
ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ. ಕಾಯಂ ಗೊಳಿಸಲು ಉಡಚಪ್ಪ ಮಾಳಗಿ ಒತ್ತಾಯ
ಹಾವೇರಿ:ರಾಜ್ಯದಲ್ಲಿ ನಿರಂತರವಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ ಅವರನ್ನು ಕಾಯಂ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ,ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ(ರಿ) ವತಿಯಿಂದ ನೀಡಿದ ರಾಜ್ಯ ಮಟ್ಟದ ಕರುನಾಡ ಹೋರಾಟ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿದ ಪ್ರಯುಕ್ತ ದಿನಗೂಲಿ ನೌಕರರ ಮಹಾಮಂಡಳಿದ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಅನೇಕ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸುಮಾರು ೧೫-೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳಾದ ಡಿ,ಕೆ.ಶಿವಕುಮಾರ ಅವರನ್ನು ದಿನಗೂಲಿ ನೌಕರರನ್ನು ಕಾಯಂ ಮಾಡಿದರೆ ಅವರ ಬದುಕನ್ನು ಉಜ್ವಲ ಮಾಡಿದಂತಾಗುತ್ತಿದೆ. ನಿರಂತರವಾಗಿ ದಿನಗೂಲಿ ನೌಕರರು ಹೋರಾಟ ಮಾಡುತ್ತಾ ಬರುತ್ತಿದ್ದು ಅವರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಮುಂದಿನ ಬಜೆಟ್ ಮಂಡನೆಯಲ್ಲಿ ದಿನಗೂಲಿ ನೌಕರರ ಬೇಡಿಕೆ ಈಡೇರಸಲು ಸರ್ಕಾರ ಮುಂದಾಗಬೇಕಿದೆ. ಕಾರ್ಮಿಕರ ಪರವಾಗಿ ಹಾಗೂ ಶ್ರಮಿಕ ವರ್ಗದವರ ಪರವಾಗಿ ನಿಮ್ಮೊಂದಿಗೆ ಇರಲಿದ್ದೇನೆ. ನಿಮ್ಮ ಹೋರಾಟಕ್ಕೆ ಜಯವಾಗಲಿ.ಪ್ರಶಸ್ತಿ ನೀಡಿದ ಪ್ರಯುಕ್ತ ನನ್ನನ್ನು ಗೌರವಿಸಿದ್ದಕ್ಕಾಗಿ ಧ್ಯವಾದಗಳನ್ನು ಹೇಳುತ್ತೇನೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳಿದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಕೊಂಗಿನವರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಸರ್ಕಾರದ ಯೋಜನೆಗಳು ಸಕಾರಗೊಳ್ಳಲು ಎಲ್ಲಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಶ್ರಮವಿದೆ. ಎಲ್ಲಾ ರೀತಿಯಿಂದಲೂ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ನೂತನ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾವು ಒತ್ತಾಯಿಸುತ್ತೇವೆ.ಉಡಚಪ್ಪ ಮಾಳಗಿ ಅವರು ನಮ್ಮ ಹೋರಾಟಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಅವರಿಗೆ ಮುಂದಿನಮಾನಗಳಲ್ಲಿ ಉನ್ನತ ಸ್ಥಾನ ದೊರೆಯಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸುಭಾಸ ಕ್ಯಾಲಕೊಂಡ, ಶಿವಯ್ಯ ಗಡ್ಡದವರ, ಮಾಹಾಂತೇಶ ಕಮ್ಮಾರ, ಪ್ರವೀಣ ಕ್ಷೀರಸಾಗರ, ಭಾರತಿ ಹಾನಗಲ್ಲ, ಪ್ರಶಾಂತ ಒಕ್ಕಣ್ಣನವರ, ರೇಣುಕಾ ಮುಗದೂರ, ಕವಿತಾ ಕೆಳಗಿನಮನಿ, ಶಿವಲೀಲಾ ಸೋಮಕ್ಕನವರ, ರೇಣುಕಾ ಮಡಿವಾಳರ, ದಾವಲಬಿ, ಮಂಜುಳಾ ಕಮತರ ಸೇರಿದಂತೆ ಅನೇಕರಿದ್ದರು.

