’ಹಾವೇರ‍್ಯಾಗ ಎಲ್ಲೇ ಕಲ್ಲ ಒಗ್ದರು ಆ ಕಲ್ಲು ಎಗ್ಗ್‌ರೈಸ್ ಅಂಗಡಿಮ್ಯಾಗ ಬಿಳ್ತಾವು’…….!

Date:

ಹಾವೇರ‍್ಯಾಗ ಎಲ್ಲೇ ಕಲ್ಲ ಒಗ್ದರು ಆ ಕಲ್ಲು ಎಗ್ಗ್‌ರೈಸ್ ಅಂಗಡಿಮ್ಯಾಗ ಬಿಳ್ತಾವು’…….!
ಏನೇನೋ ಆಸೆ!
ಮಸಾಲಿ ದ್ವಾಸೆ
ನಾಷ್ಟಕಾ ಇಡ್ಲಿ-ವಡಾ
ಊಟಕ್ಕ ಮಸಾಲವಡಾ
ಸಂಜಿ ಫಳಾರಕ್ಕ ಎಗ್ಗ್‌ರೈಸ್,
ಒಗ್ಗರಣಿ ಮಂಡಕ್ಕಿ, ಮ್ಯಾಲಾ ಮಿರ್ಚಿ-ಮಂಡಕ್ಕಿ
ರಾತ್ರಿ ಊಟಕ್ಕ ಚಿತ್ರಾನ್ನ, ಮೊಸರನ್ನ, ಕಲಸಾನ್ನ, ಪೋಳಿಯೋಗರೆ,
ಇನ್ನೂ ಏನೇನೋಬೇಕೆಂದು ಬಯಸುತಿದೆ ತನು-ಮನ…….

ಅಲ್ಲಲೇ, ಬಸ್ಯಾ “ದಿಲ್ಲಿಗೆ ಹೋಗಿ ಸಾಸ್ವಿ ಎಣ್ಣಿ ಕೂಳತಿಂದ ಅದು ಮೈಗೆ ಹತ್ತಲಿಲ್ಲದಕ ಇಲ್ಲೆ ದ್ವಾಸಿ, ಎಗ್ಗ್‌ರೈಸ್, ಮಿರ್ಚಿ-ಮಂಡಕ್ಕಿ ಅಂತ್ ಹಾಡ ಹೇಳಾಕ ಹೊಂಟಿ ಮಗ್ನ”……
ಹಂಗ್ ಅಲ್ರಿ ಗೌಡ್ರ, ಹಿಂದ್ ಒಂದು ಗಾದಿಮಾತು ಇತ್ತು, ಅದೇನು ಅಂದ್ರ, “ಧಾರವಾಡದಾಗ ಎಲ್ಲೇ ಕಲ್ಲು ಒಗ್ದರು, ಆ ಕಲ್ಲು ಸಾಹಿತಿಗಳ ಮನಿಮ್ಯಾಗ ಬಿಳ್ತಾವು ಅಂತ್”. ಈ ಬಗ್ಗೆ ನಮ್ಮ ಗುರುಗಳು ದಿ. ಚಂಪಾ ಆಗಾಗ ಭಾಷಣಾ ಮಾಡೋವೇಳ್ಯಾದಾಗ “ಧಾರವಾಡದನ ಕೆಲವು ಸಾಹಿತಿಗಳು ಕಲ್ಲ ಹೊಡ್ಸೆಗೊಳ್ಳಂತವ್ರು ಸಹ ಅಧಾರ” ಅಂತಿದ್ರು? ಅದೇನ ಇರ‍್ಲೀ, ಆದ್ರ “ನಮ್ಮ ಹಾವೇರ‍್ಯಾಗ ಸಾಹಿತಿಗಳ ಸಂಖ್ಯಾ ಏನು ಕಮ್ಮಿ ಇಲ್ರೀ?. ಸಂಖ್ಯಾದಾಗ ತುಸು ಹೆಚ್ಚ ಅದಾರ”!. ಯಾಕಂದ್ರ ಪೇಪರನ್ಯಾಗ ಆವಾಗ, ಆವಾಗ ಸಾಹಿತಿಗಳ ಹೆಸರು ಪ್ರಕಟಾಗ್ತಿರ‍್ತಾವು. ಹಂಗ್ ನೋಡಿದ್ರ “ಹೆಚ್ಚಿನ ಸಂಖ್ಯಾದಾಗ ಸಾಹಿತಿಗಳು ಹಾವೇರ‍್ಯಾಗ ಅದಾರ. ಆದ್ರ ಇವ್ರು ಮನಿಮ್ಯಾಗ್ ಕಲ್ಲ ಬಿಳ್ತಾವೇನು? ಅಂತ್ ಮಾತ್ರ ಕೇಳಬ್ಯಾಡ್ರಿ”. ಆದ್ರ….”ಹಾವೇರ‍್ಯಾಗ ಎಲ್ಲೇ ಕಲ್ಲ ಒಗ್ದರು ಆ ಕಲ್ಲು ಎಗ್ಗ್‌ರೈಸ್ ಅಂಗಡಿಮ್ಯಾಗ ಬಿಳ್ತಾವು”.
ಅಲ್ಲಲೇ ಮಾತು ತಿರುಗಿಸಿಬಿಟ್ಟಿಲ್ಲೋ?. ಅತ್ಲಾಗ್ ಅಮೇರಿಕಾ ಅಂತಿ, ಇತ್ಲಾಗ್ ಕರ್ನಾಟಕಾ ಅಂತಿ, ನಿನ್ನ ಹಕಿಕತ್ತು ಗೊತ್ತಾಗವಲ್ದು? “ಸಾಹಿತಿಗಳ ಮನಿಮ್ಯಾಗ ಯಾಕ್ ಕಲ್ಲ ಬಿಳ್ಳಾವು, ನಿನ್ನ ಮಾತು ಒಂದಕ್ಕ ಒಂದು ತಾಳ ಆಗವಲ್ಲವು. ಹಾವೇರ‍್ಯಾಗ್ ಸಾಹಿತಿಗಳು ಇದ್ರ ಎಷ್ಟು? ಬಿಟ್ಟರೆಷ್ಟು? ಅದನ್ ಕಟಿಗೊಂಡ್ ನಮಗೇನಾಗಬೇಕ್ಪಾ?.
ಹಂಗ್ ಅಂದ್ರ ಹೆಂಗ್ಯ ಗೌಡ್ರ, ಈ “ಸಾಹಿತಿಗಳೊಳ್ಗ ಗಟ್ಟಿಗಾಳು ಎಷ್ಟು? ಜೊಳ್ಳು ಎಷ್ಟು?, ಪುಸ್ತಕ ಬರದವ್ರು ಎಷ್ಟು? ಬರಿಲಾದವ್ರು ಎಷ್ಟು? “ಸ್ವಾಗತ ಮಾಡೋರು, ನಿರೂಪಣೆ ಮಾಡೋರು, ವಂದಿಸುವವರು ಸಹ ತಮ್ಮನ್ನು ತಾವು ಉದ್ದಾಮ ಸಾಹಿತಿ ಅಂತ, ಇನ್ನ ಕೆಲವರೂ ಮುದ್ದಾಮ ಸಾಹಿತಿ ಅಂತ ಕರೆದುಕೊಳ್ತಾರ್”!
ಈ ಬಗ್ಗೆ ನಿನ್ಗ್ ಹೆಚ್ಚಿನ ಮಾಹಿತಿ ಬ್ಗ್ಕಂದ್ರ “ಹಾವೇರಿಯ ೭೫ ವರ್ಷ ತುಂಬಿ ೭೬ಕ್ಕ ಕಾಲಿಟ್ಟಿರೋ ಹಿರಿಯ ಸಾಹಿತಿ ಸತೀಶಣ್ಣ ಕುಲಕರ್ಣಿ, ೮೦ ದಾಟಿರೋ ಕೊರಗಲ್ಲ ವಿರುಪಾಕ್ಷಪ್ಪನವರು, ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾ ಅಧ್ಯಕ್ಷ ಯಲ್ಲಪ್ಪಣ್ಣ ಆಲದಕಟ್ಟಿ ಅಂತವ್ರನ್ನ ಕೇಳಬೇಕು”. ಅವ್ರು ಕರೆ, ಕರೆ ಸಂಗತಿ ಏನು? ಅನ್ನೋದನ್ನ ತೆರದಿಡಬೇಕು? ಅದೇನರ ಇರ‍್ಲಿ, ಮೊದ್ಲ “ಹಾವೇರ‍್ಯಾಗ ಎಲ್ಲೇ ಕಲ್ಲ ಒಗ್ದರು ಆ ಕಲ್ಲು ಎಗ್ಗ್‌ರೈಸ್ ಅಂಗಡಿಮ್ಯಾಗ ಬಿಳ್ತಾವು”…….!ಅನ್ನೋ ವಿಷಯದ ಬಗ್ಗೆ ಹೇಳೋ….
ಹೌದ್ರೀ, ಹೌದು…. “ಹಾವೇರ‍್ಯಾಗ ಮುಖ್ಯರಸ್ತೆದಾಗ ನೀವು ಎಡಕ್ಕರ ನೋಡ್ರೀ, ಬಲಕ್ಕರ ನೋಡ್ರೀ, ಗುಕ್ಕ ಅಂತ ನಿಮ್ಗ ನಾನಾ ನಮೂನಿ ನಾಮಫಲಕ ಇರೋ ಎಗ್ಗ್ ರೈಸ್ ಅಂಗಡಿ ಕಣ್ತಾವು, ಇವ್ಗುಳ ಒಲಿಗಳು ಮಟ, ಮಟ ಮಧ್ಯಾಹ್ನದಿಂದ ಬೆಂಕಿ ಹಚಿಗೊಂಡ ಉರ‍್ಯಾಕ ಹತ್ತಿದ್ರ ಆರೋದು ರಾತ್ರಿ ಹತ್ತುವರೆಗೆ”!, ಅಲ್ಲಿ ಮಟಾ “ಮಣಗಟ್ಟಲೆ ಅನ್ನಕ್ಕ ಹಂಗ್ ತತ್ತಿ ಒಡ್ದ್, ಕಾದಿರೋ ಬಾಳ್ಯಾಗ ಎಣ್ಣಿ ಸುರೇದೈತಿ, ಎಂತೆಂಥಾದ್ದೋ ಮಸಾಲಿ ಮಿಕ್ಸ್ ಮಾಡೋದೈತಿ, ಬಾಯಿಗೆ ರುಚಿ ಬರ‍್ಲಿ ಅಂತ್ ಹೆಚ್ಚಿನ ರುಚಿ ಬರೋ ಪುಡಿ ಹೊಡ್ದ್ ಪ್ಲೇಟಿಗೆ ೮೦, ಅರ್ಧಾ ಪ್ಲೇಟಿಗೆ ೪೦ ರುಪಾಯಿದಂಗ್ ಮಾರೋ ಅಂಗಡಿಗಳು ಒಂದ್….. ಎರ‍್ಡ್……… ಬರೋಬ್ಬರಿ ೧೨೦ ಎಗ್ಗ್ ರೈಸ್ ಅಂಗಡಿ ಹಾವೇರ‍್ಯಾಗ ಅದಾವು”. “ಇವೂ ಎಷ್ಟೋ ಜನ್ರ ಹಸಿದ ಹೊಟ್ಟಿ ತುಂಬಸ್ತಾವು, ಎಷ್ಟೋ ಜನ್ರು ಎಗ್ಗ್‌ರೈಸ್ ಅಂಗಡಿ ಮಾಡ್ತಾನ ತಮ್ಮ ಬದುಕು ಕಟೆಗೆಂಡಾರ. ಮನಿ-ಮಾರು ಅಂತ ಕಟೆಗೊಂಡು ಉತ್ತಮ ಜೀವ್ನಾಕ್ಕ ದಾರಿ ಆಗ್ಯಾವು ನೋಡ್ರಿ ಎಗ್ಗ್ ರೈಸ್ ಅಂಗಡಿ”.
ಹೌದ್ಪಾ, ಹೌದು….. “ಕೆಲ್ವು ಅಂಗಡ್ಯಾಗ್ ಟೆಸ್ಟಿಂಗ್ ಪೌಡರ್ ಹೆಚ್ಗಿ ಹಾಕಾತಾರ ಅಂತ್ ಕಂಪ್ಲೆಂಟ್ ಅದಾವು, ಈ ಪೌಡರ್ ಮಿಕ್ಸ್ ಮಾಡಿದ ಎಗ್ಗ್ ರ‍್ಯಸ್ ತಿಂದು ಕೆಲವು ಮಂದಿ ರೋಗಾಹಚಿಗೆಂಡ್ಯಾರ ಅಂತ ದೂರ ಅದಾವಲ್ಲೋ”?
ಹೌದ್ರಿ, ಹೌದು……. “ನಾ ಹೇಳೋದನ್ನ ಕೇಳಿದ್ರ ಸಾಯೋಮಟಾ ನೀವು ಎಗ್ಗ್ ರೈಸ್ ಅಂಗಡಿಕಡೆಗೆ ತಿರುಗಿ ನೋಡೋದಿಲ್ಲ ನೋಡ್ರಿ”?. ಅದ್ರಾಗೂ ಈ ರಸ್ತೆ ಅಜು-ಬಾಜೂ ಇರೋ “ಎಗ್ಗ್ ರೈಸ್ ಅಂಗಡಿಗಳ ಅನ್ನಾ ಕರೆ ಬಾಳಿಗೆ ದಾರ‍್ಯಾಗ ಓಡಾಡೋ ವಾಹನಗಳಿಂದ ಹಾರ‍್ಯಾಡೋ ದೂಳು ಹಾರಿಬಂದ್ ಕುಂದ್ರತೈತಿ”. “ಅಂಗಡಿ ಆಜು-ಬಾಜು ನಾಯಿ-ಹಂದಿ ಹಂಗ್ ಓಡ್ಯಾಡ್ತಾವು, ನೋಣಾ-ಸೊಳ್ಳಿ, ನೋರ್ಜು, ಇಲಿ, ಹೆಗ್ಣಾ, ಹಲ್ಲಿ, ಜೊಂಡಗ್ಯಾ ಹಿಂಗ್ ಕಣ್ಣಿಗೆ ಕಾಣ್ಸವೋ, ಕಣ್ಣಿಗೆ ಕಾಣ್ಸಿದಿರೋ ಜೀವುಗಳು ಹಂಗ್ ಓಡಾಡತಿರ‍್ತಾವು”? “ಒಮ್ಮೆಮ್ಮೆ ಅವು ಸಹ ಎಗ್ಗ್‌ರೈಸ್‌ನ್ಯಾಗ ಮಿಕ್ಸ್ ಆಗಿ ಮನುಷಾರ ಹೊಟ್ಟಿ ಸೇರ‍್ತಾವು”!, “ಇಂತಾದನ್ನ ಕರಂ, ಕುರುಂ ಅಂತ್ ತಿಂದ ನಮ್ಮ ಅಣ್ಣತಮ್ಮಂದಿರು ಬಾಯಿ ಚಪ್ಪರಿಸತಾರ”!., “ಎಗ್ಗ್ ರೈಸ್ ಜೊತಿಗೆ ಅವ್ರು ನಿಧಾನಕ್ಕ ವಿಷಾ ತಿನ್ನಾಕ ಹತ್ತೇವಿ ಅನ್ನೋದನ್ನ ಮರ‍್ತ ಬಿಡ್ತಾರ”!, ಇವ್ರ ಆರೋಗ್ಯ ಕೆಟ್ಟು ದವಾಖಾನಿಗೆ ಹೋದಮ್ಯಾಕ ಗೊತ್ತಾಗೋದು….. “ಇವರಿಗೆ ಬಂದಿರೋ ಪಿಡಗು ಇವ್ರು ತಿಂದಿರೋ ಎಗ್ಗ್ ರೈಸ್ ನಿಂದ ಅಂತ”!.
ಹೌದು, “ಈ ಆರೋಗ್ಯ ಇಲಾಖೆಯವ್ರು, ಅನಾರೋಗ್ಯ ಇಲಾಖೆಯವ್ರು, ನಗರಸಭೆಯ ಆರೋಗ್ಯ ವಿಭಾಗದವ್ರು ಏನ್ ಮಾಡ್ತಾರ”…?
ಅವ್ರೇನು ಮಾಡ್ತಾರಿ, “ಕಾಟಾಚಾರಕ್ಕ ಎಗ್ಗ್ ರೈಸ್ ಅಂಗಡಿಗೆ ಭೇಟ್ಟಿ ಕೋಡ್ತಾರ, ಸರಿ ಇಲ್ಲದ ಅಂಗಡಿಗಳಿಗೆ ನೋಟಿಸ್ ಕೊಟ್ಟು ಸರಿ ಮಾಡಿಕೊಳ್ರಿ” ಅಂತ ನೋಟಿಸ್ ಕೊಡ್ತಾರ……! ತಾವು ಎರಡಪ್ಲೇಟ್ ಎಗ್ಗ್‌ರೈಸ್ ಹೊಡ್ದ ಹೊಕ್ಕಾರ”? “ಮೊನ್ನೆ ದೊಡ್ಡ ಹೋಟೆಲ್ಲನ್ಯಾಗ್ ಗೋಬಿ ಮಂಚೂರಿ ಒಳ್ಗ ಜೋಂಡಿಗಾ ಬಂದಿತ್ತು, ದೊಡ್ಡ, ದೊಡ್ಡ ನಾನ್‌ವೆಜ್ ಹೋಟೆಲ್‌ಗಳು ವೆಜ್ ಓಟೆಲ್ ಆಗೋ ಹೊತ್ತಿನ್ಯಾಗ ಪುಟ್‌ಫಾತ್ ಎಗ್ಗ್ ರೈಸ್ ಅಂಗಡಿಗಳನ್ನ ಯಾರ್ ಕೇಳ್ತಾರಿ”……?
ಹೌದಾ, ಆತ ಬಿಡೋ ಜನಾನು ಎಚ್ಚರಾಗಬೇಕು, “ಎಗ್ಗ್‌ರೈಸ್ ಅಂಗಡಿಯವ್ರು ಸ್ವಚ್ಛತಾಕ್ಕ ಮೊದ್ಲ್ ಆದ್ಯತಾ ಕೊಡಬೇಕು ನೋಡ್”. ಹೌದು ಹೆಂಗ್ ನಡದೈತಪಾ ಗಣೆಶನಹಬ್ಬ?
ಹೆಂಗ್ ನಡಿಬೇಕ್ರೀ ಗೌಡ್ರ, ಹೋದವರ್ಷ ಹೆಂಗ್ ನಡಿದಿತ್ತೋ ಹಂಗ್ ನಡದೈತಿ, “ಹಾವೇರ‍್ಯಾಗ ಗಣೇಶನ ಹಬ್ಬಕ್ಕ ಡಿಜೆ ಹಚ್ಚಕಾ ಪರವಾನ್ಗಿ ಕೋಡ್ರಿ ಅಂತ್ ಡಿಸಿ-ಎಸ್‌ಪಿ ಸಾಹೇಬ್ರಿಗೆ ಕೆಲ್ವು ಮಂದಿ ಅರ್ಜಿಕೊಟ್ಟ ಬಂದಾರ, ಆದ್ರ ಡಿಸಿ-ಎಸ್‌ಪಿ ಅವ್ರು ಡಿಜೆ ಹಚ್ಚುವದನ್ನ ನಿಷೇಧಾಮಾಡಿ ಆದೇಶ ಹೊಂಡಿಸಾರ ನೋಡ್ರಿ”.
ಹೌದು ಬಿಡೋ, ಅವ್ರು ಆದೇಶ ಮಾಡಿದ್ದೂ ಬರೋಬ್ಬರಿ ಐತಿ, “ಮಕುಳಿ, ಮೂಗು, ಕಿವಿ, ಬಾಯಿ, ನೆತ್ತಿ ಹರಿಯೋಹಂಗ್ ಡಿಜೆ ಒದರ‍್ಸಿದ್ರ ಹಬ್ಬಾ ಅಂತಾರೇನು”? “ಹೋದ ವರ್ಷ ಡಿಜೆ ರಾಕ್ಸಸನ ಸೌಂqನಿಂದ ಎಷ್ಟೋ ಮಂದಿಗೆ ಗುಂಡಿಸೆಲಿ ರೋಗ ಬಂದಿತ್ತು,” ಕೆಲವು ಮಂದಿವು ಕಿವಿ ಹರ‍್ದಹೋಗಾವು, ಸಣ್ಣ ಸಣ್ಣ ಮಕ್ಕಳಿಗೆ ಹೊಟ್ಟಿಬ್ಯಾನಿ, ತಲಿಬ್ಯಾನಿ ಸೇರಿದಂಗ್ ನಾನಾ ನಮೂನಿ ರೋಗಾ ಬಂದಾವು. ಅಂತ್ ಪೇಪರ್‌ನ್ಯಾಗ ಸುದ್ದಿ ಬಂದಿತ್ತು. ಒಬ್ಬ ಎಸ್‌ಐ ಅವ್ರುದ್ದು ಕಿವಿ ತಮಟಿ ಟಮಾಟಿ ತರಾ ಹರ‍್ದ ಹೋಗಿತ್ತಂತ್. ಮಕ್ಕಳು, ವಯೋವೃದ್ಧರು ಈಡಿಜೆ ಸೌಂಡ್‌ನಿಂದ ಬಾಳಾ ತೊಂದ್ರಿ ಅನುಭವಸ್ತಾರ. ನೋಡು!.
“ಅಲ್ಲೋ ಡಿಜೆ ಹಚ್ಚಿ ಕುಣ್ಯಾಕ ಇದೇನ್ ಕಾಮನ ಹಬ್ಬನೂ”? “ಗಣಪತಿ ಹಬ್ಬಾನ ಶಾಂತಿ ಮತ್ತ ಸೌಹಾರ್ದತೆಯಿಂದ ಆಚರಿಸಬೇಕು”.
ಹೌದು, ನೀವು ಹಂಗ್ ಅಂತೀರಿ,….. “ಆದ್ರ ನಮ್ಮ ಕೆಲ್ವು ಮಂದಿಗಿ ಈ ಹಬ್ಬಾ ಬಂದ್ವು ಅಂದ್ರ ಸಾಕು ಇವ್ರಿಗೆ ಸುಗ್ಗಿ ಇದ್ದಂಗ್, ಹಬ್ಬದ ಹೆಸರಿನ್ಯಾಗ್ ಶಾಂತಿ -ಸುವ್ಯಸ್ಥೆ ಕೆಡಿಸಿ ಬೆಂಕಿ ಹಚ್ಚೋದು, ಆ ಬೆಂಕ್ಯಾಗ ಕಾಯಿಸೋದು ಇವ್ರ ಕೆಲ್ಸ್ ಆಗೇತಿ”. “ದೊಡ್ಡವ್ರು ಮಕ್ಳು ಬೆಚ್ಚಗ್ ಮನ್ಯಾಗ ಇರ‍್ತಾರ್, ಬಡವ್ರು ಮಕ್ಕಳು ಕೈಯಾಗ ಬಾವುಟಾ ಹಿಡಿಕೊಂಡ್ ರಸ್ತೆದಾಗ ಓಡಾತ್ತಾರ.” ಇನ್ನ “ಡಿಜೆ ಇಲ್ಲಾಂದ್ರ ನಮ್ಮ ಗಣಪ್ಪ ಮುಂದಕ್ಕ ಹೋಗೋದಿಲ್ಲ ಅಂತ್ ಹಠ ಹಿಡ್ದು ರಸ್ತೆದಾಗ ನಿಂತ್ ಬಿಡ್ತಾನ ನೋಡ್ರಿ”.
ಅಲ್ಲೋ “ಹಬ್ಬದ ಹೆಸ್ರನ್ಯಾಗ್ ಶಾಂತಿ-ಸುವ್ಯವಸ್ಥೆ ಕದಡೋದು ಸರಿಯಲ್ಲ ನೋಡ್”. ಈ ದೇಶ ಯಾರದ್ದು ? ಇದನ್ನು ಯಾರು ರಕ್ಷಿಸಬೇಕು ? ಯಾರು ನಿಜವಾದ ಭಾರತೀಯರು”?…
ಅದೇಲ್ಲಾ ನನ್ಗ ಗೊತ್ತಿಲ್ರಿ ಗೌಡ್ರ, ನೀವ ಬಿಡ್ಸಿ ಹೇಳಬೇಕು.!
ನೋಡೋ “ಯಾರು ದೇಶದ ಶಾಂತಿ ಮತ್ತು ಆ ಮೂಲಕ ಅಭಿವೃದ್ಧಿಗಾಗಿ ಸೋಲುತ್ತಾರೋ, ಸಹಿಸುತ್ತಾರೋ, ಹೊಂದಾಣಿಕೆ ಮಾಡಿಕೊಳ್ಳುತ್ತಾರೋ, ಸಮನ್ವಯ ಸಾಧಿಸುತ್ತಾರೋ, ತ್ಯಾಗ ಮಾಡುತ್ತಾರೋ, ಕರುಣೆ ತೋರುತ್ತಾರೋ, ಯಾರು ಕ್ಷಮಿಸುತ್ತಾರೋ ಅವರೇ ನಿಜವಾದ ದೇಶ ಭಕ್ತರು, ಧರ್ಮ ಪರಿಪಾಲಕರು”. “ಯಾರು ಅನಾವಶ್ಯಕವಾಗಿ ಘರ್ಷಣೆಗೆ ಇಳಿಯುತ್ತಾರೋ, ಯಾರು ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಕಂಟಕವಾಗುತ್ತಾರೋ ಅವರು ದೇಶದ್ರೋಹಿಗಳು”. “ಇದ್ರಾಗ್ ಹಿಂದೂ ಮುಸ್ಲಿಂ ಅಂತ್ ಇರುವುದಿಲ್ಲ. ಕೇವಲ ದೇಶ ಪ್ರೇಮಿಗಳು ಮತ್ತು ದೇಶ ವಿರೋಧಿಗಳು ಮಾತ್ರ ಇರ‍್ತಾರ್. ಹಿಂದುಗಳಾಗ್ಲಿ, ಮುಸ್ಲಿಮರಾಗ್ಲಿ ಮೂಲಭೂತವಾದಿಗಳ ಪ್ರಚೋದನೆಗೆ ಒಳಗಾಗಬಾರದು, ಯಾವುದೇ ವಿವಾದಗಳಿಗೆ ಆಸ್ಪದ ಕೊಡ್ದ್ ಈ ಹಬ್ಬದಾಗ ಭಾಗವಹಿಸಬೇಕು. ಯಾರೂ ಸಹ ಯಾರನ್ನೂ ಅನಾವಶ್ಯಕವಾಗಿ ಪ್ರಚೋದಿಸದೇ ಪ್ರೀತಿಯಿಂದ ಈ ಹಬ್ಬದಲ್ಲಿ ಭಾಗವಹಿಸಿ ಹಬ್ಬಾ ಆಚರಿಸಬೇಕು”.
ಹೌದ್ರಿ ಗೌಡ್ರ , ನೀವು ಹೇಳೋದೇನೋ ಬರೋಬ್ಬರಿ ಐತಿ, “ಆದ್ರ ನಮ್ಮಂತ ಖಾಲಿತಲಿಗೆ ಈವಿ ಚಾರಗಳು ಹಂಗ್ ಲಗೂನ ಸೇರೋದಿಲ್ರಿ”?…….
ನೋಡ್ಪಾ ಬಸ್ಯಾ, “ಇಲ್ಲಿ ಎಷ್ಟೋ ಜನ ಊಟಕ್ಕೂ ಗತಿಯಿಲ್ದ್ ಇಲಿ, ಹಾವು, ಬೆಕ್ಕು, ಜಿರಲೆ, ಗೆಡ್ಡೆ ಗೆಣಸು ತಿಂದು ಬದಕ್ತಾರ್”. ಇರಾಕ ಮನೆಯಿಲ್ದ್ ರಸ್ತೆ, ಬೀದಿ, ಬಸ್-ರೈಲ್ವೆ ನಿಲ್ದಾಣದಾಗ್ ಬಿಸಿಲಿಗೆ ಬೆಂದು, ಮಳ್ಯಾಗ್ ನೆಂದು, ಚಳಿಗೆ ನಡುಗತಾ ಮಲಗತಾರ್”…..”ಒಳ್ಳೆಯವರು ಕಷ್ಟ ನೋವುಗಳಿಂದಲೂ, ದುಷ್ಟ ಭ್ರಷ್ಟರು ಆರಾಮಆಗಿ ಅದಾರ್” ನೋಡ್.
ಸಾಕಾತಾ ಬಿಡ್ರಿ ಗೌಡ್ರ,……….. ಎಷ್ಟ್ ಹೇಳಿದ್ರು “ನಮ್ಮ ಕೆಲವು ಮಂದಿಗೆ ಕೋಣನಮುಂದ್ ಕಿನ್ನೂರಿ ಬಾರ‍್ಸಿದಂಗ್”. ನೋಡಿರಿಲ್ಲ, ಭಾನಮ್ಮನ ವಿವಾದ, “ದಸ್ರಾ ಹಬ್ಬಕ್ಕ್ ಆ ಎಮ್ಮನ್ ನಮ್ಮ ಸಿಎಂ ಸಾಹೇಬ್ರು ಉದ್ಘಾಟನೆಗೆ ಕರದಾರ, ಇದನ್ನು ಕೆಲವು ಮಂದಿ ವಿವಾದ ಮಾಡ್ಯಾರ್. ಇದ್ರಾಗ ವಿವಾದ ಮಾಡೋವಂತಾದ್ದು ಏನೈತಿ? ಆ ಎಮ್ಮನ ಸಾಹಿತ್ಯಕ್ಕ ಅಂದೇಂತಾದ್ದೋ ಬೂಕರೋ-ಪಾಕರೋ ಪ್ರಶಸ್ತಿ ದಂದೈತಿ, ಆ ಭಾನಮ್ಮನ್ ಸಾಹಿತ್ಯಾನ ವಿಶ್ವ ಕೊಂಡಾಡೇತಿ, ಈ ಎಮ್ಮಗ್ ನಮ್ಮ ದೇಶದ ದೊಡ್ಡ ದೊಡ್ಡರಿಗೆ ಶುಭಹಾರೈಸಾಕು ಸತಗಿ ಈಎಮ್ಮನ ಜಾತಿ ಅಡ್ಡಾ ಬಂದೈತಿ”?.
ಅಲ್ಲೋ…… “ಯಾರಾದ್ರೂ ದೇವ್ರ ಹತ್ರಾ ನನ್ನ ಇಂತಾದ ಜಾತ್ಯಾಗ ಹುಟ್ಸು ಅಂತ್ ಅರ್ಜಿ ಹಾಕ್ಕೊಂಡು ಹುಟ್ಟತಾರಾ”? ಜಾತಿ ಮ್ಯಾಲ್ ಎಲ್ಲಾನೂ ಅಳ್ಯಾಕ್ ಸಾಧ್ಯ ಐತಾ. ಸಾಧ್ನೆ ನೋಡಿ ಮನುಷಾರ ವ್ಯಕ್ತಿತ್ವಾನ ಅಳಿಬೇಕ್” ನೀ ಏನಂತಿ?
ನಿಮ್ಮ ಮಾತು ಕರೆ ಐತಿ ಗೌಡ್ರ, ನಡ್ರಿ ಮಾತಾಡಿ, ಮಾತಾಡಿ….. ನಾಲಗಿ ಓಣಗೇತಿ, ವಿನಾಯಕ ರೆಸ್ಟೋಂರೆಂಟ್‌ಗೆ ಹೋಗಿ ಚಾಕುಡೇನ್ ನಡ್ರಿ ಎನ್ನುತ್ತಾ ಇಬ್ಬರು ಜಾಗಾ ಕಾಲಿ ಮಾಡಿದರು.

ಹಾವೇರಿಯಾಂವ್
ಮಾಲತೇಶ ಅಂಗೂರ, ಹಾವೇರಿ.

1 COMMENT

  1. ಸರ್ ನಿಮ್ಮ ಬರಹಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಜೊತೆಗೆ ಬಾಯಿ ರುಚಿಗೆ ಎಲ್ಲಿ ನೋಡಿದರಲ್ಲಿ ಎಗ್ ರೈಸ್ ದುಖಾನಗಳು ಕಾಣ್ತಿವೇ ಇದರಲ್ಲಿ ಜನಸಾಮಾನ್ಯರ ಜೀವನದಲ್ಲಿ ಸ್ಲೋ ಪಾಯಿಸನ್ ಅನ್ನೋದು ಮರೆತಂತೆ ಕಣ್ಣುಮುಚ್ಚಿ ಕುಳಿತಿರೋ ಸಂಭಂದ ಪಟ್ಟ ಅಧಿಕಿರಿಗಳಿಗೆ ಈ ನಿಮ್ಮ article ಆದಷ್ಟೂ ಬೇಗ ಗಮನಕ್ಕೆ ಬದಲೀ ಸರ್

    ‌‌ಸೂಪರ್ ಸರ್ ವಿಷಯ ಅದ್ಭುತವಾಗಿದೆ
    ದನ್ಯವಾದಗಳು @ಮಾಲತೇಶ ಅಂಗೂರ ಸರ್

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಗೆ 2 “ಮಕ್ಕಳ ಚಂದಿರ ಪ್ರಶಸ್ತಿ”

ಕಾಡುಮೇಡು ಹಾಗೂ ಬೆರಗು ಕೃತಿಗಳಿಗೆ 2023ನೇ ಸಾಲಿನ ಪ್ರಶಸ್ತಿ ಪ್ರಕಟ ಹಾವೇರಿಗೆ 2...

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ

ಹಾವೇರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಸದೃಢವಾದ ದೇಹಕ್ಕೆ ಸದೃಢವಾದ...