?, ಧರ್ಮ, ವಲಸೆ, ಅಂಗವೈಕಲ್ಯ ಮತ್ತು ಇತರೆ ಸಾಂಘಿಕ ಸಾಂಸ್ಕೃತಿಕ ಮತ್ತು ಜನಸಂಖ್ಯೆಯ ಅಂಕಿಅಂಶಗಳಮಾಹಿತಿ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳ ನೇಮಕ: ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳನ್ನು ಪ್ರಧಾನ ಜನಗಣತಿ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಹೆಚ್ಚುವರಿ ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಜನಗಣತಿ ಅಧಿಕಾರಿಗಳಾಗಿದ್ದು, ಜಿ.ಪಂ.ಮುಖ್ಯ ಯೋಜನಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ), ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾನಿರ್ದೇಶಕರನ್ನು ಹೆಚ್ಚುವರಿ ಜನಗಣತಿ ಅಧಿಕಾರಿಗಳು ಎಂದು ಜನಗಣತಿ ನಿರ್ದೇಶನಾಲಯ ನೇಮಕ ಮಾಡಿದೆ.
ಡಿಜಿಟಲ್ ವಿಧಾನ: ಭಾರತೀಯ ಜನಗಣತಿಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮೊಬೈಲ್ ಆಪ್ ಮತ್ತು ಡಿಜಿಟಲ್ ವಿಧಾನಗಳ ಮೂಲಕ ಸಮಗ್ರವಾಗಿ ಜನಗಣತಿ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತವಾಗಿ (ಮನೆಪಟ್ಟೆಮತ್ತುಮನೆಗಣತಿ( ಊಐಔ) ) ೧ ಏಪ್ರಿಲ್ ೨೦೨೬ ರಿಂದ ೧೫ ಮೇ ೨೦೨೬ರ ವರೆಗೆ ನಡೆಯಲಿದೆ. ಎರಡನೇ ಹಂತ (ಜನಸಂಖ್ಯೆಎಣಿಕೆ): ಫೆಬ್ರವರಿ ೨೦೨೭ ರಿಂದ ೧ ಮಾರ್ಚ್ ೨೦೨೭ ನಡೆಯಲಿದೆ. ಈ ಎರಡು ಹಂತಗಳನ್ನು ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿದ ಅಒಒS (ಅeಟಿsus ಒoಟಿiಣoಡಿiಟಿg ಚಿಟಿಜ ಒಚಿಟಿಚಿgemeಟಿಣ Sಥಿsಣem) ತಂತ್ರಾಂಶದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಹಾಗೂ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆಗಣತಿಯ ಸ್ವಯಂಗಣತಿ (Seಟಜಿ-ಇಟಿumeಡಿಚಿಣioಟಿ) ಯನ್ನು hಣಣಠಿs://se.ಛಿeಟಿsus.gov.iಟಿಲಿಂಕ್ ಮೂಲಕ ಏಪ್ರಿಲ್ ೧ರಿಂದ ೧೫ರವರೆಗೆ ಅಂದರೆ ೧೫ ದಿನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸ್ವಯಂ ಗಣತಿ ವಿಧಾನ: ಜನಗಣತಿ ೨೦೨೭ – ಸ್ವಯಂಗಣತಿ (Seಟಜಿ ಇಟಿumeಡಿಚಿಣioಟಿ) ಕಾರ್ಯವಿಧಾನ ೦೧ ಏಪ್ರಿಲ್ ೧ ರಿಂದ ಏಪ್ರಿಲ್ ೧೫ರವರೆಗೆ ನಿ ನಿಮ್ಮ ಜನಗಣತಿ ವಿವರಗಳನ್ನು ಆನ್ಲೈನಲ್ಲಿ ವೇಗವಾಗಿ ಮತ್ತು ಸುರಕ್ಷಿತವಾಗಿ ಭರ್ತಿ ಮಾಡಿ. <hಣಣಠಿs://se.ಛಿeಟಿsus.gov.iಟಿ> ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಲಾಗಿನ್ ಮಾಡಿ, ನಿಮ್ಮ ಸ್ಥಳವನ್ನು ಆಯ್ಕೆಮಾಡಿ, ನಕ್ಷೆಯಲ್ಲಿ ನಿಮ್ಮಮನೆಯನ್ನು ಗುರುತಿಸಿ, ಮನೆಯ/ಕುಟುಂಬದ ವಿವರಗಳನ್ನು ಭರ್ತಿಮಾಡಿ ಸಲ್ಲಿಸಿ ಮತ್ತು ನಿಮ್ಮ Sಇ ಖeಜಿeಡಿeಟಿಛಿe Iಆ ಪಡೆಯಿರಿ. ಎಲ್ಲ ಮಾಹಿತಿ ದಾಖಲಿಸಲು ೧೦ ರಿಂದ ೧೫ ನಿಮಿಷಗಳು ಆಗಬಹುದು. ನಿಮ್ಮ Sಇ Iಆ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಹಾಗೂ ಇಟಿumeಡಿಚಿಣoಡಿ ಮನೆಗೆ ಬಂದಾಗ ಅದನ್ನುಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರ ಪರಿಶೀಲನೆ: ಏಪ್ರಿಲ್ ೧೬ ರಿಂದ ಮೇ ೧೫ರವರೆಗೆ ಗಣತಿದಾರರು ಮನೆಗೆ ಭೇಟಿನೀಡಿ ವಿವರಗಳನ್ನು ಪರಿಶೀಲಿಸುತ್ತಾರೆ. ನೂರಕ್ಕೆ ನೂರರಷ್ಟು ಗೌಪ್ಯತೆ ಹಾಗೂ ಭದ್ರತೆ ಇರುತ್ತದೆ. ನಿಮ್ಮ ಸ್ವಯಂ ಗಣತಿಯನ್ನು ಪೂರ್ಣಗೊಳಿಸಿ, ಜವಾಬ್ದಾರಿಯುತ ನಾಗರಿಕರಾಗಿರಿ ಎಂದರು.
ಅಗತ್ಯ ಸಿದ್ಧತೆ: ಜಿಲ್ಲೆಯಲ್ಲಿ ಒಟ್ಟು ೮ ತಾಲ್ಲೂಕುಗಳ ಪೈಕಿ ಗ್ರಾಮೀಣ ವಿಭಾಗಕ್ಕೆ ಎಂಟು ಹಾಗೂ ನಗರಸ್ಥಳೀಯ ಪ್ರದೇಶದಲ್ಲಿ ೧೦ ಸೇರಿ ಒಟ್ಟು ೧೮ ಚಾರ್ಜ ಅಧಿಕಾರಿಗಳನ್ನು ನೇಮಕಮಾಡಲಾಗಿದೆ. ಈ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮಾರ್ಚ್ ೩ ರಿಂದ ೫ರವರೆಗೆ ತರಬೇತಿ ನೀಡಲಾಗಿದೆ. ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರನ್ನು ನೇಮಕ ಮಾಡಿ, ಮೈಸೂರು ಎ.ಟಿ.ಐ.ಅವರಿಂದ ತರಬೇತಿ ಪಡೆಯಲಾಗಿದೆ.
ಜಿಲ್ಲೆಯಲ್ಲಿ ೫೪ ಫೀಲ್ಡ್ ತರಬೇತುದಾರ (ಈieಟಜ ಖಿಡಿಚಿiಟಿeಡಿ) ರನ್ನು ಆಯ್ಕೆಮಾಡಿ, ಜಿಲ್ಲಾ ಮಟ್ಟದಲ್ಲಿ ಮಾರ್ಚ್ ೧೧ ರಿಂದ ೧೩ರವರೆಗೆ ತರಬೇತಿ ನೀಡಲಾಗಿದೆ. ೧೮ ಚಾರ್ಜ್ ಅಧಿಕಾರಿಗಳಿಗೆ ೧೮ ತಾಂತ್ರಿಕ ಸಹಾಯಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ರಚನೆ: ಚಾರ್ಜ್ ಅಧಿಕಾರಿಗಳು ತಮಗೆ ಸಂಬಂಧಿಸಿದ ಗ್ರಾಮ/ ಶಹರಗಳನ್ನು ಅಂದಾಜು ೬೫೦ ರಿಂದ ೮೦೦ ಜನಸಂಖ್ಯೆಗೆ ಅನುಗುಣವಾಗಿ ಅಥವಾ ೧೫೦ ರಿಂದ ೧೮೦ ಜನಗಣತಿ ಮನೆಗಳು ಬರುವಂತೆ ಒಂದು ಬ್ಲಾಕ್ನ್ನು ರಚಿಸಿ ಗಡಿಗುರುತಿಸಲಾಗುವುದು ಹಾಗೂ ೮೦೦ಕ್ಕಿಂತ ಕಡಿಮೆ ಇರುವ ಗ್ರಾಮವಿದ್ದರೂ ಕೂಡ ಅದನ್ನು ಒಂದು ಬ್ಲಾಕ್ ಎಂದು ಪರಿಗಣಿಸಲಾಗುವುದು.
ಮೇಲ್ವಿಚಾರಣೆ: ಜನಗಣತಿ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಗುರುತಿಸಲಾದ ಬ್ಲಾಕ್ಗಳಲ್ಲಿ ಅಂದಾಜು ೦೬ ರಿಂದ ೦೮ ಬ್ಲಾಕ್ಗಳಿಗೆ ಒಂದು ವೃತ್ತವನ್ನು ರಚಿಸಿ ಒಬ್ಬ ಅಧಿಕಾರಿಯನ್ನು ಮೇಲ್ವಿಚಾರಣೆಗೆ ನೇಮಿಸಲಾಗಿರುತ್ತದೆ. ಈ ಅಧಿಕಾರಿಗಳು ಎಲ್ಲಾ ಗಣತಿದಾರರ ಮೇಲ್ವಿಚಾರಕರಾಗಿರುತ್ತಾರೆ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟಾರೆ ೧೧೯ ಸ್ಲಮ್ಗಳನ್ನು ಗುರುತಿಸಲಾಗಿದೆ.
೨೯೩೫ ಬ್ಲಾಕ್ಗಳು: ಜಿಲ್ಲೆಯ ಎಂಟು ತಾಲೂಕುಗಳ ಗ್ರಾಮೀಣ ೨,೧೯೩ ಹಾಗೂ ನಗರದ ಪ್ರದೇಶದ ೭೩೨ ಸೇರಿ ೨,೯೩೫ ಬ್ಲಾಕ್ಳನ್ನು ರಚಿಸಲಾಗಿದೆ. ಗ್ರಾಮೀಣ ೨,೪೧೩ ಹಾಗೂ ನಗರದ ಪ್ರದೇಶದ ೮೦೬ ಸೇರಿ ೩,೨೧೮ ಗಣತಿದಾರರು ಹಾಗೂ ಗ್ರಾಮೀಣ ೪೨೫ ಹಾಗೂ ನಗರದ ಪ್ರದೇಶದ ೧೪೬ ಸೇರಿ ೫೭೧ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ತರಬೇತಿ: ನೇಮಕಗೊಂಡ ಮೇಲ್ವಿಚಾರಕರಿಗೆ ಹಾಗೂ ಗಣತಿದಾರರಿಗೆ ದಿನಾಂಕ ೦೩-೦೪-೨೦೨೬ ರಿಂದ ೦೫-೦೪-೨೦೨೬ರ ವರೆಗೆ ಮೊದಲ ಹಂತ ಹಾಗೂ ದಿನಾಂಕ ೦೬-೦೪-೨೦೨೬ ರಿಂದ ೦೮-೦೪-೨೦೨೬ರ ವರೆಗೆ ಎರಡನೇ ಹಂತದ ತರಬೇತಿಯನ್ನು ಆಯಾ ತಾಲೂಕಿನಲ್ಲಿ ನಡೆಸಲಾಗುತ್ತದೆ ಎಂದರು.
ದೇಶದ ಹಿತಾಸಕ್ತಿ: “ನಮ್ಮ ಜನಗಣತಿ – ನಮ್ಮ ಭವಿ?, ೨೦೨೭ ರ ಜನಗಣತಿಯಲ್ಲಿ ಪಾಲ್ಗೊಳ್ಳಿ!”, “ಸರಿಯಾದ ಸಮಗ್ರ ಮಾಹಿತಿ, ಸದೃಢಯೋಜನೆ: ಡಿಜಿಟಲ್ ಗಣತಿಗೆ ಸಹಕರಿಸಿ” ಹಾಗೂ “ದೇಶದ ಅಭಿವೃದ್ಧಿಗೆ ನಿಮ್ಮ ಮನೆಯ ಮಾಹಿತಿ ಅತ್ಯಗತ್ಯ ” ಎಂಬ ಘೋಷವಾಕ್ಯದೊಂದಿಗೆ ಜನಗಣತಿ ನಡೆಸಲಾಗುತ್ತಿದೆ. ೨೦೨೭ ರ ಜನಗಣತಿಯು ಕೇವಲ ಸಂಖ್ಯೆಗಳಲ್ಲ, ಇದು ದೇಶದ ಹಿತಾಸಕ್ತಿಯಾಗಿದೆ. ಶಿಕ್ಷಣ, ವಸತಿ.ಉದ್ಯೋಗ ಮತ್ತು ಮೂಲ ಸೌಕರ್ಯಗಳ ಉತ್ತಮ ಯೋಜನೆಗೆ ನಿಮ್ಮ ನಿಖರ ಮಾಹಿತಿ ಅಗತ್ಯವಾಗಿದೆ. ಗಣತಿದಾರರಿಗೆ ನಿಮ್ಮ ಕುಟುಂಬದ ಸರಿಯಾದ ವಿವರಗಳನ್ನುನೀಡಿ, ಆಪ್ ಮೂಲಕವೇ ಮಾಹಿತಿ ದಾಖಲಿಸಲು ಸಹಕರಿಸಿ ಹಾಗೂ ಜನಗಣತಿ ಡೇಟಾ ಸಂಪೂರ್ಣಸುರಕ್ಷಿತವಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿ.ಪಂ.ಉಪಕಾರ್ಯದರ್ಶಿ ಡಾ.ಪುನಿತ್ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

