ಶಿಕ್ಷಣ, ಶಾಂತಿ, ನೆಮ್ಮದಿ, ಸಹಬಾಳ್ವೆ,ಮಾನವೀಯತೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿ: ಸಲೀಂ ಅಹ್ಮದ್

Date:

ಹಾವೇರಿ: ಶಿಕ್ಷಣ, ಶಾಂತಿ, ನೆಮ್ಮದಿ, ಸಹಬಾಳ್ವೆ ಹಾಗೂ ಮಾನವೀಯತೆ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂಬ ಸಂದೇಶವನ್ನು ಪಾಲಕರಿಗೆ ಮೌಲಾನಾಗಳು ನೀಡಬೇಕು ಎಂದು ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು. ಭಾನುವಾರ ಇಲ್ಲಿನ ರಜನಿ ಕನ್ವೆನ್ಷನ್ ಹಾಲ್‌ನಲ್ಲಿ ರಾಜ್ಯಮಟ್ಟದ ಮೌಲಾನಾಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಕುರಿತು ಬೃಹತ್ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಹಾವೇರಿಯಲ್ಲಿ ಉಲಮಾ ಅವರನ್ನು ಕರೆದು ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಉಲಮಾದವರ ಸಮಸ್ಯೆಗಳು ಹಾಗೂ ಬೇಡಿಕೆಗಳ ಪಟ್ಟಿ ಕೊಟ್ಟಿದ್ದೀರಿ. ಅವುಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಯುವ ಕೆಲಸ ಮಾಡುತ್ತಿದೆ. ನಮ್ಮ ಸಮುದಾಯಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಉಲಮಾಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂಬ ಸಂದೇಶವನ್ನು ಪ್ರತಿಯೊಬ್ಬ ಪಾಲಕರಿಗೂ ತಲುಪಿಸಬೇಕು. ನಾವೆಲ್ಲ ಒಂದು, ಎಲ್ಲರೂ ಕೂಡಿ ಬಾಳಬೇಕು ಎಂಬ ಸಂದೇಶವನ್ನು ನೀಡಬೇಕು. ರಾಜ್ಯದಲ್ಲಿ ಮತದಾನದ ಪರಿಷ್ಕರಣೆ ಶುರುವಾಗಿದೆ. ಪ್ರತಿಯೊಬ್ಬ ಮತದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ, ಕಲುಬುರಗಿಯ ಹಜರತ್ ಖ್ವಾಜಾ ಬಂದೇನವಾಜಾ ದರ್ಗಾದ ಉಲಮಾ ಸೈಯದ್ ಮೊಹಮ್ಮದಅಲಿ ಅಲ್‌ಹುಸೇನಿ ಮಾತನಾಡಿ, ಸಮಾಜದಲ್ಲಿನ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಿದರು. ಶಿಕ್ಷಣ, ನೈತಿಕತೆ, ಯುವ ಜನರ ಸಬಲೀಕರಣ ಹಾಗೂ ಶಾಂತಿ, ಸಹೋದರತೆ, ಸರ್ವಧರ್ಮದ ಸಮಭಾವಗಳ ಸಂದೇಶ ಸಾರಿದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಉಲಮಾಗಳು ಕೌಟುಂಬಿಕ ಸಂತೋಷವನ್ನು ಬದಿಗಿಟ್ಟು ಸಮಾಜ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮಾನವರಾಗಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂಬುದು ಎಲ್ಲಾ ಪವಿತ್ರ ಧರ್ಮಗಳ ಸಾರ. ಅದನ್ನು ಯುವ ಪೀಳಿಗೆಗೆ ತಲುಪಿಸಬೇಕು. ಸಣ್ಣಪುಟ್ಟ ಘಟನೆಯಲ್ಲಿ ಮನಸ್ಸು ಒಡೆಯುತ್ತೆ. ಸಮಸ್ಯೆಯ ಮೂಲ ಪತ್ತೆ ಹಚ್ಚಿ ಅಲ್ಲೇ ಮದ್ದು ಕೊಡುವ ಕೆಲಸ ಮಾಡಬೇಕು. ದುಷ್ಟಶಕ್ತಿಗಳ ಶಕ್ತಿನಾಶ ಮಾಡಬೇಕು ಎಂದರು.
ಹೆಸ್ಕಾಂ ಅಧ್ಯಕ್ಷ ಅಜ್ಜಂಫೀರ್ ಖಾದ್ರಿ ಮಾತನಾಡಿ, ನಮ್ಮ ಸಮುದಾಯವನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಶ್ರಮಿಸಬೇಕು. ಸದ್ಯ ದೇಶದ ಪರಿಸ್ಥಿತಿ ಹದಗೆಟ್ಟಿದೆ. ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಅದಕ್ಕೆ ನಾವು ತಕ್ಕ ಉತ್ತರ ನೀಡಬೇಕಿದೆ. ಮಾಜಿ ಸಚಿವರಾದ ಜಮೀರ್ ಅಹ್ಮದ್ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ೪೭೮೦ಕೋಟಿ ರೂ., ಅನುದಾನ ಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಲೀಂ ಅಹ್ಮದ್ ಅವರು ೪೦ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದಾರೆ. ಈ ಸಾರಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಯಾಸೀರ್‌ಖಾನ್ ಪಠಾಣ ಮಾತನಾಡಿ, ಸಮಾಜದಲ್ಲಿ ಏನಾದರೂ ಸಣ್ಣ-ಪುಟ್ಟ ಮನಸ್ತಾಪ, ವ್ಯತ್ಯಾಸಗಳು ಕಂಡು ಬಂದರೆ ಅದರಲ್ಲಿ ರಾಜಕೀಯ ಮಾಡದೇ ಕುಳಿತು ಮಾತಾಡಿ ಬಗೆಹರಿಸಿಕೊಳ್ಳಬೇಕು. ಹಾವೇರಿಯಲ್ಲಿ ಉಲಮಾ ಸೊಸೈಟಿಗೆ ಸಿಎ ಸೈಟ್ ಕೊಟ್ಟರೆ ವಕ್ಫ ಮಂಡಳಿಯಿಂದ ಅನುದಾನ ತಂದು ಕಚೇರಿ ಮಾಡಿದರೆ ಅನುಕೂಲ ಆಗಲಿದೆ ಎಂದರು.
ರಾಜ್ಯ ಉಲಮಾ ಸೊಸೈಟಿ ಅಧ್ಯಕ್ಷರಾದ ಮೌಲಾನಾ ಸೈಯದ್ ಮೊಯಿನುದ್ದೀನ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮೌಲಾನಾ ಫಾಝಿಲ್, ಸೈಯದ್‌ಷಾ ಹೈದರ್‌ವಲಿವುಲ್ಲಾ ನಬೀರಾ ಖಾದ್ರಿ, ಮಾಜಿ ಶಾಸಕ ವಿ.ಎಸ್. ಪಾಟೀಲ, ಹಜರತ್‌ಅಲಿ ಸುಳ್ಳ, ಹಜರತ್ ಸೈಯದ್ ಮೈನುದ್ದೀನ್ ಸರಖಾಜಿ, ಮೌಲಾನಾ ಅಬ್ದುಲ್ ಅಲೀಮ್‌ಸಾಬ್, ಸೈಯದ್ ದಾದಾಪೀರ್, ಮೌಲಾನಾ ಇಬ್ರಾಹಿಂಸಾಬ್, ಹಾಫೀಜ್ ಸಾಕಮುಲ್ಲಾ, ಜಾಫರ್‌ರಜಾ, ಮಹ್ಮದ್ ರಿಜ್ವಾನ್, ಗುಲಾಮ್ ಮುಸ್ತಫಾ, ಇನಾಯತ್‌ಉಲ್ಲಾ, ರಹಮತ್‌ರಜಾ, ಜಹಿಮುದ್ದೀನ, ಅಂಜುಮನ್ ಕಮೀಟಿ ಸದಸ್ಯ ಜಮೀರ್ ಅಹ್ಮದ್ ಜಿಗರಿ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಎಸ್‌ಐಆರ್ ಮೂಲಕ  ಹಿಂದುಳಿದವರು, ಅಲ್ಪಸಂಖ್ಯಾತರು, ಎಸ್ಸಿ-ಎಸ್ಟಿಗಳ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಬೀದಿಗಿಳಿದು ಹೋರಾಟ-ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಎಚ್ಚರಿಕೆ

-ಎಸ್‌ಐಆರ್ ಮೂಲಕ  ಹಿಂದುಳಿದವರು, ಅಲ್ಪಸಂಖ್ಯಾತರು, ಎಸ್ಸಿ-ಎಸ್ಟಿಗಳ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಬೀದಿಗಿಳಿದು...

ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ. ಕಾಯಂ ಗೊಳಿಸಲು ಉಡಚಪ್ಪ ಮಾಳಗಿ ಒತ್ತಾಯ

ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ. ಕಾಯಂ ಗೊಳಿಸಲು ಉಡಚಪ್ಪ ಮಾಳಗಿ ಒತ್ತಾಯ ಹಾವೇರಿ:ರಾಜ್ಯದಲ್ಲಿ...

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ-ಕ್ರಮಕ್ಕೆ ಆಗ್ರಹ

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ-ಕ್ರಮಕ್ಕೆ ಆಗ್ರಹ ಹಾವೇರಿ: ಜಿಲ್ಲೆಯಲ್ಲಿ ರಸಗೊಬ್ಬರ ಮಾರಾಟಗಾರರು ಯೂರಿಯಾ,...

ಹೆರಿಗೆ ನಂತರ ಸರಿಯಾಗಿ ಸ್ಟೀಚ್ ಹಾಕದೇ ಬೇಜವಾಬ್ದಾರಿ-ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯನ ವಿರುದ್ಧ ದೂರು ದಾಖಲು

ಹೆರಿಗೆ ನಂತರ ಸರಿಯಾಗಿ ಸ್ಟೀಚ್ ಹಾಕದೇ ಬೇಜವಾಬ್ದಾರಿ-ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯನ...