ಯುದ್ಧದ ಬಿಸಿ-ಕರಟದಲ್ಲಿ ಬೇಯುತ್ತಿರುವ ಕರ್ಜಗಿ ರೈಲ್ವೆ ನಿಲ್ದಾಣದ ಇಡ್ಲಿ-ವಡಾ!  

Date:

ಹಾವೇರಿ: ಕೊಲ್ಲಿಯಲ್ಲಿ ನಡೆದಿರುವ ಯುದ್ಧದ ಬಿಸಿ ಎಲ್ಲ ರಂಗಗಳಿಗೂ ತಾಕೀದೆ. ಅದರಲ್ಲೂ ಎಲ್‌ಪಿಜಿ ಅಭಾವ ಹೋಟೆಲ್ ಉದ್ಯಮದ ಮೇಲೆ ಭಾರಿ ಪರಿಣಾಮವನ್ನು ಬೀರಿದೆ. ಇಂತ ಸಂಕಷ್ಟದ ಸಂದರ್ಭದಲ್ಲಿ ಹಾವೇರಿ ತಾಲೂಕಿನಗಿ ಕರ್ಜಗಿ ರೈಲ್ವೆ ಸ್ಟೇಷನ್‌ನ ಕ್ಯಾಂಟಿನ್‌ನ ಇಡ್ಲಿ-ವಡಾಕ್ಕೂ ಯುದ್ಧದ ಬಿಸಿ ತಾಕೀದ್ದು, ಇದೀಗ ಕರಟದಲ್ಲಿ (ತೆಂಗಿನ ಚಿಪ್ಪು)ಬೇಯುಸುವ ಮೂಲಕ ಗ್ರಾಹಕರ ಬೇಡಿಕೆಗೆ ಸ್ಪಂದಿಸಿದ್ದಾರೆ ಹೋಟೆಲ್ ಮಾಲಕರು.
ಮಂಡ್ಯ ಜಿಲ್ಲೆ ಮದ್ದೂರು ವಡಾಕ್ಕೆ ಯಾವ ರೀತಿ ಪ್ರಸಿದ್ದಿ ಇದೆಯೂ ಅದೇ ರೀತಿ ಪ್ರಸಿದ್ದಿ ಹಾವೇರಿ ತಾಲೂಕು ಕರ್ಜಗಿ ರೈಲ್ವೆ ಸ್ಟೇಷನ್‌ನ ಇಡ್ಲಿ -ವಡಾ. ಇಲ್ಲಿ ಹೆಬ್ಬಾರ ಕುಟುಂಬ ಕಳೆದ ಆರು ದಶಕಗಳಿಂದ ಇಡ್ಲಿ -ವಡಾ ತಯಾರಿಸುತ್ತಿದೆ. ಹಾವೇರಿಯಿಂದ ಹುಬ್ಬಳ್ಳಿ ಸಂಚರಿಸುವ ಪ್ಯಾಸೆಂಜರ್ ರೈಲುಗಳು, ಹುಬ್ಬಳ್ಳಿಯಿಂದ ಹಾವೇರಿ ಮಾರ್ಗವಾಗಿ ಫ್ಯಾಸೆಂಜರ್ ರೈಲುಗಳು ಕರ್ಜಗಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತವೆ. ಈ ರೈಲುಗಳಲ್ಲಿ ಸಂಚರಿಸುವವರಿಗೆ ಕರ್ಜಗಿ ಸ್ಟೇಷನ್ ಬಂದರೆ ತಕ್ಷಣ ನೆನಪಾಗುವು ಇಡ್ಲಿವಡಾ.
ಹೌದು ಹಾವೇರಿ ತಾಲೂಕು ಕರ್ಜಗಿ ರೈಲು ನಿಲ್ದಾಣದಲ್ಲಿ ಮಾರಾಟವಾಗುವ ಇಡ್ಲಿ-ವಡಾ ಉತ್ತರ ಕರ್ನಾಟಕದಲ್ಲಿಯೇ ಫೇಮಸ್. ಈ ಇಡ್ಲಿ ವಡಾ ಸವಿಯಲು ರೈಲಿನಲ್ಲಿ ಪ್ರಯಾಣಿಸುವ ಗ್ರಾಹಕರು ಇದ್ದಾರೆ ಅಂದರೇ ಆಶ್ಚರ್ಯ. ಆದರೆ ಈ ಇಡ್ಲಿ-ವಡಾ ತಯಾರಿಕೆಗೆ ಸಹ ಇಸ್ರೇಲ್ ಮತ್ತು ಇರಾನ್ ಯುದ್ದದ ಬಿಸಿ ತಟ್ಟಿದೆ. ಈ ಹೊಟೇಲ್‌ಗೆ ಇದೀಗ ವಾಣಿಜ್ಯ ಸಿಲಿಂಡರಗಳ ಕೊರತೆ ಎದುರಾಗಿದೆ. ಸಮರ್ಪಕ ಸಿಲಿಂಡರ ಸಿಗದ ಪರಿಣಾಮ ಹೊಟೇಲ್ ಮಾಲಿಕ ಇದೀಗ ತೆಂಗಿನ ಚಿಪ್ಪುಗಳಿಗೆ ಮೊರೆ ಹೋಗಿದ್ದಾರೆ.
ತೆಂಗಿನ ಚಿಪ್ಪುಗಳನ್ನು ಉರಿಸಿ ಇಡ್ಲಿ ತಯಾರಿಸುತ್ತಿದ್ದಾರೆ. ಉಳಿದಂತೆ ಪೂರೈಕೆಯಾಗುವ ಸಿಲಿಂಡರ್‌ಗಳಲ್ಲಿ ಕೇವಲ ವಡಾ ತಯಾರಿಸುತ್ತಿದ್ದಾರೆ. ಮೊದಲು ಸಮರ್ಪಕವಾಗಿ ವಾಣಿಜ್ಯ ಸಿಲಿಂಡರ್ ಸಿಗುತ್ತಿತ್ತು, ಆದರೆ ಇದೀಗ ಸಿಲಿಂಡರ್ ಸಿಗುವುದು ದುಸ್ತರವಾಗಿದೆ ಎನ್ನುತ್ತಾರೆ ವಿಶ್ವನಾಥ್. ಯುದ್ದ ಆರಂಭವಾದಾಗಿನಿಂದ ವಾಣಿಜ್ಯ ಸಿಲಿಂಡರ್ ಸಮಸ್ಯೆ ಎದುರಾಗಿದ್ದು ಗ್ರಾಹಕರಿಗೆ ರುಚಿಕರ ಇಡ್ಲಿ ವಡಾ ಪೂರೈಕೆ ಮಾಡಲು ಪರದಾಡುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಹೊಟೇಲ್ ಮಾಲಿಕ ವಿಶ್ವನಾಥ್.
ಗ್ರಾಹಕರೇ ಬೆಳೆಸಿದ ಪ್ರಸಿದ್ದತೆ: ೫೬ ವರ್ಷಗಳ ಹಿಂದೆ ಈ ರೈಲು ನಿಲ್ದಾಣದಲ್ಲಿ ಇಷ್ಟು ಇಡ್ಲಿ ವಡಾ ಪ್ರಸಿದ್ದಿ ಇರಲಿಲ್ಲ. ಆದರೆ ವಿಶ್ವನಾಥ್ ತಂದೆ ಹೊಟೇಲ್ ಆರಂಭಿಸಿದ ನಂತರ ಈ ಹೊಟೇಲ್ ಹೆಚ್ಚು ಪ್ರಚುರಗೊಂಡಿತು. ಈ ಇಡ್ಲಿ ವಡಾಕ್ಕೆ ಫೀದಾ ಆಗಿರುವ ರೈಲ್ವೆ ಇಲಾಖೆ,  ಪ್ರಯಾಣಿಕರ ಉಪಹಾರಕ್ಕೆ ಮತ್ತು ರೈಲುಗಳ ಕ್ರಾಸಿಂಗ್ ಇದ್ದಾಗ ಇಲ್ಲಿಯ ಸ್ಟಾಪ್ ನೀಡಲಾರಂಭಿಸಿತು. ಕಡಿಮೆ ದರದಲ್ಲಿ ಹೆಚ್ಚು ಸ್ವಾದೀಷ್ಟ ಇಡ್ಲಿ- ವಡಾಗಳನ್ನು ಗ್ರಾಹಕರಿಗೆ ವಿಶ್ವನಾಥ್ ತಂದೆ ಪೂರೈಸಲಾರಂಭಿಸಿದರು.
ಟ್ರೈನ್‌ಗಳು ನಿಲ್ಲುತ್ತಿದ್ದಂತೆ ಇಡ್ಲಿ-ವಡಾ ಸವಿಯಲು ಪ್ರಯಾಣಿಕರು ರೈಲು ಇಳಿದು ಬಂದು ಇಲ್ಲಿ ಇಡ್ಲಿ ವಡಾ ಖರೀದಿಸುತ್ತಾರೆ. ಅಷ್ಟೇ ಅಲ್ಲದೆ ಈ ಅಂಗಡಿಯ ಹಲವು ಕೌಂಟರಗಳನ್ನ ರೈಲು ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ. ಪ್ಲಾಟಪಾರ್ಮ್ ಎರಡು ಕಡೆ ಇಡ್ಲಿ ವಡಾ ಮಾರಾಟ ಮಾಡಲಾಗುತ್ತದೆ. ಕರ್ಜಗಿ ಸ್ಟೇಷನ್‌ನಲ್ಲಿ ನಿಲುಗಡೆಯಾಗಲಿರುವ ರೈಲುಗಳಷ್ಟೇ ಅಲ್ಲದೆ ಇಡ್ಲಿ -ವಡಾ ಪ್ರಸಿದ್ದಿ ಇತರ ಗ್ರಾಮಗಳಿಗೆ ಮುಟ್ಟಿದೆ. ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ವಾಹನ ನಿಲ್ಲಿಸಿ ಇಲ್ಲಿ ಇಡ್ಲಿ-ವಡಾ ಸವಿದು ಮುಂದೆ ಸಾಗುತ್ತಾರೆ. ಈ ಹೊಟೇಲ್‌ನಲ್ಲಿ ರುಚಿಕರ ಸ್ವಾದೀಷ್ಟ ಇಡ್ಲಿ ವಡಾ ಚಟ್ನಿ ಕಡಿಮೆ ದರದಲ್ಲಿ ಸಿಗುತ್ತದೆ ಎನ್ನುತ್ತಾರೆ ಗ್ರಾಹಕ ಫಕ್ಕಿರೇಶ್. ಆದರೆ ಈ ಹೊಟೇಲ್‌ಗೆ ಸಹ ಇದೀಗ ಇಸ್ರೇಲ್ ಇರಾನ್ ಯುದ್ದದ ಬಿಸಿ ತಟ್ಟಲಾರಂಭಿಸಿದೆ. ಪರಿಣಾಮ ಮೊದಲಿನಂತೆ ಪೂರೈಕೆ ಮಾಡಲಾಗುತ್ತಿಲ್ಲಾ. ಸರ್ಕಾರ ಈ ರೀತಿಯ ಹೊಟೇಲ್‌ಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಸುವ ಮೂಲಕ ಹೊಟೇಲ್ ಮಾಲಿಕರ ನೆರವಿಗೆ ಬರುವಂತೆ ಫಕ್ಕಿರೇಶ್ ಮನವಿ ಮಾಡಿದ್ದಾರೆ.
ಹಲವು ಪೆಟ್ಟುಗಳ ಜೊತೆ ಯುದ್ದದ ಪೆಟ್ಟು: ಮೊದಲು ರೈಲು ನಿಲ್ದಾಣದಲ್ಲಿ ೧೪ ಟ್ರೈನುಗಳ ನಿಲುಗಡೆಯಾಗುತ್ತಿತ್ತು. ವಿಶ್ವನಾಥ್‌ಗೆ ಇಡ್ಲಿ -ವಡಾ ಪೂರೈಸಲಾಗುತ್ತಿರಲಿಲ್ಲ ಅಷ್ಟು ವ್ಯಾಪಾರವಾಗುತ್ತಿತ್ತು. ಕ್ರಮೇಣ ಈ ರೈಲು ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಕಡಿಮೆಯಾಗಲಾರಂಭಿಸಿತು. ಪರಿಣಾಮ ವಿಶ್ವನಾಥ್‌ರ ಇಡ್ಲಿ -ವಡಾ ವ್ಯಾಪಾರ ಸಹ ಕಡಿಮೆಯಾಯಿತು. ಮೊದಲು ನಿಲುಗಡೆಯಾಗುತ್ತಿದ್ದ ರೈಲುಗಳ ಸಂಖ್ಯೆ ಇದೀಗ ೧೪ ರಿಂದ ಮೂರಕ್ಕೆ ಬಂದು ನಿಂತಿದೆ. ಆ ಮೂರು ರೈಲುಗಳ ನಿಲುಗಡೆಯಾದಾಗ ಮಾತ್ರ ವಿಶ್ವನಾಥ್ ಇಡ್ಲಿ-ವಡಾ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಇದಲ್ಲದೆ ಹಾವೇರಿ -ಹುಬ್ಬಳ್ಳಿ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣವಾಗಿದ್ದು ಕ್ರಾಸಿಂಗ್ ಸಹ ಇಲ್ಲಿ ಮಾಡುತ್ತಿಲ್ಲ. ಇನ್ನು ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ರೈಲುಗಳಲ್ಲಿ ಪ್ರಯಾಣಿಸುತ್ತಿಲ್ಲಾ ಎನ್ನುತ್ತಾರೆ ವಿಶ್ವನಾಥ್. ಇದರಿಂದಾಗಿ ತಮ್ಮ ವ್ಯಾಪಾರದಲ್ಲಿ ಗಣನೀಯ ಪ್ರಮಾಣದ ಹೊಡೆತ ಬಿದ್ದಿದೆ. ಇದರ ಮಧ್ಯ ಇದೀಗ ಯುದ್ದ ಕಾರಣದಿಂದ ವಾಣಿಜ್ಯ ಸಿಲಿಂಡರ್ ಸಿಗುತ್ತಿಲ್ಲಾ. ಸರ್ಕಾರ ನಮಗೆ ಸಮರ್ಪಕ ವಾಣಿಜ್ಯ ಸಿಲಿಂಡರ್ ಪೂರೈಸಬೇಕು ಎನ್ನುತ್ತಾರೆ ವಿಶ್ವನಾಥ್.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಿಸಿಎಸ್‌ಆರ್ ಸಹಭಾಗಿತ್ವ ಅಗತ್ಯ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ

ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸಿಸಿಎಸ್‌ಆರ್ ಸಹಭಾಗಿತ್ವ ಅಗತ್ಯ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಹಾವೇರಿ:: ಜಿಲ್ಲೆಯ...

ಸಾಧನೆ ಮಾಡಿದವರಿಗೆ ಗೌರವಿಸಿದ್ದು ಹೆಮ್ಮೆಯ ವಿಷಯ -ಉಡಚಪ್ಪ ಮಾಳಗಿ

ಸಾಧನೆ ಮಾಡಿದವರಿಗೆ ಗೌರವಿಸಿದ್ದು ಹೆಮ್ಮೆಯ ವಿಷಯ -ಉಡಚಪ್ಪ ಮಾಳಗಿ ಹಾವೇರಿ:ನಿರಂತರವಾಗಿ ಹೋರಾಟ,...

ಹಾವೇರಿ ಜಿಲ್ಲೆಯಲ್ಲಿ ಬರ ಘೊಷಿಸಿ, ರೈತರ ನೆರವಿಗೆ ಧಾವಿಸಿ-ವೆಂಕಟೇಶ ನಾರಾಯಣಿ

ಹಾವೇರಿ ಜಿಲ್ಲೆಯಲ್ಲಿ ಬರ ಘೊಷಿಸಿ, ರೈತರ ನೆರವಿಗೆ ಧಾವಿಸಿ-ವೆಂಕಟೇಶ ನಾರಾಯಣಿ ಹಾವೇರಿ: ಹಾವೇರಿ...

ಹಾವೇರಿ ಜಿಲ್ಲಾ ಕಾಂಗ್ರೆಸ್‌ಗೆ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಆನವಟ್ಟಿ

ಹಾವೇರಿ ಜಿಲ್ಲಾ ಕಾಂಗ್ರೆಸ್‌ಗೆ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಆನವಟ್ಟಿ ಹಾವೇರಿ:...