ನರೇಗಾ ದಲ್ಲಿ ಹಾವೇರಿ ಜಿಲ್ಲೆಗೆ ರಾಜ್ಯದಲ್ಲೇ ಆರನೇ ಸ್ಥಾನ: ಕೂಲಿಕಾರರ ಬಾಕಿ ಕೂಲಿ ಹಣ ರೂ.೭.೨೧ ಕೋಟಿ ಬ್ಯಾಂಕ್ ಖಾತೆಗೆ ಜಮೆ- ದಲ್ಜೀತ್‌ಕುಮಾರ

Date:

ಹಾವೇರಿ : ನರೇಗಾ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿ ಕೆಲಸ ನಿರ್ವಹಿಸಿದ್ದು, ೨೦೨೫-೨೬ನೇ ಸಾಲಿನಲ್ಲಿ ರೂ. ೪.೧೧ ಕೋಟಿ ಹಾಗೂ ೨೦೨೬-೨೭ನೇ ಸಾಲಿನಲ್ಲಿ ರೂ. ೩.೧೦ ಕೋಟಿ ಸೇರಿ ೭.೨೧ ಕೂಲಿ ಹಣವನ್ನು ಇತ್ತೀಚೆಗೆ ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಕಾರ್ಯನಿರ್ವಹಣಾಧಿಕಾರಿ ದಲ್ಮೀಶ್ ಕುಮಾರ ತಿಳಿಸಿದ್ದಾರೆ.
ಗ್ರಾಮೀಣ ಬಡ ಕುಟುಂಬಗಳ ಜೀವನಮಟ್ಟ ಸುಧಾರಣೆ, ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಕೂಲಿ ಹಣವನ್ನು ಸರ್ಕಾರದಿಂದ ಬಿಡುಗಡೆಗೊಂಡ ಅನುದಾನದ ಆಧಾರದ ಮೇಲೆ ಯಶಸ್ವಿಯಾಗಿ ಪಾವತಿಸಲಾಗಿದೆ.
ಶಾಶ್ವತ ಆಸ್ತಿ ನಿರ್ಮಾಣ: ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಬಡ ಹಾಗೂ ನಿರುದ್ಯೋಗಿ ಕುಟುಂಬಗಳಿಗೆ ವ?ಕ್ಕೆ ೧೦೦ ದಿನಗಳ ಅಕುಶಲ ಕೂಲಿ ಉದ್ಯೋಗವನ್ನು ಖಾತ್ರಿ ಪಡಿಸುವ ಮಹತ್ವದ ಯೋಜನೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಯೋಜನೆಯ ಅನು?ನ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಕೆರೆ ಅಭಿವೃದ್ಧಿ, ಕಾಲುವೆ ಸ್ವಚ್ಛತೆ, ಮಣ್ಣು ಕಾಮಗಾರಿ, ಗಿಡ ನೆಡುವುದು, ರಸ್ತೆ ಅಭಿವೃದ್ಧಿ, ಜಲ ಸಂರಕ್ಷಣೆ ಸೇರಿದಂತೆ ವಿವಿಧ ಶಾಶ್ವತ ಆಸ್ತಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಮಹಿಳಾ ಕೂಲಿಕಾರರ ಪಾಲ್ಗೊಳ್ಳುವಿಕೆ ಹೆಚ್ಚಳ : ಜಿಲ್ಲೆಯ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರು, ರೈತ ಕುಟುಂಬಗಳು, ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ವಿಶೇ?ವಾಗಿ ಮಹಿಳಾ ಕೂಲಿಕಾರರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದು ಯೋಜನೆಯ ಪ್ರಮುಖ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.
ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿ: ಉದ್ಯೋಗದ ಅವಶ್ಯಕತೆ ಇರುವ ಗ್ರಾಮೀಣ ಕುಟುಂಬಗಳು ತಮ್ಮ ಗ್ರಾಮ ಪಂಚಾಯತಿಯಲ್ಲಿ ನಮೂನೆ-೬ ಸಲ್ಲಿಸಿ ಉದ್ಯೋಗಕ್ಕೆ ಬೇಡಿಕೆ ನೀಡಬೇಕು. ಬೇಡಿಕೆ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಅವರ ಗ್ರಾಮದಲ್ಲಿಯೇ ಅಕುಶಲ ಕೂಲಿ ಕೆಲಸ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೂಲಿ ಪಾವತಿಗೆ ಕ್ರಮ: ಕೂಲಿಕಾರರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿ ಆಗುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಯೋಜನೆಯ ಪಾರದರ್ಶಕ ಅನು?ನಕ್ಕೆ ಜಿಲ್ಲಾಡಳಿತ ಬದ್ಧವಾಗಿದೆ. ಜೊತೆಗೆ ನರೇಗಾ ಯೋಜನೆಯಡಿ ಹೆಚ್ಚು ಹೆಚ್ಚು ಜನರು ಉದ್ಯೋಗ ಪಡೆದು ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ರಾಜ್ಯದಲ್ಲೇ ಆರನೇ ಸ್ಥಾನ: ೨೦೨೬-೨೭ನೇ ಸಾಲಿಗೆ ಹಾವೇರಿ ಜಿಲ್ಲೆಯು ಹೆಚ್ಚು ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿಯೇ ೬ನೇ ಸ್ಥಾನದಲ್ಲಿದ್ದು, ಗ್ರಾಮೀಣ ಭಾಗದ ಅಕುಶಲ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ ಹಾಗೂ ಒಲಸೆ ಹೋಗದಂತೆ ಗ್ರಾಮಸ್ಥರಿಗೆ ಕೆಲಸ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ

ಗೋವಿನ ಜೋಳ ಬಿತ್ತನೆ ಬೀಜದ ಗರಿಷ್ಟ ಮಾರಾಟ ದರ ನಿಗದಿಗೆ ಒತ್ತಾಯ ಹಾವೇರಿ:ಪ್ರಸ್ತುತ...

ಹಾವೇರಿ ಬ್ಲಡ್ ಬ್ಯಾಂಕಿಗೆ ಪೀಠೋಪಕರಣ, ಆರ್ಥಿಕ ಸಹಕಾರ : ರಾಜೀವಶೆಟ್ಟಿ

ಹಾವೇರಿ ಬ್ಲಡ್ ಬ್ಯಾಂಕಿಗೆ ಪೀಠೋಪಕರಣ, ಆರ್ಥಿಕ ಸಹಕಾರ : ರಾಜೀವಶೆಟ್ಟಿ ಹಾವೇರಿ:...

-“ಹಾವೇರಿ-ಧಾರವಾಡ ಜಿಲ್ಲಾ ಪೊಲೀಸ್ ಜಂಟಿ ಕಾರ್ಯಾಚರಣೆ; ಅಂತರ್ ರಾಜ್ಯ ಕಳ್ಳರಿಂದ ೧.೧೫ ಕೋಟಿ ಮೌಲ್ಯದ ಚಿನ್ನಾಭರಣ ಆಭರಣಗಳ ವಶ”

“ಹಾವೇರಿ-ಧಾರವಾಡ ಜಿಲ್ಲಾ ಪೊಲೀಸ್ ಜಂಟಿ ಕಾರ್ಯಾಚರಣೆ; ಅಂತರ್ ರಾಜ್ಯ ಕಳ್ಳರಿಂದ...

ಕೂಲಿ ಕಾರ್ಮಿಕರಿಗೆ ನರೇಗಾ ಆಸರೆ: ಡಾ. ಪರಮೇಶ ಹುಬ್ಬಳ್ಳಿ

ಕೂಲಿ ಕಾರ್ಮಿಕರಿಗೆ ನರೇಗಾ ಆಸರೆ: ಡಾ. ಪರಮೇಶ ಹುಬ್ಬಳ್ಳಿ ಹಾವೇರಿ: ತಾಲೂಕಿನ ಮಹಾತ್ಮ...