ಹಾವೇರಿವಾಣಿ ಸುದ್ದಿ ಫಲಶೃತಿ, ಬೆಳ್ಳನ್‌ ಬೆಳಿಗ್ಗೇನೇ ಕಸ ವಿಲೇವಾರಿ ವಿಶಾಲ್‌ ಮಾರ್ಟ್‌ಗೆ 6 ಸಾವಿರ ದಂಢ

Date:

ಹಾವೇರಿವಾಣಿ ಸುದ್ದಿ ಫಲಶೃತಿ, ಬೆಳ್ಳನ್‌ ಬೆಳಿಗ್ಗೇನೇ ಕಸ ವಿಲೇವಾರಿ
ವಿಶಾಲ್‌ ಮಾರ್ಟ್‌ಗೆ 6 ಸಾವಿರ ದಂಢ
ಹಾವೇರಿ:
ಹಾವೇರಿಯ ವಿವಿಧ ಮಾಲ್‌ಗಳ ಲಾಭ್ ಮಾಲೀಕರ ಜೇಬಿಗೆ……ಆದರೆ, ಮಾಲ್‌ಗಳ ಕಸ ಮಾತ್ರ ಹೆಗ್ಗೇರೆಕೆರ ಒಡಲಿಗೆ‌ ಎಂಬ ಶೀರ್ಷಿಕೆಯಲ್ಲಿ ಭಾನುವಾರ ನಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು.

ಸುದ್ಧಿಯ ಫಲಶೃತಿಯಾಗಿ ನಗರದ ಮುನ್ಸಿಪಲ್‌ ರಸ್ತೆಯ ವಿಶಾಲ್‌ ಮಾರ್ಟ್‌ಗೆ, ನಗರಸಭೆಯ ಹಿರಿಯ ಆರೋಗ್ಯ ನೀರಿಕ್ಷಕರು ಸೋಮವಾರ ಒಟ್ಟು 6 ಸಾವಿರ ದಂಢ ವಿಧಿಸಿದ್ದಾರೆ.
ಅಲ್ಲದೇ, ಹೆಗ್ಗೇರಿ ಕೆರೆಯ ಒಡಲಿಗೆ ಸೇರಿಸಿದ್ದ ಕಸದ ರಾಶಿಯನ್ನು, ಸೋಮವಾರ ಬೆಳ್ಳನ್‌ ಬೆಳಿಗ್ಗೇನೇ ನಗರಸಭೆ ಸಿಬ್ಬಂದಿಯಿಂದ ವಿಲೇವಾರಿ ಮಾಡಿಸಲಾಗಿದೆ. ಜೊತೆಗೆ, ಜೆಸಿಬಿ ಮೂಲಕ ರಸ್ತೆ ಬದಿಯಲ್ಲಿ ಹಾಕಲಾದ ಕಸದ ರಾಶಿಯನ್ನು ಸ್ವಚ್ಚಗೊಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ನಗರದ ಎಲ್ಲ ಮಾಲ್‌ಗಳು ತಮ್ಮ ತಮ್ಮ ಮಾಲ್‌ಗಳ ತ್ಯಾಜ್ಯವನ್ನು, ನಮ್ಮ ಕಸದ ವಾಹನಗಳಲ್ಲಿಯೇ ಹಾಕಬೇಕು ಎಂದು ನೋಟಿಸ್‌ ನೀಡಲಾಗಿದೆ. ಜೊತೆಗೆ ಹೆಗ್ಗೇರಿ ಕೆರೆಯ ದಾರಿಯಲ್ಲಿ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಕಸ ಹಾಕುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.

ನಗರಸಭೆಯ ಹಿರಿಯ ಆರೋಗ್ಯ ನೀರಿಕ್ಷಕರು, ಕರ್ನಾಟಕ ಪುರಸಭೆ ಕಾಯ್ದೆ 1964 ಹಾಗೂ ಪರಿಸರ ಸಂರಕ್ಷಣ ಕಾಯ್ದೆ1986ರ ಸೆಕ್ಷನ್‌ 19ರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿದ ಆರೋಪದ ಮೇಲೆ 5 ಸಾವಿರ ಹಾಗೂ ವಿಶಾಲ್‌ ಮಾರ್ಟ್‌ನ ಎದುರು ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿದ್ದರಿಂದ 1 ಸಾವಿರ ದಂಢವನ್ನು ವಿಧಿಸಿದ್ದಾರೆ.

 ಹೆಗ್ಗೇರಿ ಕೆರೆಯ ರಸ್ತೆಯಲ್ಲಿ ಹಾಕಲಾದ ಕಸದ ರಾಶಿಯನ್ನು ಸೋಮವಾರ ಸ್ವಚ್ಚಗೊಳಿಸಿರುವುದು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಉಪಚುನಾವಣೆ ಫಲಿತಾಂಶ ೨೦೨೮ರ ಚುನಾವಣೆಗೆ ದಿಕ್ಕೂಚಿ; ಸಲೀಂ ಅಹ್ಮದ್

ಉಪಚುನಾವಣೆ ಫಲಿತಾಂಶ ೨೦೨೮ರ ಚುನಾವಣೆಗೆ ದಿಕ್ಕೂಚಿ; ಸಲೀಂ ಅಹ್ಮದ್ ಹಾವೇರಿ: ಇತ್ತೀಚೆಗೆ ನಡೆದ...

ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆರೂ.೧೦ ಪೈಸೆ ಮರುಪಾವತಿ:ಸೈಯದ್ ಅಜೀಮ್‌ಪೀರ್ ಖಾದ್ರಿ

ಹೆಸ್ಕಾಂ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆರೂ.೧೦ ಪೈಸೆ ಮರುಪಾವತಿ:ಸೈಯದ್ ಅಜೀಮ್‌ಪೀರ್ ಖಾದ್ರಿ ಹಾವೇರಿ: ಇಂಧನ...

ತಿರುಪತಿ ಮಾದರಿಯಲ್ಲಿ ಹಾವೇರಿಯಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ; ಶಿವಣ್ಣನವರ

-ತಿರುಪತಿ ಮಾದರಿಯಲ್ಲಿ ಹಾವೇರಿಯಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ; ಶಿವಣ್ಣನವರ ಹಾವೇರಿ: ‘ಆಂಧ್ರಪ್ರದೇಶದ ಚಿತ್ತೂರು...