ರೆಡಿ…ಸ್ಟಡಿ….ಗೋ….

Date:

ರೆಡಿ…ಸ್ಟಡಿ….ಗೋ….
ಹಾವೇರಿ; ಇಲ್ಲಿನ ಹೊರವಲಯದ ಐತಿಹಾಸಿಕ ಹೆಗ್ಗೆರೆಕೆರೆಯಬಳಿ ಜ.೭ ರಂದು “ಬಿಳಿಗರುಡ” (ಬ್ರಹ್ಮಿಣಿ ಕೈಟ್)ಪಕ್ಷಿ ಕಂಡು ಬಂದಿದೆ.  ಬಿಳಿಯ ಬಣ್ಣದ ತಲೆ ಮತ್ತು ಎದೆ, ಕಂದು ಬಣ್ಣದ ಗರಿಗಳು, ಚೂಪಾದ ಕೊಕ್ಕೆಯಂತಹ ಕೊಕ್ಕು, ಬಲಿಷ್ಟವಾದ ಕಾಲು ಉಗುರುಗಳು ಈಹಕ್ಕಿ ಹೊಂದಿದೆ. ಇವು  ಹೆಚ್ಚಾಗಿ ಸಮುದ್ರತೀರ, ನದೀತೀರಗಳಲ್ಲಿ ಕಂಡು ಬರುತ್ತವೆ.
ಎತ್ತರವಾದ ದೊಡ್ಡ ಮರಗಳಲ್ಲಿ ವಾಸಿಸುವ  ಇವುಗಳು ಸತ್ತ ಮೀನು, ಕಪ್ಪೆ , ಮಾಂಸಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಮೊಲ, ಇಲಿ , ಕಪ್ಪೆ , ಬಾವಲಿ ಇತ್ಯಾದಿ ಚಿಕ್ಕ ಪುಟ್ಟ ಸಸ್ತನಿಗಳನ್ನು ಬೇಟೆಯಾಡುತ್ತವೆ. ಆಲ್ಲದೆ ಬೇರೆ ಹಕ್ಕಿಗಳು ಬೇಟೆಯಾಡಿದ ಮೀನುಗಳನ್ನು ದೋಚಿ ಕೂಡ ತಿನ್ನಬಲ್ಲವು. ಎತ್ತರವಾದ ಮರದ ಮೇಲೆ ಗಂಡು ಹೆಣ್ಣುಗಳೆರಡೂ ಸೇರಿ ಗೂಡು ಕಟ್ಟುತ್ತವೆ. ಎರಡು ಮೊಟ್ಟೆಗಳನ್ನಿಟ್ಟು ಕಾವು ಕೊಡುವ ಕೆಲಸ ಹೆಣ್ಣು ಹಕ್ಕಿಯದು . ೨೫ ದಿನಗಳಲ್ಲಿ ಹೊರಬರುವ ಮರಿಗಳಿಗೆ ಎರಡೂ ಹಕ್ಕಿಗಳೂ ಆಹಾರ ತಂದುಕೊಡುತ್ತವೆ. ಥೈಲ್ಯಾಂಡ್ , ಇಂಡೋನೇಷಿಯಾ ದೇಶಗಳ ರಾಷ್ಟ್ರೀಯ ಪಕ್ಷಿಯಿದು. ನಮ್ಮ ದೇಶದಲ್ಲಿ ಸೈನ್ಯದ ಗುರುತಿನ ಚಿಹ್ನೆ ಗರುಡಹಕ್ಕಿಯಾಗಿದೆ.
ಚಿತ್ರ/ಮಾಹಿತಿ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...