ಅರ್ಹ ಕಾರ್ಮಿಕರ ಕಾರ್ಡ ರದ್ದು, ಕಾರ್ಮಿಕ ಇಲಾಖೆಯ ವಿರುದ್ಧ ಕಟ್ಟಡ ಕಾರ್ಮಿಕರ ಆಕ್ರೋಶ, ಆಕ್ಷೇಪಣೆ ಅರ್ಜಿಸಲ್ಲಿಸಲು ಕಾಲಾವಕಾಶ ವಿಸ್ತರಣೆಗೆ ಆಗ್ರಹ

Date:

ಅರ್ಹ ಕಾರ್ಮಿಕರ ಕಾರ್ಡ ರದ್ದು, ಕಾರ್ಮಿಕ ಇಲಾಖೆಯ ವಿರುದ್ಧ ಕಟ್ಟಡ ಕಾರ್ಮಿಕರ ಆಕ್ರೋಶ,
ಆಕ್ಷೇಪಣೆ ಅರ್ಜಿಸಲ್ಲಿಸಲು ಕಾಲಾವಕಾಶ ವಿಸ್ತರಣೆಗೆ ಆಗ್ರಹ
ಹಾವೇರಿ: ಕಾರ್ಮಿಕ ಇಲಾಖೆಯ ಕಾರ್ಮಿಕರ ಕಾರ್ಡಗಳನ್ನು ಅನರ್ಹರು ಪಡೆದಿದ್ದಾರೆಂದು ಅರ್ಹ ಕಾರ್ಮಿಕರ ಕಾಡುಗಳನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ರದ್ದು ಮಾಡಿದ್ದು, ಈಗಲೂ ಸಹ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಗಿಸಿಕೊಂಡಿರುವ ಅರ್ಹ ಕಾರ್ಮಿಕರ ಕಾರ್ಡಗಳನ್ನು ರದ್ದಮಾಡಲಾಗಿದ್ದು, . ರದ್ದಾಗಿರುವ ಅರ್ಹ ಕಾರ್ಮಿಕರ ಕಾರ್ಡಗಳನ್ನು ಕೂಡಲೆ ಮರು ಮಂಜೂರು ಮಾಡಬೇಕು, ಇಲ್ಲದೇ ಹೋದರೆ ಕಾರ್ಮಿಕರೊಂದಿಗೆ ಕಾರ್ಮಿಕ ಇಲಾಖೆಗೆ ಮುತ್ತಿಗೆಹಾಕಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮುಗದೂರು ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು.
ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ನೂರಾರು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರೊಂದಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿದರು. ಅರ್ಹ ಕಾರ್ಮಿಕರನ್ನು ಕೃಷಿಕನೆಂದು, ಡೈವರ ಎಂದು ಕಾರಣ ನೀಡಲಾಗಿದೆ. ಅಸಲಿಗೆ ರದ್ದಾಗಿರುವ ಕಾರ್ಮಿಕರಿಗೆ ಬೇಸಾಯ ಮಾಡಲು ಹೊಲವಾಗಲಿ, ವಾಹನ ಓಡಿಸಲು ವಾಹನಗಳಾಗಲಿ ಇರುವುದಿಲ್ಲ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಎಲ್ಲೋ ಕುಳಿತು ಸರ್ವೆಮಾಡಿರುವುದರಿಂದ ಈರೀತಿ ಅವಘಡಗಳಾಗಿವೆ. ಸರ್ಕಾರ ರದ್ದುಪಡಿಸಿಲು ನೀಡಿದ ಕಾರಣದಂತೆ ಕಾರ್ಮಿಕರಿಗೆ ಹೊಲ ಹಾಗೂ ವಾಹನ ನೀಡಿ ಬೇಕಾದರೇ ಕಾರ್ಡ ರದ್ದುಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹತ್ತಾರು ವರ್ಷಗಳಿಂದ ಹಾವೇರಿ ಜಿಲ್ಲಾ ಬಿಲ್ಲಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘವು ೨೫೦೦ರಕ್ಕೂ ಅಧಿಕ ಕಾರ್ಮಿಕರ ಸದಸ್ಯತ್ವವನ್ನು ಹೊಂದಿದ್ದು, ಸಂಘದ ಸದಸ್ಯರು ಒಂದಿಲ್ಲ ಒಂದು ಕಟ್ಟಡ ನಿರ್ಮಾಣ ಸೇರಿದಂತೆ ಇತರೇ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಸಾವರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರನ್ನು ಕೃಷಿಕ, ಚಾಲಕ ನೆಂದು ಕಾರಣಗಳನ್ನು ನೀಡಿ ಕಾರ್ಮಿಕ ಕಾರ್ಡಗಳನ್ನು ರದ್ದು ಪಡಿಸಲಾಗಿದೆ. ಇದರಲ್ಲಿ ಹಲವಾರು ನಿವೃತ್ತಿ ಅಂಚಿನಲ್ಲಿರುವ ಕೆಲಸಮಾಡಲು ಸಾಧ್ಯವಾಗದ ಹಿರಿಯ ಕಾರ್ಮಿಕರಿದ್ದಾರೆ. ಅವರ ಕಾರ್ಡಗಳನ್ನು ರದ್ದುಪಡಿಸಲಾಗಿದೆ. ಅವರು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದಾದರೂ ಹೇಗೆ?
ಕೆಲವು ನೈಜ ಕಾರ್ಮಿಕರ ಕಾರ್ಡಗಳು ಕೂಡಾ ರದ್ದಾಗಿದ್ದು, ಅರ್ಹ ಕಾರ್ಮಿಕರಿಗೆ ಅನ್ಯಾಯವಾಗದಂತೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ನಕಲಿ ಕಾರ್ಡಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಕಲಿ ಕಾರ್ಡಗಳನ್ನು ಪತ್ತೆ ಮಾಡಲು ನಮ್ಮ ಜಿಲ್ಲೆಗೆ ಬಂದಿದ್ದ ೭೫ ಅಧಿಕಾರಿಗಳ ತಂಡ ಮನೆ-ಮನೆಗೆ ಭೇಟಿ ನೀಡದೇ ದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸಿರುವುದು ಸರಿಯಲ್ಲ. ರದ್ದಾಗಿರುವ ಕಾರ್ಡಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊಟ್ಟಿರುವ ಒಂದು ವಾರ ಕಾಲಾವಕಾಶ ಸಾಕಾಗುವುದಿಲ್ಲ. ಕೆಲವು ಕಾರ್ಮಿಕರು ಅನಕ್ಷರಸ್ಥರಾಗಿದ್ದಾರೆ. ಇನ್ನೂ ಕೆಲವರು ದುಡಿಮೆಗೆ ಬೇರೆ-ಬೇರೆ ಪ್ರದೇಶಗಳಿಗೆ ವಲಸೆ ಹೋಗಿರುತ್ತಾರೆ. ಆಕ್ಷೇಪಣೆ ಸಲ್ಲಿಸಲು ಅರ್ಜಿ ಸಲ್ಲಿಸಲು ಕನಿಷ್ಠ ಒಂದು ತಿಂಗಳು ಕಾಲಾವಕಾಶ ಕೊಡಬೇಕು.
ಹಾವೇರಿಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಕಾರ್ಮಿಕರ ಕಾರ್ಡಗಳು ಸೃಷ್ಟಿಯಾಗಲು ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳೂ ಕೂಡಾ ಕಾರಣರಾಗಿದ್ದಾರೆ. ನಕಲಿ ಕಾರ್ಮಿಕರ ಕಾರ್ಡಗಳಿಗೆ ಮಂಜೂರಾತಿ ನೀಡಿದ ತಪ್ಪಿತಸ್ಥರಾದ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಕಟ್ಟಡ ಕಾರ್ಮಿಕರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿ ಮಹೇಶ ಕೂಳಲಿ ಆಕ್ಷೇಪಣೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಇಲಾಖೆ ಯಾವುದೇ ಕಾರ್ಡಗಳನ್ನ ರದ್ದು ಪಡಿಸಿಲ್ಲ. ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ಕಾರ್ಮಿರ ಕಾರ್ಡಗಳು ರದ್ದಾಗಿದ್ದರೇ ಅಂತವರು ಅರ್ಜಿಸಲ್ಲಿಸದಲ್ಲಿ ಅವುಗಳನ್ನು ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮುಗದೂರು, ಮುಖಂಡರಾದ ನಜೀರ್‌ಸಾಬ ಪಟೇಲ, ಗುಲ್ಜಾರಹ್ಮದ ಗಣಜೂರ, ಸಂಜೀವಪ್ಪ ಹರಪನಹಳ್ಳಿ, ಹಸನಸಾಬ ಗಣಜೂರ, ಮಾರುತಿ ಕದರಮಂಡಲಗಿ, ನಾಗರಾಜ ಮಲಗೋಡ, ಬಸಯ್ಯ ಕುಲಕರ್ಣಿ, ರಿಯಾಜ ಅಹ್ಮದ ಕೊಟ್ಟಿಗೇರಿ, ಮಹ್ಮದರಫೀಕ್ ದೇವಗಿರಿ, ಗೌಸಹ್ಮದ ದೇವಿಹೂಸೂರು, ಲಕ್ಷ್ಮಣ ಗಾಣಿಗೇರ, ಮಖಬೂಲಹ್ಮದ ಇನಾಂದಾರ, ಅಹ್ಮದ್ ಪಟೇಲ್, ಹುಸೇನಸಾಬ ಲಿಂಗದಹಳ್ಳಿ , ನಬಿಸಾಬ ಮುಂಡಗೋಡ, ಅಹ್ಮಭಾಷಾ ಕಾತೂರ, ಹಜರತಲಿ ಶೇಖಸನದಿ, ಮುಕ್ತಿಯಾರ ಅಹ್ಮದ ಹುಂಬಿಗೇರಿ, ಪ್ರಕಾಶ ಅರಸನಾಳ, ರಂಜಾನಖಾನ ಜಮಾದಾರ, ಮಾರುತಿ ಮುಳಗುಂದ, ಬಸವರಾಜ ಹರಪನಹಳ್ಳಿ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ: ಸಚಿವ ಸಂಪುಟ ಅಸ್ತು

೫೨ ಕೋಟಿ ರೂ. ವೆಚ್ಚದಲ್ಲಿ ಮದಗ-ಮಾಸೂರು ಕೆರೆ ನಾಲೆಗಳ ದುರಸ್ತಿ:...

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್  

ಮೊಬೈಲ್ ಮಕ್ಕಳು ಸಮಾಜಮುಖಿಗಳಾಗುವುದಿಲ್ಲ :ಕೆ.ವಿ.ಪ್ರಭಾಕರ್     ಹಾವೇರಿ : ರಾಗಿಕಾಳಿಗೆ ಭೂಮಿಯನ್ನೇ...

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...