ಹಾವೇರಿ: ಒಳಮೀಸಲಾತಿ ಜಾರಿಗೊಳಿಸಿ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಡಿಎಸ್‌ಎಸ್ ಆಗ್ರಹ

Date:

ಹಾವೇರಿ: ಸರ್ಕಾರದ ೩೬ ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳ ಕುರಿತಂತೆ ಅಂಕಿ ಅಂಶ ನೀಡದಿರುವ ಇಲಾಖಾ ಮುಖ್ಯಸ್ಥರ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸಿ, ೧೦೧ ಪರಿಶಿಷ್ಟ ಜಾತಿಗಳ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತರ, ಡಿಪ್ಲೋಮಾ, ಐಟಿಐ, ವೈದ್ಯಕೀಯ ,ಇಂಜನಿಯರಿಂಗ್ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸ್ಕಾಲರಶೀಪ ನೀಡಬೇಕು.
ಎಸ್.ಸಿ.ಎಸ್.ಪಿ. ಟಿ.ಎಸ್.ಪಿ. ೨೦೧೩ಕಾಯ್ದೆಯ ಕಲಂ ೭ಸಿ ಕೂಡಲೇ ರದ್ದುಗೊಳಿಸಬೇಕು. ಎಸ್‌ಸಿ-ಎಸ್ಟಿಗೆ ಮೀಸಲಾದ ಹಣವನ್ನು ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಉಪಯೋಗಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾಯ್ದೆ ಕಲಂ ೨೪ ರಡಿಯಲ್ಲಿ ಪ್ರಕರಣ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಬೇಕು.
೨೦೨೪-೨೫, ೨೦೨೫-೨೬ನೇ ಸಾಲಿನಲ್ಲಿ ಕೂಡ ಗ್ಯಾರಂಟಿಯೋಜನೆಗಳನ್ನು ಒಳಗೊಂಡಂತೆ ಅನ್ಯ ಯೋಜನೆಗಳಿಗೆ ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಹಣ ಉಪಯೋಗಿಸುವಂತೆ ಅವಕಾಶ ನೀಡುವ ಮೂಲಕ ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರಗಳೇ ನೇರವಾಗಿ ನಿರಾಕರೊಸಿವ ಮೂಲಕ ಅಸ್ಪ್ರಶ್ಯರೆ ಆಚರಣೆ ಮಾಡುತ್ತಿದೆ. ಅಸ್ಪ್ರಶ್ಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದನ್ನು ನಿಲ್ಲಿಸಿ, ನಯ ವಂಚನೆ ಮಾಡದೆ ಪರಿಶಿಷ್ಟರ ಹಣವನ್ನು ಪರಿಶಿಷ್ಟರಿಗೆ ಮೀಸಲಿಡಬೇಕೆಂದು ಒತ್ತಾಯಿಸಿದೆ.
ಕಳೆದ ೨೦೨೩ ರ ಚುನಾವಣೆಯಲ್ಲಿ ಅಂದಿನ ಬಿ.ಜೆ.ಪಿ. ಸರ್ಕಾರ ದಲಿತ ವಿರೋಧಿ ಧೋರಣೆಯನ್ನು ಅನುಸರಿಸಿದ್ದರಿಂದ ಬಹುತೇಕ ಎಲ್ಲಾ ಒಳ ಮೀಸಲಾತಿ ಹೋರಾಟಗಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು. ಇನ್ನಾದರೂ ಎಚ್ಚೆತ್ತು ಕಲಂ ೭ಸಿ ರದ್ದು ಪಡಿಸಿ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಅನುದಾನ ನೀಡುತ್ತಿರುವುದನ್ನು ತತ್‌ಕ್ಷಣ ತಡೆಯುವಂತೆ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮನವಿಯನ್ನು ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಪ್ರಮುಖರಾದ ಮಾಲತೇಶ ಯಲ್ಲಾಪುರ, ಮಂಜಪ್ಪ ಮರೋಳ, ರೇಣುಕಾ ಬಡಕ್ಕಣ್ಣನವg, ,ಬಸಣ್ಣ ಮುಗಳಿ, ಸೋಮು ಮಾಳಗಿ, ಭೀಮಣ್ಣ ಹೊಟ್ಟೂರ, ಹನಮಂತಪ್ಪ ಹರಿಜನ, ಬಸವರಾಜ ತಡಸದ, ಹನಮಂತಪ್ಪ ಹೌಂಸಿ, ಮಹೇಶಪ್ಪ ಹರಿಜನ, ನವೀನ ಶಿದ್ದಣ್ಣನವರ, ಶಿವಲಿಂಗಪ್ಪ ನಿಂಗಪ್ಪನವರ, ಮಲ್ಲೇಶಪ್ಪ ಕೆಂಚಲನವರ, ಮಾಲತೇಶ ಚಿನ್ನಿಕಟ್ಟಿ, ಬಸವರಾಜ ಹಾವೇರಿ, ಲಕ್ಷ್ಮೀ ಸಣ್ಣಮನಿ, ಅನ್ನಪೂರ್ಣ ಅರ್ಶಿಕೇರಿ, ಗೀತಾ ಕಡೇಮನಿ, ಯಶೋಧಾ ಸಣ್ಣಮನಿ, ನೇತ್ರಾ ದೊಡ್ಡಮನಿ, ಸುಮಂಗಲಾ ಕೃಷ್ಣಾಪುರ, ಮಂಜುನಾಥ ಬುಳ್ಳಮ್ಮನವರ, ಶ್ರೀಕಾಂತ, ಬಸವರಾಜ,ನಾಗರಾಜ, ಮಾರುತಿ, ಮುತ್ತು, ಅಭಿಷೇಕ, ಉಮೇಶ, ಭೀಮಣ್ಣ, ಭರಮಪ್ಪ ಸೇರಿದಂತೆ ಅನೇಕ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಚಿರತೆ ನೀ ಏಕೆ ಮನೆಯೊಳಗೆ ಅವಿತೆ….;

ಚಿರತೆ ನೀ ಏಕೆ ಮನೆಯೊಳಗೆ ಅವಿತೆ....; ಅಂತೂ ಇಂತೂ ಚಿರತೆ ಸೆರೆ; ನಿಟ್ಟುಸಿರು...

ಹಾವೇರಿ ನಗರಸಭೆಗೆ ಪೌರಾಯುಕ್ತರು ಇಂಗ್ಲೆಡ್‌ನಿಂದ ಬಂದವರೇ?

    ಹಾವೇರಿ ನಗರಸಭೆಗೆ ಪೌರಾಯುಕ್ತರು ಇಂಗ್ಲೆಡ್‌ನಿಂದ ಬಂದವರೇ? ಹಾವೇರಿ ನಗರಸಭೆಗೆ ಪೌರಾಯುಕ್ತರು ಇಂಗ್ಲೆಡ್‌ನಿಂದ ಬಂದವರೇ? ಹಾವೇರಿ: ಇಲ್ಲಿನ ನಗರಸಭೆಗೆ ನೂತನ ಪೌರಾಯುಕ್ತರಾಗಿ...

ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ಆಗ್ರಹ-ಒಳಮೀಸಲಾತಿ ಹೋರಾಟ ಸಮಿತಿ ಬ್ರಹತ್ ಪ್ರತಿಭಟನೆ

ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ಆಗ್ರಹ-ಒಳಮೀಸಲಾತಿ ಹೋರಾಟ ಸಮಿತಿ...

ಹಾವೇರಿ: ೨ಕೋಟಿ ಸಾಲ ಮಾಡಿದ ಮಾನಿನಿ-ತುಂಬಿಹರಿವ ತುಂಗಭದ್ರಾನದಿಗೆ ಜಿಗಿದಳು!

 ಹಾವೇರಿ: ೨ಕೋಟಿ ಸಾಲ ಮಾಡಿದ ಮಾನಿನಿ-ತುಂಬಿಹರಿವ ತುಂಗಭದ್ರಾನದಿಗೆ ಜಿಗಿದಳು! ಹಾವೇರಿ: ಕೋಟ್ಯಾಂತರರೂಗಳ...