“ಎಕ್ಕ ಪೈಸಾ ವಸೂಲಿ ಪಕ್ಕಾ”
ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ “ಎಕ್ಕ” ಕನ್ನಡ ಸೀನೆಮಾ ಬಿಡುಗಡೆಯಾಗಿದೆ. ಯುವರಾಜ್‌ಕುಮಾರ ತಮ್ಮ ಎರಡನೆ ಚಿತ್ರದಲ್ಲಿನ ಅಭಿನಯದ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರು ಇಷ್ಟಪಡುವಂತಹ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಕುತೂಹಲ ಕಾಯ್ದುಕೊಳ್ಳುವಂತಹ ಸಸ್ಪೆನ್ಸ್ ಇದೆ. ಕ್ಲಾಸ್ ಮತ್ತು ಮಾಸ್ ಅಭಿಮಾನಿಗಳಿಗಾಗಿ ಯಾಕ್ಸನ್ ಮತ್ತು ತಾಯಿ-ಮಗನ ಸೆಂಟಿಮೆಂಟ್ ಕೂಡ ಇದೆ. ಕಾಮಿಡಿಗಾಗಿ ಸಾಧು ಇದ್ದಾರೆ. ಮನಜನೆ ಬಯಸಿ ಚಿತ್ರಮಂದಿರಕ್ಕೆ ಬರುವ ಪ್ರೇಕರಿಗೆ ಇನ್ನೇನು ಬೇಕು? ಎಲ್ಲವನ್ನೂ ಬ್ಯಾಲೆನ್ಸ್ ಮಾಡಲಾಗಿದೆ. ಕೆಲವರಿಗೆ ಇಷ್ಟವಾಗಹುದು, ಇನ್ನು ಕೆಲವರಿಗೆ ಇಷ್ಟವಾಗದೆ ಇರಬಹುದು.
‘ಎಕ್ಕ’ ಸಿನಿಮಾದ ‘ಬ್ಯಾಂಗಲ್ ಬಂಗಾರಿ’ ಹಾಡು ವೈರಲ್ ಆಗಿ ತುಂಬಾ ಸದ್ದು ಮಾಡಿದೆ. ಹಾಡಿನಿಂದಾಗಿಯೇ ಹೆಚ್ಚು ನಿರೀಕ್ಷೆಯನ್ನು ಈಚಿತ್ರ ಪಡೆದುಕೊಂಡಿತ್ತು. ಮಿಡಲ್ ಕ್ಲಾಸ್ ಹುಡುಗ ಭೂಗತ ಲೋಕಕ್ಕೆ ಎಂಟ್ರಿ ನೀಡುವ ಕಥೆ ಈ ಸಿನಿಮಾದಲ್ಲಿದೆ. ನಿರ್ದೇಶಕ ರೋಹಿತ್ ಪದಕಿ ಮತ್ತು ನಟ ಯುವ ರಾಜ್?ಕುಮಾರ್ ಅವರ ಕಾಂಬಿನೇಷನ್‌ನಲ್ಲಿ ಬಂದ ‘ಎಕ್ಕ’ ಸಿನಿಮಾದಲ್ಲಿ ಅಂಡರ್‌ವರ್ಲ್ಡ್ ಕಥೆಯ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಇದೆ.
ಹಳ್ಳಿಯಲ್ಲಿ ಇರುವ ಹೀರೋ ಬಡತನದ ಕುಟುಂಬದವನು. ದುಡಿಯಬೇಕು ಎಂದು ಬೆಂಗಳೂರಿಗೆ ಬಂದು ಅನಿವಾರ್ಯ ಕಾರಣದಿಂದ ಭೂಗತ ಲೋಕದ ಪ್ರವೇಶ ಪಡೆಯುತ್ತಾನೆ. (ಜೋಗಿ ಸೀನೆಮಾದ ನೆನಪು) ಹಳ್ಳಿಯಲ್ಲಿರುವ ತಾಯಿಗೆ ಮಗ ರೌಡಿ ಆಗಿದ್ದಾನೆ ಎಂಬುದರ ಅರಿವು ಇರುವುದಿಲ್ಲ. ಅಷ್ಟಕ್ಕೂ ನಾಯಕ ಭೂಗತ ಜಗತ್ತಿಗೆ ಕಾಲಿಟ್ಟಿದ್ದು ಹೇಗೆ? ಅಂತಿಮವಾಗಿ ಅವನು ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ‘ಎಕ್ಕ’ ಚಿತ್ರದ ಕಥೆ.
ಯುವ ರಾಜ್?ಕುಮಾರ್ ಅವರು ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್‌ನಲ್ಲಿ ಅವರು ಮುಗ್ಧ ಹಳ್ಳಿ ಹುಡುಗ. ಯಾರಿಗೆ ತೊಂದರೆ ಆದರೂ ಸಹಾಯಕ್ಕೆ ಮುಂದಾಗುವ ಒಳ್ಳೆಯ ಮನಸ್ಸಿನವನು. ಆ ಗುಣದಿಂದಾಗಿ ಆತ ಸಂಕಷ್ಟಕ್ಕೆ ಕೂಡ ಸಿಲುಕಿಕೊಳ್ಳುತ್ತಾನೆ. ಆದರೆ ಇನ್ನೊಂದು ಶೇಡ್‌ನಲ್ಲಿ ಭೂಗದ ಲೋಕದ ರೌಡಿ. ದೊಡ್ಡ ದೊಡ್ಡ ಡಾನ್‌ಗಳಿಗೆ ಬಲಗೈ ಬಂಟನಂತೆ ಇರುವ ವ್ಯಕ್ತಿ. ಈ ನಡುವೆ ಆತ ಲವರ್ ಬಾಯ್ ಕೂಡ ಹೌದು. ಇಂಥ ಶೇಡ್‌ಗಳು ಇರುವ ಪಾತ್ರವನ್ನು ಯುವ ರಾಜ್?ಕುಮಾರ್ ನಿಭಾಯಿಸಿದ್ದಾರೆ.
ಕುತೂಹಲ ಕಾಯ್ದುಕೊಳ್ಳುವಂತಹ ಸಸ್ಪೆನ್ಸ್ ಇದೆ. ಕ್ಲಾಸ್ ಅಭಿಮಾನಿಗಳಿಗಾಗಿ ತಾಯಿ-ಮಗನ ಸೆಂಟಿಮೆಂಟ್ ಕೂಡ ಇದೆ. ಇಡೀ ಸಿನಿಮಾದಲ್ಲಿ ಯುವ ರಾಜ್?ಕುಮಾರ್ ಅವರ ಪಾತ್ರ ಹೈಲೈಟ್ ಆಗಿದೆ. ತಾಯಿ ಪಾತ್ರ ಮಾಡಿರುವ ಶ್ರುತಿ ಅವರು ಗಮನ ಸೆಳೆಯುತ್ತಾರೆ. ನಾಯಕಿಯರಾದ ಸಂಜನಾ ಆನಂದ್ ಮತ್ತು ಸಂಪದಾ ಅವರ ಪಾತ್ರಗಳಿಗೆ ಸ್ಕೋಪ ಕಡಿಮೆ. ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಅತುಲ್ ಕುಲಕರ್ಣಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನ ಚರಣ್ ಅವರು ಹಾಡುಗಳ ಮೂಲಕ ಗಮನ ಸೆಳೆದಿದ್ದಾರೆ. ‘ಬ್ಯಾಂಗಲ್ ಬಂಗಾರಿ..’ ಹಾಡು ಇಷ್ಟಪಟ್ಟವರು ದೊಡ್ಡ ಪರದೆಯಲ್ಲಿ ಎಂಜಾಯ್ ಮಾಡಬಹುದು. ಸತ್ಯ ಹೆಗಡೆ ಅವರ ಛಾಯಾಗ್ರಹಣ ಉತ್ತಮವಾಗಿದೆ.ಅಶ್ವಿನಿ ಪುನೀತ್ ರಾಜ್?ಕುಮಾರ್, ಜಯಣ್ಣ, ಭೋಗೇಂದ್ರ, ಯೋಗಿ ಜಿ. ರಾಜ್, ಕಾರ್ತಿಕ್ ಗೌಡ ಜಂಟಿಯಾಗಿ ನಿರ್ಮಿಸಿರುವ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನಮಾಡಿದ್ದಾರೆ.