ಹಾವೇರಿಜಿಲ್ಲೆಯಲ್ಲಿ ಏರುಮುಖವಾಗಿರುವ ಹೃದಯಾಘಾತ ಪ್ರಕರಣಗಳು-ಇಸಿಜಿಗೆ ಮುಗಿಬಿದ್ದಿರುವ ಹೃದಯವಂತರು
ಹೆಸರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು-ಹೃದಯ ರೋಗ ತಜ್ಞರೇಇಲ್ಲ!
ಹಾವೇರಿ: ಹಾವೇರಿಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹಾವೇರಿ ಜಿಲ್ಲಾಸ್ಪತ್ರೆಗೆ ಹೃದಯ ಪರೀಕ್ಷೆಗಾಗಿ ಜನ ಮುಗಿಬಿದ್ದಿದ್ದಾರೆ. ಇದಕ್ಕೆ ಕಾರಣ ಹಾವೇರಿಜಿಲ್ಲೆಯಲ್ಲಿ ೨೦೨೫ರ ಪ್ರಸಕ್ತ ಸಾಲಿನ ಜುಲೈ ಅಂತ್ಯದವರೆಗೆ ೨೮ಕ್ಕೂ ಅಧಿಕ ಜನರು ಹೃದಯ ಹಿಂಡುವ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೀಗಾಗಿಜನರು ಹೃದಯ ಪರೀಕ್ಷೆಗಾಗಿ ಮುಂದಾಗಿದ್ದಾರೆ.
ಬಹುತೇಕ ಸಣ್ಣ ವಯಸ್ಸಿನವರೇ ಸಾವನ್ನಪ್ಪುತ್ತಿದ್ದಾರೆ. ಯುವಕರು-ಯುವತಿಯರು ಎಂಬ ಬೇಧವಿಲ್ಲದೆ ಸರಣಿ ಸಾವುಗಳಾಗುತ್ತಿವೆ. ಇದರಿಂದಾಗಿ ಜನರಲ್ಲಿ ಆತಂಕ ಮನೆಮಾಡಿದೆ. ಜನತೆ ಸಣ್ಣಪುಟ್ಟ ಅಸ್ವಸ್ಥತೆಗಳಿಗೂ ತಪಾಸಣೆಗಾಗಿ ಹೃದ್ರೋಗ ತಜ್ಞರ ಬಳಿ ದಾಂಗುಡಿ ಇಡುತ್ತಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವ ಈ ಎಲ್ಲಾ ಪ್ರಕರಣಗಳಲ್ಲೂ ಅಸ್ವಸ್ಥರಾದವರಲ್ಲಿ ಕೆಲವೇ ನಿಮಿಷಗಳಲ್ಲಿ ಕೆಲವರ ಪ್ರಾಣವಾಯು ಹಾರಿಹೋಗಿರುವುದು, ಪ್ರಾಥಮಿಕ ಚಿಕಿತ್ಸೆಗೂ ಅವಕಾಶವಿಲ್ಲದಂತೆ ಸಾವಿನ ಸರಣಿಗಳಾಗುತ್ತಿರುವುದು ಆತಂಕ ಮೂಡಿಸಿದೆ.
ಹಾವೇರಿ ಜಿಲ್ಲಾ ಆಸ್ಪತ್ರೆಯ ಇಸಿಜಿ ಪರೀಕ್ಷಾ ಕೊಠಡಿ ಮುಂದೆ ಜನರು ಸರತಿಯಲ್ಲಿ ಬೆಳಗ್ಗೆಯಿಂದಲೇ ಇಸಿಜಿ ಮಾಡಿಸಿಕೊಳ್ಳಲು ಜನರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಜನದಟ್ಟಣೆಗೆ ಹೆಚ್ಚಾಗಿರುವ ಕಾರಣಕ್ಕೆ ವೈದ್ಯಕೀಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಕೇವಲ ಒಂದೇ ವಾರದಲ್ಲಿ ಸುಮಾರು ೩೦೦ ಜನ ಇಸಿಜಿ ಪರೀಕ್ಷೆಗೆ ಮುಂದಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಹೃದಯ ರೋಗ ತಜ್ಞರಿಲ್ಲ. ಹೀಗಾಗಿ ಶೀಘ್ರವೇ ತಜ್ಞರನ್ನು ನೇಮಕ ಮಾಡಬೇಕು ಎಂದು ರೋಗಿಗಳ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.
“ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಜಿಲ್ಲೆಯ ಎಲ್ಲಾ ಕಡೆಯಿಂದ ಜನ ಬರುತ್ತಾರೆ. ಹೆಸರಿಗೆ ಹಾವೇರಿಜಿಲ್ಲ ಆಸ್ಪತ್ರೆ, ಜೊತೆಗೆ ಮೆಡಿಕಲ್ ಕಾಲೇಜು ಬೇರೆ. ಆದರೆ ಸಮಸ್ಯೆ ಏನೆಂದರೆ ಇಲ್ಲಿ ಹಾರ್ಟ್ ಸ್ಪೆಷಲಿಸ್ಟ್ಗಳು ಇಲ್ಲ. ಇದರಿಂದ ಜನಕ್ಕೆ ತೊಂದರೆಯಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸುತ್ತಾರೆ. ಅದರಲ್ಲಿ ಸ್ವಲ್ಪ ಸಮಸ್ಯೆ ಬಂದಾಗ ಆ ರೋಗಿಗೆ ೪ ಗುಳಿಗೆ ನುಂಗಿಸಿ ಕೆಎಂಸಿಗೆ ಕಳುಹಿಸುತ್ತಾರೆ.
ಆರ್ಥಿಕವಾಗಿ ಸ್ಥಿತಿವಂತರು ಧಾರವಾಡದ ಎಸ್ಡಿಎಂ ಇಲ್ಲವೇ ದಾವಣಗೆರೆ, ಬೆಂಗಳೂರು ಸೇರಿದಂತೆ ಹೃದಯರೋಗ ತಪಾಸಣಾ ಹಾಗೂ ಚಿಕಿತ್ಸಾ ಕೇಂದ್ರಗಳಿಗೆ ಹೋಗುತ್ತಾರೆ. ಆದರೆ ಬಡವ ಜನರು ಎಲ್ಲಿಗೆ ಹೋಗಬೇಕು?. ಜೀವನ ನಡೆಸುವುದೇ ಕಷ್ಟಿರುವಾಗ ಅವರಿಗೆ ಬೇರೆ ಊರಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವೇ? ಹೀಗಾಗಿ ಬಡಜನರಿಗೆ ತೊಂದರೆಯಾಗುತ್ತಿದೆ. ಹಾವೇರಿ ಜಿಲ್ಲಾಸ್ಪತ್ರೆಗೆ ಒಬ್ಬ ಹಾರ್ಟ್ ಸ್ಪೆಷಲಿಸ್ಟ್ ವೈದ್ಯರನ್ನು ನೇಮಿಸಿದರೆ ಜನರಿಗೆ ಹೃದಯ ತಪಾಸಣೆಮಾಡಿಸಿಕೊಂಡು ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ.
ಇಲ್ಲಿ ಹೃದಯರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಚಿಕಿತ್ಸೆ ಲಭ್ಯ ಇರುವುದಿಲ್ಲ. ಹೀಗಾಗಿ ಹೃದ್ರೋಗಿಗಳು ಖಾಸಗಿ ಅಂಬಿಲನ್ಸ್ ಮಾಡಿಕೊಂಡು ಹುಬ್ಬಳ್ಳಿ ಕೆಎಂಸಿಗೆ ಹೋಗಬೇಕು. ಆದರೆ ಹೃದಯಾಘಾತ ಆದ ವ್ಯಕ್ತಿಯನ್ನು ಹುಬ್ಬಳ್ಳಿಗೂ, ಧಾರವಾಡಕ್ಕೂ, ದಾವಣಗೆರೆಗೆ ಕರೆದುಕೊಂಡು ಹೋಗುವಷ್ಟರಲ್ಲಿಯೇ ಕೆಲವು ರೋಗಿಗಳು ಶಿವನಪಾದ ಸೇರಿರುತ್ತಾನೆ. ಉಳಿದವರು ಅಲ್ಲಿ ಮತ್ತೆ ಖರ್ಚು ಮಾಡಿಕೊಂಡಿ ಬರಬೇಕು. ಹಾಗಾಗಿ ಇಲ್ಲಿಗೆ ತಜ್ಞ ವೈದ್ಯರನ್ನು ನೇಮಿಸಿದರೆ ಇಲ್ಲಿನ ಸಾರ್ವಜನಿಕರಿಗೆ ಸಹಾಯವಾಗಲಿದೆ”
ಈ ಕುರಿತಂತೆ ಮಾತನಾಡಿದ ಹಾವೇರಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಆರ್. ಹಾವನೂರು, ’ಹೃದಯಕ್ಕೆ ಸಂಬಂಧಿಸಿದ ಆರಂಭಿಕ ಸಮಸ್ಯೆಗಳನ್ನು ನಿಭಾಯಿಸಲು ಫಿಸಿಶಿಯನ್ಸ್ ಇದ್ದಾರೆ. ಆದರೆ, ಗಂಭೀರ ಸ್ವರೂಪದ ಹೃದಯದ ರೋಗಗಳಿದ್ದರೆ ಧಾರವಾಡದ ಖಾಸಗಿ ಆಸ್ಪತ್ರೆ ಜೊತೆ ಒಪ್ಪಂದದ ಮೇರೆಗೆ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗುತ್ತದೆ’ ಎನ್ನುತ್ತಾರೆ.
“ಜಿಲ್ಲಾ ಆಸ್ಪತ್ರೆಯಲ್ಲಿ ದಿನನಿತ್ಯ ಇಸಿಜಿ ತಪಾಸಣೆ ಮಾಡಿಸುತ್ತಾರೆ. ಆದರೆ ಕಳೆದ ೨ ತಿಂಗಳಿನಿಂದ, ಮೇ ತಿಂಗಳಲ್ಲಿ ೧,೧೭೨ ಜನ ಇಸಿಜಿ ಮಾಡಿಸಿಕೊಂಡಿದ್ದಾರೆ. ಜೂನ್ನಲ್ಲಿ ೧,೨೦೫ ಇಸಿಜಿ ತಪಾಸಣೆಯಾಗಿದೆ. ಹೃದಯಾಘಾತ ಪ್ರಕರಣ ಹೆಚ್ಚಾದ ನಂತರ ಯುವಕರು, ವಯಸ್ಕರು ನಮಗೆ ಹೃದಯ ಸಂಬಂಧಿ ಕಾಯಿಲೆ ಇದೆಯಾ ಎಂಬ ಭಯದಿಂದ ಬಂದು ತಪಾಸಣೆ ಮಾಡಿಸುತ್ತಿದ್ದಾರೆ. ಇದು ನಿಜ. ಮೊದಲು ಕಡಿಮೆ ಇತ್ತು. ಆದರೆ ಪೋಸ್ಟ್ ಕೋವಿಡ್ ನಂತರ ಸ್ವಲ್ಪ ಹೆಚ್ಚಾಗಿದೆ. ಕಾರಣ ಜನರಿಗೆ ಅರಿವು ಹೆಚ್ಚಾಗಿದೆ. ಸಣ್ಣ ಗ್ಯಾಸ್ಟ್ರಿಕ್ ಬಂದರೂ ಬಂದು ತಪಾಸಣೆ ಮಾಡಿಸಿಕೊಳ್ಳುವುದರಿಂದ ಅವರ ಭಯ ಹೋಗುತ್ತದೆ. ಹಾಗಾಗಿ ಜನ ಹೆಚ್ಚಾಗಿ ಬರುತ್ತಿದ್ದಾರೆ. ಅಂದಾಜು ಕಳೆದ ವಾರದಿಂದ ೩೦೦ ಜನ ತಪಾಸಣೆ ಮಾಡಿಸಿದ್ದಾರೆ ಎನ್ನುತ್ತಾರೆ. ಡಾ. ಪಿ.ಆರ್. ಹಾವನೂರು.
ಈ ಬಗ್ಗೆ ಜನಪ್ರತಿನಿಧಿಗಳು ಮೊದಲ ಆದ್ಯತೆಯಾಗಿ ಗಮನ ಹರಿಸಿ ಜಿಲ್ಲಾ ಆಸ್ಪತ್ರೆಗೆ ತ್ವರೀತವಾಗಿ ಹೃದಯಕ್ಕೆ ಸಂಬಂಧಪಟ್ಟ ತಜ್ಞ ವೈದ್ಯರನ್ನು ನೇಮಿಸಬೇಕು. ಜೊತೆಗೆ ಹೃದಯ ತಪಾಸಣೆ ಸೇರಿದಂತೆ ಅಗತ್ಯ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ವಿಭಾಗವನ್ನು ಆರಂಭಿಸುವ ನಿಟ್ಟಿನಲ್ಲಿ ಆಲೋಚಿಸಬೇಕೆನ್ನುವುದು ಹೃದಯವಂತ ಜನರ ಆಗ್ರಹವಾಗಿದೆ.