ಹಾವೇರಿ : ವರದಕ್ಷಿಣೆ ಕಿರುಕುಳ: ಆರೋಪಿತರಿಗೆ ೧೦ ವರ್ಷ ಕಾರಾಗೃಹ ಶಿಕ್ಷೆ

Date:

ಹಾವೇರಿ : ತವರುಮನೆಯಿಂದ ಹೆಚ್ಚುವರಿ ರೂ. ಐದು ಲಕ್ಷ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪಿತಾದ ಮದಾರಅಲಿ ಅಬ್ದುಲಖಾದರ ಜಿಲಾನಿ ಕಾಗಿನೆಲ್ಲಿ, ದಿಲ್‌ಶಾದಬೇಗಂ ಕೋಂ ಅಬ್ದುಲಖಾದರ ಜಿಲಾನಿ ಹಾಗೂ ಅಬ್ದುಲಖಾದರ ಮದರಸಾಬ ಜಿಲಾನಿ ಅವರಿಗೆ ೧೦ ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ರೂ.೧೨ ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀ ನಾರಾಯಣ ಅವರು ಗುರುವಾರ ತೀರ್ಪು ನೀಡಿದ್ದಾರೆ.
ಆಫ್ರಿನ್ ಕೋಂ ಮದಾರಅಲಿ ಕಾಗಿನೆಲ್ಲಿ ಅವರು ಮದಾರಅಲಿ ಅಬ್ದುಲಖಾದರ ಜಿಲಾನಿ ಕಾಗಿನೆಲ್ಲಿ ಅವರೊಂದಿಗೆ ೨೮ ಎಪ್ರಿಲ್ ೨೦೧೯ ರಂದು ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ರೂ.ಎರಡು ಲಕ್ಷ ಹಣ, ೩ ತೊಲೆ ಬಂಗಾರ, ಎರಡು ಬಂಗಾರದ ಉಂಗುರ ಮತ್ತು ಗೃಹಬಳಕೆ ಸಾಮಾನುಗಳನ್ನು ನೀಡಲಾಗಿತ್ತು.
ಮದುವೆಯ ನಂತರ ಆಫ್ರಿನ್ ಕೋಂ ಮದಾರಅಲಿ ಕಾಗಿನೆಲ್ಲಿ ಅವರಿಗೆ ಹೆಚ್ಚುವರಿಯಾಗಿ ರೂ. ಐದು ಲಕ್ಷ ಹಣ ತರುವಂತೆ ದಿಲ್‌ಶಾದಬೇಗಂ ಕೋಂ ಅಬ್ದುಲಖಾದರ ಜಿಲಾನಿ ಹಾಗೂ ಅಬ್ದುಲಖಾದರ ಮದರಸಾಬ ಜಿಲಾನಿ, ಬೀಬಿಫಾತಿಮಾ ಇರ್ಫಾನ ಶಂಸುದ್ದೀನ್ ಸವಣೂರ ಅವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುವುದರ ಜೊತೆಗೆ ಗ್ಯಾಸ್ ಬ್ಲಾಸ್ಟ್ ಆಗುವಂತೆ ಸಿಲೆಂಡರ್ ನಾಬನ್ನು ಲೂಜ್ ಮಾಡಿ ಸಾಯುವಂತೆ ಮಾಡುವ ಅಪರಾಧಕ್ಕಾಗಿ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ಪಿ ಐ ಮಂಜಣ್ಣ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿತರ ಮೇಲೆ ಕಲಂ:೪೯೮(ಎ), ೩೨೩, ೩೦೭,೫೦೬ ಭಾ.ದಂ.ಸಂ ಮತ್ತು ೩ ಮತ್ತು ೪ ವರದಕ್ಷಿಣೆ ನಿಷೇಧ ಕಾಯ್ದೆ-೧೯೬೧ ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಜಿ.ಕೂಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...