ಹಾವೇರಿ ಜಿಲ್ಲೆಯ ನಿಯತಕಾಲಿಕೆಗಳು “ನಾ ಕಂಡಂತೆ ನನಗೆ ಕಂಡಷ್ಟು”

Date:

ಕನ್ನಡ ಪತ್ರಿಕೋದ್ಯಮಕ್ಕೆ ಕೀರ್ತಿ ತಂದ ಜಿಲ್ಲಾ ಪತ್ರಿಕೆಗಳು-ಹಾವೇರಿಜಿಲ್ಲೆಯಲ್ಲಿ ಪ್ರಬಲವಾಗಿ ಬೇರೂರುತ್ತಿರುವ ಸ್ಥಳೀಯ ಪತ್ರಿಕೆಗಳು
(ಜುಲೈ ೧ ರಂದು ಪತ್ರಿಕಾದಿನಾಚರಣೆಯ ಹಿನ್ನಲೆಯಲ್ಲಿ ಈ ಲೇಖನ)
ಕನ್ನಡದ ಮೊಟ್ಟ ಮೊದಲ ಪತ್ರಿಕೆ “ಮಂಗಳೂರು ಸಮಾಚಾರ”ದ ಮೊದಲ ಸಂಚಿಕೆ ೧೮೪೩ರ ಜುಲೈ ೧ ರಂದು ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡ ಪತ್ರಿಕಾ ರಂಗದ ಮೊದಲ ಆವೃತ್ತಿ ಹೊರಬಂದ ದಿನದ ಸ್ಮರಣೆಗೆ ರಾಜ್ಯದಲ್ಲಿ ಜುಲೈ ೧ ರಂದು ’ಪತ್ರಿಕಾ ದಿನ’ವಾಗಿ ಆಚರಿಸಲಾಗುತ್ತದೆ. ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ ೧೮೪೩ರ ಜುಲೈ ೧ರಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್‌ನ ಮತ ಪ್ರಚಾರಕರಾದ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.
ಮಂಗಳೂರು ಸಮಾಚಾರ ಪತ್ರಿಕೆ ೮ ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ವರ್ತಮಾನಗಳು, ಸರಕಾರಿ ನಿರೂಪಗಳು ಕಾನೂನು, ಹಾಡುಗಳು, ಕತೆಗಳು, ಅಂತರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು ಅಂಕಣಗಳಾಗಿದ್ದವೆಂದು ಮಂಗಳೂರು ದರ್ಶನ ದಾಖಲಿಸಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು ಕನ್ನಡ ಸಮಾಚಾರ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು.
ಕನ್ನಡದ ಪತ್ರಿಕೋದ್ಯಮದ ವಿಷಯದಲ್ಲಿ ಇಂದು ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವೃತ್ತಿಪರ ಕೋರ್ಸ್ ರೂಪದಲ್ಲಿ ಪತ್ರಿಕ್ಕೊದ್ಯಮ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಸೇರಿದಂತೆ ಪಿಜಿ ಡಿಪ್ಲೊಮಾ ಕೋರ್ಸ್ ಸಹ ಆರಂಭಿಸಲಾಗಿದ್ದು, ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಪತ್ರಿಕೋದ್ಯಮದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದು, ಪತ್ರಿಕಾರಂಗ ಪ್ರಜಾಪ್ರಭುತ್ವದ ೪ನೇ ಅಂಗವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ.
ಕನ್ನಡ ಪತ್ರಿಕೋದ್ಯಮಕ್ಕೆ ಕೀರ್ತಿ ತಂದ ಜಿಲ್ಲಾ ಪತ್ರಿಕೆಗಳು: ಜಿಲ್ಲಾ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಅಪಾರವಾಗಿ ಕೊಡುಗೆ ನೀಡಿವೆ. ರಾಜ್ಯ ಮಟ್ಟದ ಪತ್ರಿಕೆಗಳ ಆಯಾ ಪ್ರದೇಶದ ಪ್ರಸಾರವನ್ನು ಮೀರಿಸುವಷ್ಟು ಕೆಲವು ಪ್ರಾದೇಶಿಕ ಹಾಗೂ ಜಿಲ್ಲಾ ಪತ್ರಿಕೆಗಳ ಪ್ರಸಾರವಿದೆ. ಒಂದೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದೊಂದು ಪತ್ರಿಕೆಯಾದರೂ ಸ್ಥಳೀಯವಾಗಿ ಪ್ರಬಲವಾಗಿ ಬೆಳೆದಿರುವುದು ಕನ್ನಡ ಪತ್ರಿಕಾರಂಗದ ವಿಶೇಷ. ಮೈಸೂರು, ಶಿವಮೊಗ್ಗ, ಮಂಗಳೂರು, ಬೆಳಗಾಂವಿ, ದಾವಣಗೆರೆ, ಹಾಸನ, ಹುಬ್ಬಳ್ಳಿ, ಕಾರವಾರ, ಹಾವೇರಿಜಿಲ್ಲೆಗಳಲ್ಲಿ ಈ ಬಗೆಯ ಪತ್ರಿಕೆಗಳು ಮಧ್ಯಮ ಪ್ರಮಾಣದ ಪ್ರಸಾರವನ್ನೂ ಹೊಂದಿದೆ. ಒಂದೊಂದು ಕಡೆಯಲ್ಲಿ ಒಂದಕ್ಕಿಂತ ಹೆಚ್ಚು ಪತ್ರಿಕೆಗಳು ಪ್ರವರ್ಧಮಾನಕ್ಕೆ ಬಂದಿವೆ.
ಸ್ಥಳೀಯ ಪತ್ರಿಕೆಗಳ ಪ್ರಶಂಸಾರ್ಹ ಕೆಲಸ: ಪ್ರತಿಯೊಂದೂ ಜಿಲ್ಲೆಯಲ್ಲಿ ಪ್ರಬಲವಾಗಿ ಬೇರೂರಿರುವ ಸ್ಥಳೀಯ ಪತ್ರಿಕೆಗಳು ಪ್ರಶಂಸಾರ್ಹ ಕೆಲಸ ಮಾಡುತ್ತಿವೆ. ಅನೇಕ ಸುದ್ದಿಗಳು ಮೊದಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅನಂತರ ರಾಜ್ಯದ ಹಾಗೂ ದೇಶದ ಗಮನ ಸೆಳೆಯುತ್ತವೆ. ಸ್ಥಳೀಯ ಮಟ್ಟದಲ್ಲಿ ಅವುಗಳ ಪ್ರಭಾವದಿಂದಾಗಿ ರಾಜಕಾರಣಿಗಳು ಹಾಗೂ ಅಧಿಕಾರಸ್ಥರುಕೂಡ ಈ ಪತ್ರಿಕೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಸಣ್ಣ ಹಾಗೂ ಸ್ಥಳೀಯ ಮಟ್ಟದ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮದ ಅವಿಭಾಜ್ಯ ಅಂಗಗಳಾಗಿವೆ. ಸಣ್ಣ ಪತ್ರಿಕೆಗಳನ್ನು ಬಲಗೊಳಿಸುವುದಕ್ಕಾಗಿ ಪತ್ರಕರ್ತರಿಗೆ ತರಬೇತಿ, ಸಾಲ ಸೌಲಭ್ಯ ಮುಂತಾಗಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಂಗನಾಥ ದಿವಾಕರ, ಎಂ.ಬಿ.ಸಿಂಗ್ ಹಾಗೂ ಪಿ.ಆರ್.ರಾಮಯ್ಯ ಅವರ ನೇತೃತ್ವದ ಸಮಿತಿಗಳು ಮುಖ್ಯವಾಗಿ ಸಣ್ಣ ಪತ್ರಿಕೆಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ವರದಿ ನೀಡಿವೆ.
ಕನ್ನಡ ಪತ್ರಿಕಾರಂಗಕ್ಕೆ ಹಾವೇರಿಜಿಲ್ಲೆಯ ಕೊಡುಗೆ: ಕನ್ನಡ ಪತ್ರಿಕಾರಂಗಕ್ಕೆ ಹಾವೇರಿಜಿಲ್ಲೆಯ ಕೊಡುಗೆ ಮಹತ್ವದ್ದಾಗಿದೆ. ಹಾವೇರಿಜಿಲ್ಲೆಯ ನಿಯತಕಾಲಿಕಗಳ ಇತಿಹಾಸ ಮೆಲಕು ಹಾಕಿದಾಗ ವಾಣಿಜ್ಯ ನಗರಿ ರಾಣೇಬೆನ್ನೂರನಿಂದ ಪ್ರಕಟವಾಗುತ್ತಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರಾಗಿದ್ದ ಜಿ.ಪಿ.ಮಹಾನುಭಾವಿಮಠರು ಆರಂಭಿಸಿದ್ದ “ಶಿಡ್ಲು” ದಿನ ಪತ್ರಿಕೆಯು ೫೬ ವರ್ಷಗಳಿಂದ ಅನೇಕ ಏಳು-ಬೀಳಿನ ನಡುವೆ ನಿರಂತರವಾಗಿ ಪ್ರಕಟಣೆ ಮುಂದುವರೆಸಿಕೊಂಡು ಬಂದಿರುವ ಜಿಲ್ಲೆಯ ಹಿರಿಯ ದಿನ ಪತ್ರಿಕೆ ಎನ್ನುವ ಇತಿಹಾಸ ಹೊಂದಿದೆ. “ಶಿಡ್ಲು” ಪ್ರಾದೇಶಿಕ ಪತ್ರಿಕೆಯಾಗಿದ್ದು, ಆರ್.ಜಿ.ಮಹಾನುಭಾವಿಮಠ, ಎಸ್.ಜಿ.ಮಹಾನುಭಾವಿಮಠ ಸಹೋದರರು ಈ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ. ಈ ಪತ್ರಿಕೆಯ ವಿಶೇಷ ಎಂದರೆ ಅನೇಕ ಪತ್ರಕರ್ತರನ್ನು, ಲೇಖಕರನ್ನು ಹುಟ್ಟುಹಾಕುವ ಮೂಲಕ ಕನ್ನಡ ಪತ್ರಿಕಾರಂಗವನ್ನು ಶ್ರೀಮಂತಗೊಳಿಸಿದೆ. ಇಲ್ಲಿಂದ ತಯಾರಾದ ಅನೇಕ ಪತ್ರಕರ್ತರು ಇಂದು ನಾಡಿನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ, ಸ್ಥಾನೀಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವುದು ಸಾಕ್ಷಿಯಾಗಿದೆ.
ಇನ್ನು ಜಿಲ್ಲಾ ಕೇಂದ್ರದಿಂದ ಪ್ರಕಟವಾಗುತ್ತಿರುವ “ಮೂಡಣ” ದೈನಿಕವು ಹಾವೇರಿನಗರದ ಹಿರಿಯ ದಿನಪತ್ರಿಕೆಯಾಗಿದೆ. ದಿ.ವಿ.ಎಸ್.ಕಾಶೆಟ್ಟಿ ಅವರು ಆರಂಭಿಸಿದ್ದ “ಮೂಡಣವು” ಕಳೆದ ೪೬ ವರ್ಷಗಳಿಂದ ಪ್ರಕಟವಾಗುತ್ತಾ ಮುನ್ನಡೆದಿದೆ. ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕ್ರತಿ, ಪರಿಸರ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಿಗೆ ಮಹತ್ವ ನೀಡುವುದರ ಜೊತೆಗೆ ಈ ಪತ್ರಿಕೆಯ ಸಹ ಅನೇಕ ಏಳು-ಬೀಳುಗಳನ್ನು ಕಂಡಿದೆ. ಅನೇಕ ಕಷ್ಟ-ಕಾರ್ಪಣ್ಯಗಳ ನಡುವೆಯು ಸಹ ಜಿಲ್ಲೆಯ ಎಕೈಕ ಮಹಿಳಾ ಸಂಪಾಕರಾಗಿರುವ ಶ್ರೀಮತಿ ತೇಜಸ್ವಿನ ಕಾಶೆಟ್ಟಿಯವರು ಪತ್ರಿಕೆಯನ್ನು ಬಹಳಷ್ಟು ಧೈರ್ಯದಿಂದ ನಡೆಸಿಕೊಂಡು ದಾಪುಗಾಲನ್ನು ಇಟ್ಟಿದ್ದಾರೆ.
ಜಿಲ್ಲೆಯ ಪತ್ರಿಕಾಕ್ಷೇತ್ರದಲ್ಲಿ ೨೦೦೬ರಲ್ಲಿ ಮಹತ್ವದ ಬದಲಾವಣೆ ಆರಂಭವಾಯಿತು. ನಟ, ರಾಜಕಾರಣಿ ಬಿ.ಸಿ.ಪಾಟೀಲರು ಹಾಗೂ ಕಾರವಾರದ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅವರು ಜಿಲ್ಲಾ ಕೇಂದ್ರದಿಂದ ೨೦೦೬ರಲ್ಲಿ ಆರಂಭಿಸಿದ್ದ “ಕೌರವ” ದಿನಪತ್ರಿಕೆಯು ೮ಪುಟಗಳ ಬಹುವರ್ಣದಲ್ಲಿ ಸ್ವಂತ ಮುದ್ರಣ ಘಟಕಹೊಂದಿದ್ದ ಜಿಲ್ಲೆಯ ಏಕೈಕ ದಿನಪತ್ರಿಕೆಯಾಗಿತ್ತು. ಈ ಇಬ್ಬರು ದಿಗ್ಗಜರ ಜಂಟಿ ಸಾರಥ್ಯದಲ್ಲಿ ೬ ವರ್ಷ ಮುನ್ನಡೆದ “ಕೌರವ”ಪತ್ರಿಕೆಯನ್ನು ಕಾರಣಾಂತರಗಳಿಂದ ಮಾರಾಟ ಮಾಡಲಾಯಿತು. ಕೌರವದ ಸಾರಥ್ಯವನ್ನು ಉಧ್ಯಮಿ ಕೆ.ಮಂಜಣ್ಣ ಅವರು ವಹಿಸಿಕೊಂಡರು. ಅವರು ಈ ಪತ್ರಿಕೆಯನ್ನು ೩ವರ್ಷಗಳ ಕಾಲ ಮುನ್ನಡೆಸಿದರು. ಮತ್ತೆ ಈ ಪತ್ರಿಕೆಯ ಮಾಲಕತ್ವ ಬದಲಾಯಿತು. ರಾಣೇಬೆನ್ನೂರಿನ ಮಹಾನುಬಾವಿಮಠ ಸಹೋದರರು ಕೌರವದ ಸಾರಥ್ಯವನ್ನು ವಹಿಸಿಕೊಂಡು ೨೦೧೫ರಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಜಿಲ್ಲಾ ಪತ್ರಿಕೆಗಳಲ್ಲಿ ಸಂಚಲನ ಮೂಡಿಸಿದ್ದ ಕೌರವದಿನಪತ್ರಿಯಲ್ಲಿ ಅನೇಕ ಪ್ರತಿಭಾವಂತ ಪತ್ರಕರ್ತರು ತಯಾರಾಗಿ ನಾಡಿನ ಪತ್ರಿಕೋಧ್ಯಮದ ಶಕ್ತಿಯಾಗಿದ್ದಾರೆ. ಪತ್ರಕರ್ತರನ್ನು, ಸಾಹಿತಿಗಳನ್ನು ತಯಾರು ಮಾಡುವ ಕಾರ್ಖಾನೆ ಎನ್ನುವ ಖ್ಯಾತಿಯನ್ನು ಕೌರವ ಹೊಂದಿತ್ತು. ಕೌರವದ ವಿಶೇಷ ಎಂದರೆ ರಾಜ್ಯಮಟ್ಟದ ಪತ್ರಿಕೆಗಳು ಪ್ರತಿಭಾನುವಾರ ಸಾಹಿತ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುಟಗಳನ್ನು ಮೀಸಲಿಡುತ್ತವೆ. ಆದರೆ ಕೌರವದಲ್ಲಿ ಕಲೆ, ಸಾಹಿತ್ಯ, ಸಂಸ್ಕ್ರತಿ, ರಾಜಕೀಯ ಅಂಕಣಬರಹಗಳಿಗೆ ನಿತ್ಯವೂ ಒಂದು ಪುಟವನ್ನು ಮೀಸಲಿಡುವ ಮೂಲಕ ನಾಡಿನ ಸಾಂಸ್ಕ್ರತಿಕ ಸಾರಸ್ವತ ಲೋಕವನ್ನು, ಸಾಹಿತ್ಯಕ್ಷೇತ್ರವನ್ನು ಬೆಳೆಸಿದ, ಬೆಳಗಿದ ಕೀರ್ತಿ ಈ ಪತ್ರಿಕೆಯದ್ದಾಗಿದೆ. ದೀರ್ಘಕಾಲದಿಂದ ಸಾಹಿತಿಗಳ,ದಲಿತ, ಬಂಡಾಯಕ್ಕೆ ವೇದಿಕೆಯಾಗಿದ್ದ ಈ ಪತ್ರಿಕೆ ಇಂದು ಪ್ರಾದೇಶಿಕ ಪತ್ರಿಕೆಯಾಗಿದ್ದು, ಸ್ವಲ್ಪ iಟ್ಟಿಗೆ ಸೊರಗಿದಂತೆ ಕಂಡು ಬಂದರೂ ಈಗಲೂ ಸಹ ತನ್ನ ಛಾಪನ್ನು ಉಳಿಸಿಕೊಂಡು ಮುನ್ನಡೆದಿದೆ.
ಹಾವೇರಿಜಿಲ್ಲೆಯ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ನೀರು: ಕಳೆದ ಒಂದು ದಶಕದ ಹಾವೇರಿಜಿಲ್ಲೆಯ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ನೀರು ಹರಿಯಲಾರಂಭಿಸಿದೆ. ಪತ್ರಿಕೋಧ್ಯಮವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿರುವ ಪ್ರತಿಭಾವಂತರು ಜಿಲ್ಲಾ ಮಟ್ಟದಲ್ಲಿ ದಿನ ಪತ್ರಿಕೆಗಳನ್ನು ಆರಂಭಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಪತ್ರಿಕೋಧ್ಯಮಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಹಾವೇರಿಯ ಪ್ರಭುಗೌಡ ಪಾಟೀಲ ಅವರು ಆರಂಭಿಸಿರುವ ತಮ್ಮ ಸಂಪಾದಕತ್ವದ “ಸಮಗ್ರ ಕರ್ನಾಟಕ” ದಿನಪತ್ರಿಕೆ, ಮಂಜುನಾಥ ಅಡ್ಮನಿ ಅವರ ಸಂಪಾದಕತ್ವದ “ಹೊಸಧ್ವನಿ”, ರಾಣೇಬೆನ್ನೂರಿನ ವೇದಮೂರ್ತಿ ಅವರ ಸಂಪಾದಕತ್ವದ “ಪಾಂಡವ”, ನಿಂಗಪ್ಪ ಗುದಗೇರ ಸಂಪಾದಕತ್ವದ ರಾಣೇಬೆನ್ನೂರ ನಗರವಾಣಿ, ಮಂಜುನಾಥ ಬಾರ್ಕಿ ಸಂಪಾದಕತ್ವದ “ಪ್ರಜಾಘರ್ಜನೆ”, ಶಿವಕುಮಾರ ಓಲೇಕಾರ ಅವರ ಸಂಪಾದಕತ್ವದ “ಸಮಾಲೋಚನೆ ಸುದ್ದಿ”, ಹಾವೇರಿ ಪ್ರಿಯಾಂಕ ಶಂಕರ ಕೊಪ್ಪದ ಸಂಪಾದಕತ್ವದ “ಮಾತಿನ ಮುನ್ಸುಚನೆ” ಪತ್ರಿಕೆಗಳನ್ನು ಉಲ್ಲೇಖಿಸಬಹುದಾಗಿದೆ.
ಹೊಸ ಪ್ರಯೋಗಗಳಿಗಾಗಿ, ಹೊಸ ದಿಕ್ಕಿನ ಹುಡುಕಾಟಕ್ಕಾಗಿ, ನಮ್ಮ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದ ಶೋಧಕ್ಕಾಗಿ ಆಧುನಿಕ ಪ್ರವೃತ್ತಿಗಳನ್ನೂ ಪ್ರತಿನಿಧಿಸುವ ಹಾಗೆ ವೈವಿಧ್ಯಮಯ ಆಸಕ್ತಿಯನ್ನು ಈ ಎಲ್ಲ ಪತ್ರಿಕೆಗಳು ಮೈಗೈಡಿಸಿಕೊಂಡಿವೆ. ಕಳೆದ ಒಂದು ವರ್ಷದಲ್ಲಿ ಇನ್ನು ಹತ್ತಾರು ಪತ್ರಿಕೆಗಳು ಆರಂಭವಾಗಿರಬಹುದೇನೋ? ನನ್ನ ಅರಿವಿನ ವಿಸ್ತಾರಕ್ಕೆ ದಕ್ಕಿದ ಜಿಲ್ಲಾ ಮಟ್ಟದ ಪತ್ರಿಕೆಗಳ ಮಾಹಿತಿ ಅನುಸಾರ ನಾ ಕಂಡಂತೆ ನನಗೆ ಕಂಡಷ್ಟು ಮಾಹಿತಿ ಇದಾಗಿದೆ.
ಅಸ್ತಿತ್ವ ಉಳಿಸಿಕೊಳ್ಳಲು ಜಿಲ್ಲಾ ಮಟ್ಟದ ಪತ್ರಿಕೆಗಳ ಶ್ರಮ: ಕ್ಷಣಕ್ಷಣಕ್ಕೂ ಪ್ರಪಂಚದ ಮಟ್ಟದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತಿವೆ. ಅದರ ಪರಿಣಾಮ ಸ್ಥಳೀಯ ಪತ್ರಿಕೆಗಳ ಮೇಲಾಗಿದೆ. ಈಗ ಕನ್ನಡದ ದೊಡ್ಡ ಪತ್ರಿಕೆಗಳೇ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಬೆಲೆಯಿಳಿಸಿಕೊಂಡು ಪ್ರಸಾರ ಹೆಚ್ಚಿಸಿಕೊಳ್ಳುವ ಕಸರತ್ತಿನಲ್ಲಿ ಸ್ಪರ್ಧೆಗಿಳಿದಿವೆ. ಇವುಗಳ ಮಧ್ಯ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಿಲ್ಲಾ ಮಟ್ಟದ ಪತ್ರಿಕೆಗಳು ಶ್ರಮಿಸುತ್ತಿವೆ. ದಶಕದ ಹಿಂದೆ ಕೈಗಾರಿಕೆ ಹಾಗೂ ವಾಣಿಜ್ಯ ವ್ಯವಹಾರಗಳಿಂದಾಗುವ ಮುದ್ರಣ ಮಾಧ್ಯಮಕ್ಕೆ ಬರುತ್ತಿದ್ದ ಜಾಹೀರಾತುಗಳು ದೂರದರ್ಶನ ಚಾನಲುಗಳ ಪಾಲಾಗುತ್ತಿವೆ. ಹೀಗಾಗಿ ಪತ್ರಿಕೆಗಳ ಜಾಹೀರಾತು ಆದಾಯ ಶೇಕಡಾವಾರು ಇಳಿಕೆ ಕಂಡಿದೆ. ಪತ್ರಿಕೆಗಳ ನಡುವಿನ ಪ್ರಸಾರದ ಸ್ಪರ್ಧೆಯಲ್ಲಿ ಪ್ರಸಾರವೂ ಇಳಿಮುಖವಾಗಿದೆ. ಮಾಹಿತಿ ತಂತ್ರಜ್ಞಾನ ಪ್ರವೇಶದಿಂದ ಪತ್ರಿಕೋದ್ಯಮ ರಂಗದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿವೆ. ಮಾಹಿತಿ ಜ್ಞಾನದ ದೃಷ್ಟಿಯಿಂದ ಈಗ ಪ್ರಪಂಚ ಜಾಗತಿಕ ಹಳ್ಳಿಯಾಗಿ ಪರಿವರ್ತಿತವಾಗುತ್ತಿದೆ.
ಪತ್ರಕರ್ತರ ಸ್ಥಿತಿ-ಗತಿ: “ರಾಜ್ಯಮಟ್ಟದ ಪತ್ರಿಕೆಗಳಾಗಲಿ, ಜಿಲ್ಲಾ ಮಟ್ಟದ ಪತ್ರಿಕೆಗಳಾಗಲಿ ಅವುಗಳ ಅಸ್ತಿತ್ವ ಇರುವುದು ಆಯಾ ಪತ್ರಿಕೆಗಳನ್ನು ಪ್ರತಿನಿಧಿಸುವ ಪತ್ರಕರ್ತರನ್ನು ಅವಲಂಭಿಸಿದೆ”. “ಬದ್ಧತೆ” ಮತ್ತು “ಸಿದ್ಧಾಂತ”ಗಳೇ “ತಮ್ಮ ಜೀವನದ ಉಸಿರಾಗಿಸಿಕೊಂಡು, ಪತ್ರಿಕೆಗಳಿಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟು ಕೆಲಸ ಮಾಡುವವರು ಇದ್ದಾರೆ. ಅಡ್ಡಹಾದಿ ಹಿಡಿದು ಆಡ್ನಾಡಿ ಆದವರು ಇದ್ದಾರೆ”. “ಊರು-ಕೇರಿ ಎಂದ ಮೇಲೆ ಕೊಳಕು, ಮಾಲಿನ್ಯ, ಟೀಕೆಗಳು, ನಿಂದನೆಗಳು, ಅಪಸ್ವರಗಳು, ಹೊಗಳಿಕೆ, ತೆಗಳಿಕೆ ಇರುವುದು ಸಹಜ”!. ಈ ಎಲ್ಲದರ ಮಧ್ಯ ಸಮಾಜಮುಖಿಯಾಗಿ ಇರುವ ಅನೇಕ ಪತ್ರಕರ್ತರು ನಮ್ಮಗಳ ಮಧ್ಯ ಇದ್ದಾರೆ. ಆದರೆ ಅಂತವರ ಸಂಖ್ಯೆ ಕಡಿಮೆ ಇದೆ. ತಮ್ಮ ವೈಯಕ್ತಿಕ ಸುಖ-ಭೋಗಗಳನ್ನು ತ್ಯಜಿಸಿ, ಸಮಾಜದ ಒಳಿತಿಗಾಗಿ ತಮ್ಮ ತತ್ವಗಳಿಗೆ ಬದ್ಧರಾಗಿ ಬದ್ಧತೆ ಮತ್ತು ಸಿದ್ಧಾಂತದೊಂದಿಗೆ ಜೀವನವನ್ನು, ಬದುಕನ್ನು ಸವೆಸಿದ ಪತ್ರಕರ್ತರು ಇದ್ದಾರೆ.
“ಸಮಾಜದ ಹಿತಾಸಕ್ತಿ, ಸತ್ಯಶೋಧನೆ ಮತ್ತು ನೈತಿಕ ಮೌಲ್ಯಗಳಿಗೆ ತಮ್ಮನ್ನು ಸಮರ್ಪಿಸಿಕೊಂಡ ಪತ್ರಕರ್ತರನ್ನು ಕೆಲ ಪತ್ರಿಕೆಗಳ ಮಾಲಕರು ಸರಿಯಾಗಿ ನಡೆಸಿಕೊಳ್ಳವುದಿಲ”!. “ತಾನು ಹಸಿದುಕೊಂಡು ಪತ್ರಿಕೆಗಳ ಹೊಟ್ಟೆ ತುಂಬಿಸುವ ಪತ್ರಕರ್ತರಿಗೆ ಸರಿಯಾದ ಸಮಯಕ್ಕೆ ಅಂದರೆ ತಿಂಗಳ ಪೂರ್ತಿ ಹೊಟ್ಟೆ-ಬಟ್ಟೆ ಕಟ್ಟಿ ದುಡಿಯುವ ಪತ್ರಕರ್ತರಿಗೆ ಸರಿಯಾಗಿ ಕೂಲಿ ನೀಡುವುದಿಲ್ಲ”!. “ಸುದ್ದಿ ಕಳಿಸಲು ಕಂಪ್ಯೂಟರ್, ವಿದ್ಯುತ್, ಇಂಟರ್‌ನೆಟ್ ಬಹಳ ಮುಖ್ಯ. ಇವುಗಳ ಖರ್ಚನ್ನು ಸಹ ನೀಡದ ಪತ್ರಿಕಾ ಮಾಲಕರು ಉಂಟು”!. “ಇವರು ಮಾತ್ರ ಗಡದ್ದಾಗಿ ತಿಂದುಂಡು ಹೊಟ್ಟೆ ಬೆಳೆಸಿಕೊಂಡು ಓಡಾಡುತ್ತಾ ತಮ್ಮ ಪತ್ರಿಕೆಗಳಿಗಾಗಿ ಹಗಲಿರುಳು ಶ್ರಮಿಸುವ ಪತ್ರಕರ್ತರಿಗೆ ಸಂಬಳ ನೀಡುವುದು ಎಂದರೆ ಇವರಿಗೆ ಹೊಟ್ಟಿಬ್ಯಾನಿ, ತಲಿಬ್ಯಾನಿ ಬರುತ್ತದೆ”!. (ಎಲ್ಲ ಪತ್ರಿಕಾ ಮಾಲಕರು ಹೀಗಿರುವುದಿಲ್ಲ, ಪ್ರತಿ ತಿಂಗಳು ನಿಗದಿ ಪಡಿಸಿದ ದಿನಾಂಕದಂದು ಸಂಬಳವನ್ನು ತಮ್ಮ ವರದಿಗಾರರ, ಸಿಬ್ಬಂದಿಗಳ ಖಾತೆಗೆ ಜಮಾ ಮಾಡುವ ಮೂಲಕ ಜವಾಬ್ದಾರಿಯಿಂ ನಡೆದುಕೊಳ್ಳುತ್ತಾರೆ) ಆದರೆ, “ತಮ್ಮ ಪತ್ರಿಕೆಗಳಿಗೆ ಜೀವ ತೇದು, ಹಗಲು ರಾತ್ರಿ ಎನ್ನದೇ ದುಡಿದು ಅನಾರೋಗಕ್ಕೆ ತುತ್ತಾಗಿ ಕೈ-ಕಾಲು ಕಳೆದುಕೊಂಡ ಕಣ್ಣೀರಲ್ಲಿ ಕೈತೊಳೆಯುವ ಪತ್ರಕರ್ತರ ನೆರವಿಗೆ ಕೆಲವು ಮಾಲಿಕರು ಮುಂದಾಗದಿರುವುದು ದುರಂತದ ಸಂಗತಿಯಾಗಿದೆ”. ಪತ್ರಿಕಾ ಕ್ಷೇತ್ರ ಬಿಟ್ಟು ಬೇರೆ ಉದ್ಯೋಗ ಗೊತ್ತಿರದ, ಜೀವನದ ಇಳಿ ಸಂಜೆಯಲ್ಲಿರುವ ಪತ್ರಕರ್ತರ ಸ್ಥಿತಿ ನೀಜಕ್ಕೂ ತುಂಬಾ ಶೋಚನಿಯವಾಗಿದೆ”. “ಒಂದು ತಿಂಗಳಲ್ಲ, ಎರಡು ತಿಂಗಳಲ್ಲ, ವರ್ಷ ಪೂರ್ತಿ ಈ ಗೋಳು ಇರುವುದೇ?. ಸಂಬಳ ಕೇಳಿದಾಗ ಒಮ್ಮೆ ಐದಾರು ಸಾವಿರೂ ನೀಡಿ ಕೈತೋಳೆದುಕೊಳ್ಳುತ್ತಾರೆ.
“ಆಸ್ಪತ್ರೆಯ ಖರ್ಚು, ಸಂಸಾರದ ಭಾರ, ಮಕ್ಕಳ ಶಾಲಾ ಶುಲ್ಕ, ಅಕ್ಕಿ-ಬೇಳೆ, ಜೋಳ, ವಾರದ ಸಂತೆ ಎನ್ನುವ ಚಿಂತೆಯಲ್ಲಿ ಕಳೆದು ಹೋಗುವ, ಕಳೆದುಹೋಗಿರುವ ಕೆಲ ಪತ್ರಕರ್ತರು ಮನೆಯ ವಿದ್ಯುತ್ ಬಿಲ್ ಕಟ್ಟಲಾಗದೇ ಹೆಸ್ಕಾಂನವರು ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಿದ ಉದಾಹರಣೆಗಳು ಉಂಟು”!. “ಬೇರೆಯವರ ಹತ್ತಿರ ಸಾಲಾ ಮಾಡಿ, ಭಿಕ್ಷೆ ಬೇಡಿ ಹಣ ಪಡೆದು ವಿದ್ಯುತ್, ಇಂಟರ್‌ನೆಟ್ ಸಂಪರ್ಕ ಮರು ಪಡೆದಿರುವ ಸಂಗತಿಗಳು ನಡೆದಿವೆ”. “ಸಮಾಜವನ್ನು ಬೆಳಗಿ ತಾನು ಮಾತ್ರ ಕತ್ತಲಲ್ಲಿರುವ ಪತ್ರಕರ್ತರನ್ನು ನೋಡುವ ಮಾಲಕರ ಮನಸ್ಥಿತಿ ಬದಲಾಗಬೇಕು. ಕಷ್ಟಪಟ್ಟು ದುಡಿಯುವ ಪತ್ರಕರ್ತರಿಗೆ ಕನಿಷ್ಠ ದಿನಗೂಲಿಯನ್ನಾದರೂ ನೀಡಬೇಕು”.
ಪತ್ರಕರ್ತರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕಿದೆ. “ಪತ್ರಕರ್ತರು ಬೇರೆಲೋಕದಿಂದ ಬಂದವರಲ್ಲ, ಅವರ ಸಹ ಮನುಷ್ಯರು ಎನ್ನುವ ರೀತಿ ಸಮಾಜ ಕಾಣಬೇಕಿದೆ. ಪತ್ರಕರ್ತರಿಗೂ ಈ ಅರಿವು ಇರಬೇಕಾಗುತ್ತದೆ”. ಸಾಮಾಜ ಆ ರೀತಿ ಕಾಣುವಂತೆ ಪತ್ರಕರ್ತರ ನಡುವಳಿಕೆಯೂ ಇರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ, ಭ್ರಷ್ಟಾಚಾರವನ್ನು ಬಯಲಿಗೆಳೆಯುವಲ್ಲಿ ಮತ್ತು ಜನಸಾಮಾನ್ಯರ ಧ್ವನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರು ಕೈಗೆ ಕೊಳಕನ್ನು ಅಂಟಿಸಿಕೊಳ್ಳದೇ ಮುನ್ನಡೆಯಬೇಕಿದೆ.
ಸತ್ಯದ ಹುಡುಕಾಟ: “ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ, ಸತ್ಯಾಂಶಗಳನ್ನು ಮಾತ್ರ ಜನರಿಗೆ ತಲುಪಿಸುವುದು ಪತ್ರಕರ್ತರ ಮುಖ್ಯ ಗುರಿಯಾಗಿರುತ್ತದೆ. ಸಮಾಜದಲ್ಲಿನ ಶೋಷಿತರು, ದೀನ-ದಲಿತರು ಮತ್ತು ಅನ್ಯಾಯಕ್ಕೊಳಗಾದವರ ಪರವಾಗಿ ನಿಂತು ಧ್ವನಿಯಾಗಬೇಕಿದೆ. ಪತ್ರಕರ್ತರು ರಾಜಕೀಯ ಒತ್ತಡಗಳು, ಬೆದರಿಕೆಗಳು ಅಥವಾ ಆಮಿಷಗಳಿಗೆ ಬಲಿಯಾಗದೆ ಪತ್ರಿಕಾ ಧರ್ಮವನ್ನು ಎತ್ತಿಹಿಡಿಯುತ್ತಾರೆ. ಸುದ್ದಿ ಬರೆಯುವಾಗ ಅಥವಾ ಪ್ರಸಾರ ಮಾಡುವಾಗ ಸ್ವಂತ ಅಭಿಪ್ರಾಯಗಳನ್ನು ಬೆರೆಸದೆ, ನಿಷ್ಪಕ್ಷಪಾತವಾಗಿ ವಾಸ್ತವವನ್ನು ಬಿಂಬಿಸುವುದು ಬದ್ಧತೆಯಾಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಮುನ್ನಡೆ ಹಾಗೂ ತ್ವರಿತ ಸುದ್ದಿಗಳ ಭರಾಟೆಯಲ್ಲಿ ಪತ್ರಿಕೋದ್ಯಮವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿರುವಾಗ, ಬದ್ಧತೆಯ ಪತ್ರಕರ್ತರ ಅಗತ್ಯತೆ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ.
ಲೇಖನ; ಮಾಲತೇಶ ಅಂಗೂರ
ಪತ್ರಕರ್ತ/ಸಾಹಿತಿ, ಹಾವೇರಿ

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾನಗಲ್ ತಾಲೂಕಿನ ನರೇಗಲ್ ಘಟನೆ ಕೋಮು ಸೌಹಾರ್ದತೆ ಕದಡುವ ಹೇಯ ಕೃತ್ಯ: ಬಸವರಾಜ ಬೊಮ್ಮಾಯಿ

ಹಾನಗಲ್ ತಾಲೂಕಿನ ನರೇಗಲ್ ಘಟನೆ ಕೋಮು ಸೌಹಾರ್ದತೆ ಕದಡುವ ಹೇಯ ಕೃತ್ಯ:...

ಉಡಚಪ್ಪ ಮಾಳಗಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ

ಉಡಚಪ್ಪ ಮಾಳಗಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ ಹಾವೇರಿ:ಸಮಾಜ ಸೇವೆ, ಜನಸೇವೆ, ಮಾನವೀಯ...

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...