ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನಹಾವೇರಿ:ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಗಣ್ಯರನ್ನು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಇಲ್ಲಿನ ನಾಗೇಂದ್ರನಮಟ್ಟಿಯ ಗಜಾನನ ಮಿತ್ರ ಮಂಡಳಿ ಹಾಗೂ ವೀರೇಶ್ ಹ್ಯಾಡ್ಲ ಬಳಗದಿಂದ ಸನ್ಮಾನಿಸಿ, ಗೌರವಿಸಲಾಯಿತು.ಸಮಾಜದಲ್ಲಿ ಯಾವುದೇ ವ್ಯಕ್ತಿ ಮರಣ ಹೊಂದಿದಾಗ , ಶವವನ್ನು ಮನೆಯವರೆ ಮುಟ್ಟಲು ಹಿಂಜರಿಯುವ ಈ ಕಾಲಘಟ್ಟದಲ್ಲಿ ಯಾವುದೇ ಹಿಂಜರಿಯಿಲ್ಲದೇಮುಖ ಮುರಿಯದೇ, ಅತ್ಯಂತ ಶ್ರದ್ಧೆಯಿಂದ ಶವ ಸುಚಿತ್ವಗೊಳಿಸಿ ಅಂತಿಮ ಸಂಸ್ಕಾರ ನೆರವೇರಿಸುವ ನಾಗೇಂದ್ರನಮಟ್ಟಿಯ ಚನ್ನಬಸಪ್ಪ ದೊಡ್ಡತಳವಾರ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ನಿರಂತರವಾಗಿ ಪೋಸ್ಟ್ ಮಾರ್ಟಂ (ಶವ ಪರೀಕ್ಷೆ) ಕಾಯಕದಲ್ಲಿ ತೊಡಗಿಸಿಕೊಂಡಿರುವ ರವಿ ಕೊಂಡಿ, ಶಿವಕುಮಾರ್ ತಿರುಪತಿ ಮತ್ತು ಮಹ್ಮದ್ ಯುಸೂಫ್ ಪಠಾಣ್ ಅವರನ್ನು ಗಜಾನನ ಮಿತ್ರ ಮಂಡಳಿ ಹಾಗೂ ಸಾಮಾಜಿಕ ಕಾರ್ಯಕರ್ತ ವೀರೇಶ್ ಹ್ಯಾಡ್ಲ ಮತ್ತು ಬಳಗದವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.ನಗರದಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಸಮಾಜದಲ್ಲಿ ಹಲವರು ಗುರುತಿಸದೇ ಇರುವಂತಹ, ಸಮಾಜದಲ್ಲಿ ನಿಸ್ವಾರ್ಥವಾಗಿ ಸಲ್ಲಿಸುತ್ತಿರುವಮತ್ತು ನಿಸ್ಪೃಹತೆಯಿಂದಸೇವೆಯನ್ನು ಸಲ್ಲಿಸುತ್ತಿರುವ ಸೇವಾ ದುರಂಧರರಿಗೆ,ಯೋಧರಂತಹ ಕಾಯಕಯೋಗಿಗಳ ಸೇವೆಯನ್ನು ಸ್ಮರಿಸಿ ಸನ್ಮಾನಿಸಿದ್ದು ಮಾದರಿಯ ಕಾರ್ಯಕ್ರಮ ಎನಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ್ ಹ್ಯಾಡ್ಲ ಹಾಗೂ ಗಜಾನನ ಮಿತ್ರ ಮಂಡಳಿಯ ಪದಾಧಿಕಾರಿಗಳು, “ಸಾವಿನ ಭಯದ ನಡುವೆಯೂ ಸಮಾಜದ ಹಿತಕ್ಕಾಗಿ ಹಾಗೂ ಮೃತರ ಅಂತಿಮ ಸಂಸ್ಕಾರಕ್ಕೆ ಗೌರವ ತಂದುಕೊಡುವಲ್ಲಿ ಇವರ ಪಾತ್ರ ಹಿರಿದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಾವೇರಿ ನಗರದಲ್ಲಿ ಸೇವೆ ಸಲ್ಲಿಸುತ್ತಿರುವ ಚನ್ನಬಸಪ್ಪ ದೊಡ್ಡತಳವಾರ ಮತ್ತು ಜಿಲ್ಲಾ ಆಸ್ಪತ್ರೆಯ ಪೋಸ್ಟ್ ಮಾರ್ಟಂ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಪ್ರಶಂಸನೀಯ” ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಗಜಾನನ ಮಿತ್ರ ಮಂಡಳಿಯ ಸದಸ್ಯರಾದ ಚಿಕ್ಕಪ್ಪ ದೊಡ್ಡತಳವಾರ, ಮಂಜುನಾಥ ಹರಪ್ಪನಳ್ಳಿ, ಅನಿಲ ಮುದ್ದಿ, ಬಸವಂತ ಪೂಜಾರ, ಸುನಿಲ್ ತೇರದಹಳ್ಳಿ, ಹರೀಶ್ ಜಾಗಿದಾರ, ಮಾರುತಿ ಕೊಂಡೆಮ್ಮನವರ, ಗುಡ್ಡಪ್ಪ ಡಿಳ್ಳೆಪ್ಪನವರ, ವಿನಾಯಕ ಗುತ್ತಲ್, ಸಾಧಿಕ್ ಅಗಡಿ, ಜಗದೀಶ್ ಸಾಲಿಮಠ, ಬಸವರಾಜ ಬಜ್ಜನಾಯ್ಕ್, ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು, ಸನ್ಮಾನಿತರ ಸೇವೆಯನ್ನು ಶ್ಲಾಘಿಸಿದರು.
ಹಾವೇರಿಯ ಸೇವಾ ದುರಂಧರರಿಗೆ ಗಜಾನನ ಮಿತ್ರ ಮಂಡಳಿ – ವೀರೇಶ್ ಹ್ಯಾಡ್ಲ ಬಳಗದಿಂದ ಗೌರವ ಸನ್ಮಾನ
Date:


