ಉಚ್ಚನ್ಯಾಯಾಲದ ಆದೇಶ ಬರುವವರೆಗೂ ಬೆಳವಗಿಗ್ರಾಪಂ ಯಥಾಸ್ಥಿತಿಗೆ ಡಿಎಸ್‌ಎಸ್ ಮನವಿ
ಹಾವೇರಿ: ಹಾವೇರಿ ತಾಲೂಕಿ ಬೆಳವಿಗಿ ಗ್ರಾಮ ಪಂಚಾಯತ್ ಅಧ್ಯಕ್ಷರ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಮೀಸಲಾತಿ ವಿಷಯಕ್ಕೆ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಉಚ್ಚ ನ್ಯಾಯಾಲಯದ ತೀರ್ಪು ಬರುವವರೆಗೆ ಪಂಚಾಯತ್‌ನ ಹಾಲಿ ಸದಸ್ಯರು ಪಂಚಾಯತಿಯಲ್ಲಿ ಯಾವುದೇ ಕಾರ್ಯಕಲಾಪ ನಡೆಸದಂತೆ, ಹೊಸ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕವು ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ಮನವಿ ಅರ್ಪಿಸಿ ಆಗ್ರಹಿಸಿದೆ.
ಬೆಳವಗಿ ಗ್ರಾಮಪಂಚಾಯತ್‌ನ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ನಿಗದಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಉಚ್ಚ ನ್ಯಾಯಾಲಯದ ತೀರ್ಪು ಬರುವವರೆಗೆ ಪಂಚಾಯತ್ ಸದಸ್ಯರು ಸದಸ್ಯರು ಯಾವುದೇ ಕಾರ್ಯಕಲಾಪ ನಡೆಸದಂತೆ, ಹೊಸ ಕಾಮಗಾರಿಗಳನ್ನು ಕೈಗೊಳ್ಳಬಾರದು, ಒಂದು ವೇಳೆ ನ್ಯಾಯಾಲಯದ ಆದೇಶ ಧಿಕ್ಕರಿಸಿ ಕಾರ್ಯಾಕಲಾಪ ನಡೆಸಿದಲ್ಲಿ ಬೆಳವಿಗಿ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ. ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ, ಡಿಎಸ್‌ಎಸ್ ಮುಖಂಡರಾದ ಮಂಜಪ್ಪ ಮರೋಳ, ಶೆಟ್ಟಿ ವಿಭೂತಿ, ಶಿವರಾರಿ ಹರಿಜನ, ಜಗದೀಶ ಹರಿಜನ, ಮಲ್ಲೇಶ ಕಡಕೋಳ, ನೀಲಪ್ಪ ದೊಡ್ಡಮರೆಮ್ಮನವರ, ಮಂಜು ಜೋಗಣ್ಣವರ, ಮಂಜಪ್ಪ ದೊಡ್ಡಮರೆಮ್ಮನವರ, ಪುಟ್ಟಪ್ಪ ಗುಡ್ಡಣ್ಣನವರ, ಕುಮಾರ ತುಂಬಕ್ಕನವರ, ದ್ಯಾಮಪ್ಪ ಗೋವಿನಕೊಪ್ಪ, ಶಿವಪುತ್ರಪ್ಪ ಮಾಯಪ್ಪನವರ, ಪ್ರಕಾಶ ದೊಡ್ಡಮರಿಯಮ್ಮನವರ,ಬಸವರಾಜ ದೊಡ್ಡಮರಿಯಮ್ಮನವರ, ಅಶೋಕ ದೊಡ್ಡಮರಿಯಮ್ಮನವರ, ನರೇಂದ್ರ ಉಡಚಮ್ಮನವರ, ನಾಗಪ್ಪ ಮಾತಮ್ಮನವರ, ಶಿವಾನಂದ ಸಾರೆಪ್ಪನವರ, ನಾಗರಾಜ ಕನ್ನಪ್ಪನವರ ಮತ್ತಿತರರು ಹಾಜರಿದ್ದರು.