
ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ
ಹಾವೇರಿ: ನನಗೆ ಸಚಿವ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಿಫಾರಸ್ಸು ಮಾಡಿದ್ದು ನಿಜ ಎಂದು ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ತಿಳಿಸಿದ್ದಾರೆ. ಸೋಮವಾರ ಹಾವೇರಿಯಲ್ಲಿ ಮಾತನಾಡಿದ ಅವರು, ಅರಣ್ಯ ಅಭಿವೃದ್ಧಿ ನಿಮಗಕ್ಕೆ ರಾಜೀನಾಮೆ ಕೊಡಲು ಹೋಗಿದ್ದು ನಿಜ. ಆದರೆ ಸಿಎಂ ಡಿ.ಕೆ.ಶಿವಕುಮಾರ್ ಅವರು ನಿಮ್ಮ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಏನೋ ವಿಚಾರ ಮಾಡುತ್ತಿದ್ದೇವೆ, ಸ್ವಲ್ಪ ಕಾಯಿರಿ. ಅನುಕೂಲ ಆಗಲಿದೆ ಎಂದು ತಿಳಿಸಿದರು ಎಂದು ಮಾಹಿತಿ ನೀಡಿದರು.
ಸಿಎಂ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿ ಆಗಿರುವ ಸುದ್ದಿಯನ್ನು ಮಾಧ್ಯಮದಲ್ಲೇ ನೋಡಿದೆ. ನಾನು ಯಾರಿಗೂ ಫೋನ್ ಮಾಡಿಲ್ಲ. ಉತ್ತರ ಕರ್ನಾಟಕಕ್ಕೆ ಕೊಡಬೇಕು ಎಂಬ ಉದ್ದೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು, ಹೈಕಮಾಂಡ್ಗೂ ತಿಳಿಸಿದ್ದರು. ಆದ್ದರಿಂದ ಸಚಿವ ಸ್ಥಾನ ಸಿಗುವ ಕುರಿತಂತೆ ಆತ್ಮವಿಶ್ವಾಸದಲ್ಲಿದ್ದೇನೆ ಎಂದು ಶಿವಣ್ಣನವರ್ ಭರವಸೆ ವ್ಯಕ್ತಪಡಿಸಿದರು.
ನಾನು ಬೇರೆ ಯಾವ ನಿಗಮ ಕೊಟ್ಟರೂ ಒಪ್ಪುವ ಪ್ರಶ್ನೆಯೇ ಇಲ್ಲ. ಈಗಾಗಲೇ ನಿಗಮದಲ್ಲಿ ಕೆಲಸ ಮಾಡಿದ್ದೇನೆ. ನನಗೆ ನಿಗಮದ ಅಧ್ಯಕ್ಷತೆ ಅವಶ್ಯಕತೆ ಇಲ್ಲ. ಸಚಿವ ಸ್ಥಾನ ಕೊಟ್ಟರೆ ಕೊಡಲಿ, ಇಲ್ಲದಿದ್ದರೆ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡುವೆ ಎಂದು ಶಿವಣ್ಣನವರ್ ತಿಳಿಸಿದ ಅವರು ಸಚಿವ ಸ್ಥಾನ ಸಿಗದಿದ್ದರೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಬೇರೆಯವರಿಗೆ ಅವಕಾಶ ಸಿಗಲಿದೆ. ನನಗೆ ತಪ್ಪಿಸಿದ್ದು ಯಾವ ಶಕ್ತಿ ಅಂತ ಈಗ ಹೇಳೋದು ಬೇಡ. ಎಲ್ಲಾ ವಿವರ ಮುಂದೆ ಕೊಡುತ್ತೇನೆ ಎಂದರು.
ಯಾವುದೇ ನಿರ್ಧಾರವನ್ನು ಹೈಕಮಾಂಡ್ ಮಾಡಬೇಕು. ಯಾವ ತರ ಮಾಡ್ತಾರೋ ಅದನ್ನು ಹೈಕಮಾಂಡ್ಗೆ ಬಿಟ್ಟಿದ್ದು. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯಲು ಹೋಗಬೇಡಿ ಎಂದು ನಮ್ಮ ಬೆಂಬಲಿಗರು ಮುಖಂಡರಿಗೂ ಮನವಿ ಮಾಡಿದ್ದೇನೆ, ನನಗೆ ಬೇರೆ ನಿಗಮ ಮಂಡಳಿ ಅವಶ್ಯಕತೆ ಇಲ್ಲ. ಸಚಿವ ಸ್ಥಾನ ಸಿಗದೇ ಇದ್ದರೆ ಅರಣ್ಯ ಅಭಿವೃದ್ಧಿ ನಿಗಮ ಮಂಡಳಿಗೆ ಖಂಡಿತವಾಗಿ ರಾಜೀನಾಮೆ ನೀಡುವೆ ಎಂದು ಬಸವರಾಜ್ ಶಿವಣ್ಣನವರ್ ತಿಳಿಸಿದರು.

