
ಹಾವೇರಿ: ಗೊಮ್ಮಟನಗರ ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜು.೩೦ರಂದು ನಡೆದ ೧೦ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ದಸಾಪ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಹಾವೇರಿಜಿಲ್ಲೆಯ ಸಾಹಿತಿ ಬಿ.ಶ್ರೀನಿವಾಸ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಹಾಗೂ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಸಂಜಯಗಾಂಧಿ ಸಂಜೀವಣ್ಣನವರ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸಮ್ಮೇಳನದ ಸಾರ್ವಾಧ್ಯಕ್ಷರಾದ ಡಾ.ಎಚ್.ಟಿ.ಪೋತೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಗೊಳಸಂಗಿ, ಹಾವೇರಿಜಿಲ್ಲಾ ದಸಾಪ ಘಟಕದ ಅಧ್ಯಕ್ಷ ಮಾಲತೇಶ ಅಂಗೂರ ಹಾಜರಿದ್ದರು.