ಹಾವೇರಿಯ ಪರಿಸರದಲ್ಲಿ “ಬೂದು ಮಂಗಟ್ಟೆ ಹಕ್ಕಿ”

Date:

ಹಾವೇರಿಯ ಪರಿಸರದಲ್ಲಿ “ಬೂದು ಮಂಗಟ್ಟೆ ಹಕ್ಕಿ”
(ಕಾಮನ್ ಗ್ರೇ ಹಾರನ್ ಬಿಲ್)
ಹಾವೇರಿಯ ಹೊರವಲಯದ ಆಲದಮರದಲ್ಲಿ ಶನಿವಾರ “ಬೂದು ಮಂಗಟ್ಟೆ ಹಕ್ಕಿ”ಯ ಕಂಡು ಬಂದಿದೆ. ಆಲದಮರದಲ್ಲಿನ ಆಯ್ದ ಹಣ್ಣುಗಳನ್ನು ಭಕ್ಷಿಸುತ್ತಿದ್ದ ವೇಳೆ ಇದರಛಾಯಾಚಿತ್ರಗಳನ್ನು ನಾನು ಸೆರೆಹಿಡಿದಿದ್ದೇನೆ. ಹದ್ದಿನಷ್ಟು ದೊಡ್ಡದಾದ ಹಕ್ಕಿ, ಕಂದು ಬಣ್ಣದ ದೊಡ್ಡ ಕೊಕ್ಕಿನ ಈ ಹಕ್ಕಿಯ ಕೊಕ್ಕಿನ ಮೇಲೆ ಇನ್ನೊಂದು ಎರಡನೆ ಕೊಕ್ಕಿನ ರೀತಿ ಇರುವ ಕೊಂಬು ಇದೆ.
ಬಾಲದ ಪುಕ್ಕಗಳು ಉದ್ದವಾಗಿದ್ದು ತುದಿಯಲ್ಲಿ ಬಿಳಿ ಮಚ್ಚೆ ಇದೆ. ಹೆಣ್ಣು ಹಕ್ಕಿಗೆ ಕೊಕ್ಕಿನಮೇಲಿರುವ ಕೊಂಬು ಚಿಕ್ಕದಾಗಿರುತ್ತದೆ.  ದಟ್ಟ ಕಾಡುಗಳಲ್ಲಿ ಇರುವ ಈ ಹಕ್ಕಿ. ಅಂಜೂರದ ಜಾತಿಯ ಆಲ, ಬಸರಿ, ಗೋಣಿ, ಅತ್ತಿ, ಮೊದಲಾದ ಮರಗಳು ಹಣ್ಣು ಬಿಟ್ಟಾಗ ಮನಿಯಾಡಲು ಹಕ್ಕಿ ಮೊದಲಾದ ಹಣ್ಣು ತಿನ್ನುವ ಹಕ್ಕಿಗಳ ಜೊತೆ ಗುಂಪುಗಳಲ್ಲಿ ಇವೂ ಸೇರಿಕೊಂಡು ಗಲಾಟೆ ಮಾಡುತ್ತಾ ಇರುತ್ತವೆ.
ಗುಂಪುಗಳಲ್ಲೇ ಇರುವ ಇವು ಒಂದು ಹಕ್ಕಿ ಮರದಿಂದ ಹಾರುತ್ತಲೂ ಅದರ ಬಾಲ ಹಿಡಿದು ಮಿಕ್ಕವೂ ಹಾರುತ್ತಾ ಹಿಂಬಾಲಿಸುತ್ತವೆ. ರೆಕ್ಕೆ ಬಡಿಯುವುದನ್ನು ನಿಲ್ಲಿಸಿ ನಿಲ್ಲಿಸಿ ತೇಲುತ್ತಾ ಹಾರುತ್ತವೆ. ಕೈಕ್ಕೆಕ್ಕೆಕ್ಕೇ ಎಂದು ಗಹಗಹಿಸಿ ನಕ್ಕಂತೆ ಕೂಗುತ್ತವೆ. ಕೆಲವು ಸಾರಿ ಮಕ್ಕಳು ಕಿರುಚಿದಂತೆಯೂ ಕೂಗುತ್ತವೆ. ಮಾರ್ಚ್ ನಿಂದ ಜೂನ್‌ವರೆಗೆ ಮರಗಳ ಪೊಟರೆಗಳಲ್ಲಿ ಗೂಡು ಮಾಡುತ್ತವೆ. ಹೆಣ್ಣು ಹಕ್ಕಿಗೆ ಕಾವು ಕೊಡುವ ಸಮಯದಲ್ಲಿ ಪುಕ್ಕಗಳು ಉದುರುತ್ತವೆ. ಹಾರಲಾರದ ಅದಕ್ಕೆ ಗಂಡುಹಕ್ಕಿ ಆಹಾರ ಸರಬರಾಜು ಮಾಡುತ್ತದೆ.
ಚಿತ್ರ/ಮಹಿತಿ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...