ನೀರಿನ ಯೋಜನೆಗಳನ್ನು ಯಾವಾಗ ಮುಗುಸ್ತೀರಿ?- ಲಿಖಿತವಾಗಿ ಕೊಡಿ, ಇಲ್ಲವೇ ಬ್ಲಾಕ್‌ಲಿಸ್ಟ್‌ಗೆ ಸೇರಿಸಿ              ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ

Date:

ನೀರಿನ ಯೋಜನೆಗಳನ್ನು ಯಾವಾಗ ಮುಗುಸ್ತೀರಿ?- ಲಿಖಿತವಾಗಿ ಕೊಡಿ, ಇಲ್ಲವೇ ಬ್ಲಾಕ್‌ಲಿಸ್ಟ್‌ಗೆ ಸೇರಿಸಿ
             ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ
ಹಾವೇರಿ: ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಸೇರಿದಂತೆ ಜಿಲ್ಲೆಯ ಎಲ್ಲ ಕುಡಿವ ನೀರು ಪೂರೈಕೆ ಯೋಜನೆಗಳನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಲಿಖಿತವಾಗಿ ಕೊಡಿ, ಇಲ್ಲವೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಆಯ್ಕೆ ನಿಮ್ಮದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಸಿದರು. ಗುರುವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಹಾವೇರಿ ಜಿಲ್ಲೆ ಮರಳು ಉಸ್ತುವಾರಿ ಸಮಿತಿ ಮತ್ತು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು.
ಬಹುತೇಕ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ನಿಗದಿಪಡಿಸಿದ್ದ ಅವಧಿ ಮುಗಿದು ಎರಡು ವರ್ಷಗಳ ಮೇಲಾಗಿದೆ. ಗುತ್ತಿಗೆದಾರರ ಬಿಲ್ ಕೂಡ ಪ್ರತಿಸತ ೯೦ರಷ್ಟು ಪಾವತಿಯಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಇದ್ದ ತಾಂತ್ರಿಕ ಅಡಚಣೆಗಳನ್ನು ನಾನೇ ಖುದ್ದಾಗಿ ಪರಿಹರಿಸಿದ್ದೇನೆ. ಆದರೂ ಯಾಕೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಮ್ಮ ಕರ್ತವ್ಯಲೋಪಕ್ಕೆ ಸಚಿವರು, ಶಾಸಕರು ಜಿಲ್ಲೆಯ ಜನರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕೆಡಿಪಿ ಸಭೆಯ ಹೊರತಾಗಿಯೂ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಹಲವು ಪ್ರತ್ಯೇಕ ಸಭೆಗಳನ್ನು ನಡೆಸಿದ್ದೇನೆ. ಆದರೂ ಸಹ ನೀವು ಗಂಭೀರವಾಗಿ ಪರಿಗಣಿಸಿಲ್ಲ ಎಂದ ಸಚಿವರು ಮತ್ತು ಶಾಸಕರು ಮಾತ್ರ ಸಭೆ ನಡೆಸಿದ್ದೇವೆ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೂ ಈ ಬಗ್ಗೆ ಗಮನಹರಿಸಬೇಕಾಗಿದ್ದು, ಸಭೆ ನಡೆಸಲು ಅವರಿಗೆ ಸೂಚನೆ ನೀಡಿ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್ ಅವರಿಗೆ ಹೇಳಿದರು.
ಅರಣ್ಯ ಇಲಾಖೆ ಅನುಮತಿ ಅಗತ್ಯವಿದೆ ಎಂದು ಈಗ ಹೇಳುತ್ತಿದ್ದೀರಿ, ಈ ಸಮಸ್ಯೆಯನ್ನೂ ಈಗಾಗಲೇ ಪರಿಹರಿಸಲಾಗಿದೆ. ಗುತ್ತಿಗೆದಾರರ ಮೇಲೆ ನಿಮಗೆ ನಿಯಂತ್ರಣ ಇಲ್ಲ. ಲೋಪ ಎಸಗಿರುವ ಎಷ್ಟು ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರದಿಂದ ಎಷ್ಟು ಹಣ ಬಿಡುಗಡೆಯಾಗಿದೆ. ಯಾವ ಯಾವ ಉದ್ದೇಶಕ್ಕೆ ಎಷ್ಟು ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಕೇಳಿದ ಸಚಿವರು, ಬ್ಯಾಡಗಿ ತಾಲೂಕಿನಲ್ಲಿ ಸ್ಯಾಂಪಲ್ ಸರ್ವೇ ಮಾಡಿ ವರದಿ ಕೊಡಿ ಎಂದು ಸೂಚನೆ ನೀಡಿದರು. ಸರ್ಕಾರ ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಿದೆಯೋ ಆ ಅನುದಾನ ದುರ್ಬಳಕೆಯಾಗಬಾರದು ಎಂದು ಎಚ್ಚರಿಸಿದರು.
ಹಾವೇರಿ ನಗರದ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ಯೋಜನೆಗೆ ೨೦೦೦ದಿಂದ ಇದುವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ? ಎಷ್ಟ ಅನುದಾನ ಯಾವ ಯಾವ ಉದ್ದೇಶಕ್ಕೆ ಬಳಕೆಯಾಗಿದೆ. ಪೂರ್ಣ ಮಾಹಿತಿಯ ವರದಿಯನ್ನು ತಕ್ಷಣ ಕೊಡಿ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್ ಅಂತರ್ಜಲಮಟ್ಟ ಕುಸಿದಿದ್ದು, ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಸಮಸ್ಯೆಯಾಗಲಿದ್ದು, ಪರಿಹಾರ ಕ್ರಮಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಜಿಪಂ ಸಿಇಒ ರುಚಿ ಬಿಂದಾಲ್ ಅವರು, ಬಹುಗ್ರಾಮ ನೀರು ಪೂರೈಕೆ ಯೋಜನೆಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಟ್ರಯಲ್ ರನ್ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣವರ್, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಜಿಗೌಡರ್, ಎಸ್ಪಿ ಯಶೋದಾ ವಂಟಿಗೋಡಿ ಸಭೆಯಲ್ಲಿ ಭಾಗವಹಿಸಿದ್ದರು.

ಒಳ್ಳೆಯ ಸುದ್ದಿಗಳೇ ಇಲ್ಲ!
ಜಿಲ್ಲೆಯ ಬಗ್ಗೆ ಪತ್ರಿಕೆಗಳಲ್ಲಿ  ಪ್ರತಿನಿತ್ಯ ಸಮಸ್ಯೆಗಳು, ಇಲ್ಲವೇ ನಕಾರಾತ್ಮಕ ಸುದ್ದಿಗಳು ಇರುತ್ತವೆಯೇ ಹೊರತು, ಒಳ್ಳೆಯ ಸುದ್ದಿಗಳು ಬರುತ್ತಿಲ್ಲ. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಿ ಎಂದು ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು. ಹಾವೇರಿ ಪತ್ರಿಕೆಗಳನ್ನು ತೆರೆದರೆ ಲೋಕಾಯುಕ್ತ ದಾಳಿ,  ಎಲ್ಲೆಂದರಲ್ಲಿ ಕಸ… ಇಂತಹ ಸುದ್ದಿಗಳೇ ಕಣ್ಣಿಗೆ ಬೀಳುತ್ತವೆ. ಮೆಚ್ಚುಗೆಯ ವರದಿಗಳೂ ಬರುವಂತೆ ಕೆಲಸ ಮಾಡಿ ತೋರಿಸಿ. ಒಳ್ಳೆಯ ಕಾರಣಕ್ಕೆ ಸುದ್ದಿಯಾಗಬೇಕೇ ಹೊರತು ನಕಾರಾತ್ಮಕ ಕಾರಣಗಳಿಗೆ ಅಲ್ಲ ಎಂದು ಹೇಳಿದರು.
ಹಾವೇರಿ ನಗರದ ಅವ್ಯವಸ್ಥೆಯ ಬಗ್ಗೆ ಪೌರಾಯುಕ್ತರನ್ನು ಪ್ರಶ್ನೆ ಮಾಡಿದ ಸಚಿವರು, ಇದುವರೆಗೆ ಎಲ್ಲೆಲ್ಲಿ ಕೆಲಸ ಮಾಡಿ ಬಂದಿದ್ದೀರಿ, ಅಲ್ಲೆಲ್ಲ ಇದೇ ದಕ್ಷತೆಯಿಂದ ಕೆಲಸ ಮಾಡಿ ಬಂದಿದ್ದೀರಾ ಎಂದು ವ್ಯಂಗ್ಯವಾಡಿದರು.
ಪ್ರತಿ ದಿನ ವಾರ್ಡ್ ರೌಂಡ್ ಹಾಕಿ. ಎಲ್ಲೆಲ್ಲಿ ಸಮಸ್ಯೆಗಳಿವೆ ಕಂಡು ಕೊಂಡು ಪರಿಹರಿಸಲು ಪ್ರಯತ್ನಿಸಿ ಎಂದು ಸೂಚಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಪತ್ರಕರ್ತ, ಸಾಹಿತಿ ಮಾಲತೇಶ ಅಂಗೂರಗೆ ಸರ್ಕಾರದಿಂದ ಆರ್ಥಿಕ ನೆರವು: ಸಚಿವ ಶಿವಾನಂದ ಪಾಟೀಲ್ ಭರವಸೆ

 ಪತ್ರಕರ್ತ, ಸಾಹಿತಿ ಮಾಲತೇಶ ಅಂಗೂರಗೆ ಸರ್ಕಾರದಿಂದ ಆರ್ಥಿಕ ನೆರವು: ಸಚಿವ ಶಿವಾನಂದ...

ಯುದ್ಧದ ಬಿಸಿ-ಕರಟದಲ್ಲಿ ಬೇಯುತ್ತಿರುವ ಕರ್ಜಗಿ ರೈಲ್ವೆ ನಿಲ್ದಾಣದ ಇಡ್ಲಿ-ವಡಾ!  

ಯುದ್ಧದ ಬಿಸಿ-ಕರಟದಲ್ಲಿ ಬೇಯುತ್ತಿರುವ ಕರ್ಜಗಿ ರೈಲ್ವೆ ನಿಲ್ದಾಣದ ಇಡ್ಲಿ-ವಡಾ!   ಹಾವೇರಿ: ಕೊಲ್ಲಿಯಲ್ಲಿ...

ಆನಂದವನದಲ್ಲಿ ಶ್ರೀ ಶೇಷಾಚಲ ಸದ್ಗುರುಗಳ ರಥೋತ್ಸವ

ಆನಂದವನದಲ್ಲಿ ಶ್ರೀ ಶೇಷಾಚಲ ಸದ್ಗುರುಗಳ ರಥೋತ್ಸವ ಹಾವೇರಿ: ತಾಲೂಕಿನ ಅಗಡಿ ಗ್ರಾಮದ ಆನಂದವನದಲ್ಲಿ...

೨೦೨೫-೨೬ ನೇ ಸಾಲಿನಲ್ಲಿ ಹಾವೇರಿ ಕೆ.ಎಂ.ಎಫ್‌ಗೆ ೮ ಕೋಟಿ ನಿವ್ವಳ ಲಾಭ : ಮಂಜನಗೌಡ ಪಾಟೀಲ

೨೦೨೫-೨೬ ನೇ ಸಾಲಿನಲ್ಲಿ ಹಾವೇರಿ ಕೆ.ಎಂ.ಎಫ್‌ಗೆ ೮ ಕೋಟಿ ನಿವ್ವಳ ಲಾಭ...