
ನೀಟ್ ಪರೀಕ್ಷೆ ರದ್ದು ಖಂಡಿಸಿ ಸಂಸದರ ಕಚೇರಿ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆಹಾವೇರಿ: ಕೇಂದ್ರ ಬಿಜೆಪಿ ಸರಕಾರ ಹಗರಣಗಳ ಸರಮಾಲೆಯಲ್ಲಿ ಮುಳಗಿದೆ. ಈಗ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಪ್ರತಿ ಒಬ್ಬ ವಿದ್ಯಾರ್ಥಿಯಿಂದ ೩೦ ಲಕ್ಷ ಹಣ ಪಡೆದು ಪ್ರಶ್ನೆಗಳನ್ನು ಸೋರಿಕೆ ಮಾಡಲಾಗಿದೆ. ಸಿಬಿಐ ತನಿಖೆ ಬೇಡ ಏಕೆಂದರೆ ಕೇಂದ್ರದ ಒಂದು ಅಂಗ ಸಂಸ್ಥೆ ಇದಾಗಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಅವರ ನೇಮಿಸಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಕಚೇರಿ ಎದುರು ಗುರುವಾರ ಸಂಜೆ ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ್ ಕುಮಾರ ಲಮಾಣಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ವಿರುದ್ಧ ದಿಕ್ಕಾರ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನೆಯಲ್ಲಿ ಮಾತಮಾಡಿದ ಯುಥ್ ಕಾಂಗ್ರೆಸ್ ಮುಖಂಡ ಶಂಕರ್ ಮೆಹರವಾಡೆ ಕೇಂದ್ರ ಸರಕಾರ ದೇಶದ ಭವಿಷ್ಯ ವೈದ್ಯಕೀಯ ವಿದ್ಯಾರ್ಥಿಗಳ ಜೀವನ ಜೊತೆ ಆಡವಾಡಿದೆ. ಇದನ್ನು ಯುಥ್ ಕಾಂಗ್ರೆಸ್ ಸಹಿಸಲ್ಲ. ನಾವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗಿವವರೆಗೂ ಹೋರಾಟ ನಿಲ್ಲಿಸಲ್ಲ. ವಿದ್ಯಾರ್ಥಿಗಳ ಪರವಾಗಿ ಕಾಂಗ್ರೆಸ್ ಇದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಯಾರದೇ ಕೈವಾಡ ವಿರಲಿ ತಕ್ಕ ಶಿಕ್ಷೆ ಆಗಬೇಕು. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲ ಹಿರೇಕೆರೂರ ತಾಲೂಕಾ ಯುಥ್ ಕಾಂಗ್ರೆಸ್ ಅಧ್ಯಕ್ಷ ಗುಲಾಮ್ ರಜಾ ಬೊಗಳಿ, ಹಾವೇರಿ ಗ್ರಾಮೀಣ ಯುಥ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಹಾಂತೇಶ ಮಕರವಳ್ಳಿ, ಜಮೀರ್ ಜಿಗರಿ, ಸುಧೀರ ಲಮಾಣಿ, ನಾಗರಾಜ ಬಡೆಮ್ಮನವರ, ಮಂಜುನಾಥ ಲಕ್ಮಾಪುರ, ವಿನಯ ಪಾಲನಕರ್, ಹಸನ ಮುಲ್ಲಾ, ಖಾದರ್ ಸಾಬ ಗಡ್ಡದ, ಯಲ್ಲಪ್ಪ ಶಿಗ್ಗಾಂವಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

