” ಕಾಂಗ್ರೆಸ್ ಟಿಕೆಟ್ ದೊರೆತರೆ ಗೆಲುವು ಖಚಿತ”
ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಚಂದ್ರಶೇಖರ ಮುದಕಣ್ಣನವರ
ಹಾವೇರಿ; ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಹಾವೇರಿ-ಗದಗಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಂಸದರು ಹೇಳಿಕೊಳ್ಳುವಂತ ಕೊಡುಗೆಗಳನ್ನು ಕ್ಷೇತ್ರಕ್ಕೆ ನೀಡಿಲ್ಲ. ಕೇವಲ ಪ್ರಧಾನಿ ಮೋದಿ ಅವರ ಹವಾದ ಮೇಲೆ ಆಯ್ಕೆಯಾಗುತ್ತಾ ಬಂದಿದ್ದರು. ಜನತೆ ಅವರ ಕೆಲಸ-ಕಾರ್ಯಗಳಿಂದ ಬೇಸತ್ತಿದ್ದಾರೆ. ಪ್ರಧಾನಿ ಮೋದಿ ಅವರು ಕೇವಲ ಭಾಷಣಗಳಲ್ಲಿ ಜನರಿಗೆ ಅರಮನೆ ತೋರಿಸುತ್ತಾ ಬಂದಿದ್ದು, ಜನತೆಗೆ ಸತ್ಯದ ಅರಿವಾಗಿದೆ. ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದು ಹೋಗಿರುವ ಜನರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದು, ನನಗೆ ಕಾಂಗ್ರೆಸ್ ಟಿಕೆಟ್ ದೊರೆತರೆ ನನ್ನ ಗೆಲುವು ಖಚಿತ ಎಂದು ಹಿರಿಯ ನ್ಯಾಯವಾದಿ, ಕುರುಬ ಸಮಾಜದ ಮುಖಂಡ ಚಂದ್ರಶೇಖರ ಪ, ಮುದಕಣ್ಣನವರ ಹೇಳಿದರು.
ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾವೇರಿ ನಿವಾಸಿಯಾಗಿರುವ ನಾನು ಎಂ, ಎ. ಎಲ್.ಎಲ್.ಬಿ. ಪದವಿಧರನಾಗಿದ್ದು, ಹಾವೇರಿ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷನಾಗಿ, ವಕೀಲಿ ವೃತ್ತಿಯನ್ನು ಮಾಡುತ್ತಿದ್ದು, ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಕಾನೂನು ಮತ್ತು ಮಾನವ ಹಕ್ಕುಗಳ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿ, ಹಾಗೂ ಕೆ.ಪಿ.ಸಿ.ಸಿ, ವಕ್ತಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಾವೇರಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘಟನೆ ಮಾಡಿದ ಅನುಭವ ಹೊಂದಿದವನಾಗಿರುತ್ತೇನೆ.
ನ್ಯಾಯ, ನಿಷ್ಠ ಪ್ರಾಮಾಣಿಕತೆಯನ್ನು ಹೊಂದಿ ಸಾರ್ವಜನಿಕ ವ್ಯವಹಾರ ಮತ್ತು ಸಾರ್ವಜನಿಕ ಆಡಳಿತದಲ್ಲಿ ಅಪಾರ ಅನುಭವ ಹೊಂದಿದವನಾಗಿರುತ್ತೇನೆ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಂತೆ, ಎಲ್ಲಾ ಚುನಾವಣೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸನ್.೨೪ ನೇ ಸಾಲಿನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ಪಕ್ಷದ ರಾಜ್ಯ, ಕೇಂದ್ರ ವರಿಷ್ಠರಿಗೆ ಮನವಿ ಮಾಡಿರುವುದಾಗಿ ಮುದಕಣ್ಣನವರ ತಿಳಿಸಿದರು.
ಸಾರ್ವಜನಿಕ ರಂಗದಲ್ಲಿ ನನ್ನ ಸೇವಾ ಅನುಭವದ ಜೊತೆಗೆ ಎಲ್ಲ ಅಹಿಂದ ವರ್ಗಗಳ ಉತ್ತಮ ಸಂಪರ್ಕ ಹಾಗೂ ಬಾಂಧವ್ಯವನ್ನು ಹೊಂದಿದವಾಗಿರುತ್ತೇನೆ. ಎಲ್ಲ ಮುಂದುವರೆದ ಸಮುದಾಯಗಳ ಮೆಚ್ಚುಗೆಗೆ ಪಾತ್ರನಾಗಿರುತ್ತೇನೆ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ೮ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಒಟ್ಟು ಮತದಾರರು ೧೭,೫೮,೦೨೧ ಇದ್ದು, ಅದರಲ್ಲಿ ಕುರುಬ ಮತ್ತು ಮುಸ್ಲಿಂ ಸಮುದಾಯದ ಮತಗಳು ಅಂದಾಜು ೬,೫೦,೦೦೦ ಮತಗಳು ಇರುತ್ತವೆ. ಒಟ್ಟು ಲೋಕಸಭಾ ಮತಗಳಲ್ಲಿ ಅಹಿಂದ ವರ್ಗಗಳ ಮತಗಳು ಶೇ.೬೨ ಮತಗಳು ಇರುತ್ತವೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಪ್ರಭಲ ಮತದಾರರು ಕುರುಬ ಸಮುದಾಯ ಹಾಗೂ ಮುಸ್ಲಿಂ ಸಮಾಜದವರಾಗಿರುತ್ತಾರೆ. ಕುರುಬ ಸಮಾಜದವರು೩.೫ಲಕ್ಷ, ಮುಸ್ಲಿಂ ಸಮಾಜದವರು ೩ಲಕ್ಷ ಸಂಖ್ಯೆಯಲ್ಲಿದ್ದು, ೬ಲಕ್ಷಮಗಳಿಸಿದರೆ ಗೆಲುವು ಸಾಧ್ಯವಿದೆ. ಈಹಿಂದಿನ ಚುನಾವಣೆಗಲಲ್ಲಿ ಮುಸ್ಲಿಂ ಸಮುದಾಯ ಹಾಗೂ ಲಿಂಗಾಯತ ಸಮಾಜದವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದರೂ ಸಹ ಗೆಲುವ ಸಾಧಿಸಲು ಆಗಿರುವುದಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಕುರುಬ ಸಮಾಜಕ್ಕೆ ಹಿಂದಿನಿಂದಲೂ ಪ್ರಾಧಾನ್ಯತೆ ನೀಡಿರುವುದಿಲ್ಲ. ಕುರುಬ ಸಮುದಾಯದ ಮತಗಳು ಅತೀ ಪ್ರಮುಖ ನಿರ್ಣಾಯಕ ಮತಗಳಾಗಿರುವುದರಿಂದ ಕುರುಬ ಸಮುದಾಯದ ಹಿರಿಯ ಮುಖಂಡನಾಗಿರುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿ ಅಂತಾ ಘೋಷಣೆ ಮಾಡುವಂತೆ ಕೇಂದ್ರ ಮತ್ತು ರಾಜ್ಯದ ಎಲ್ಲಾ ಮುಖಂಡರಲ್ಲಿ ಮನವಿ ಮಾಡಿಕೊಂಡಿರುವುದಾಗಿ ಚಂದ್ರಶೇಖರ ಮುದಕಣ್ಣನವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆಯ ಮಾಜಿ ಸದಸ್ಯರಾದ ಮಲ್ಲೇಶಪ್ಪ ಪಟ್ಟಣಶಟ್ಟಿ, ಬಾಬುಸಾಬ ಮೋಮಿನಗಾರ, ಶಾಂತಾಬಯಿ ಶಿರೂರ, ಪ್ರಮುಖರಾದ ಎಂ.ಬಿ.ಭೈರಮ್ಮನವರ, ಭರಮಪ್ಪ ಕೂಲಿ,ಭಾರತಿ ಪಾಟೀಲ, ಶ್ರೀದೇವಿ ಮಡಿವಾಳರ, ವೆಂಕಟೇಶ ಡಂಬ್ರಳ್ಳಿ, ವೀರಣ್ಣ ಗೋಸಾವಿ ಮತ್ತಿತರರು ಇದ್ದರು.
” ಕಾಂಗ್ರೆಸ್ ಟಿಕೆಟ್ ದೊರೆತರೆ ಗೆಲುವು ಖಚಿತ” ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಚಂದ್ರಶೇಖರ ಮುದಕಣ್ಣನವರ
Date: