
ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ಆಚರಣೆ
ಹಾವೇರಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಹಾವೇರಿ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾವೇರಿ ಇವರುಗಳ ಸಹಯೋಗದೊಂದಿಗೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಕಛೇರಿಯಲ್ಲಿಂದು ಡಾ. ಪಂಡಿತ ಪುಟ್ಟರಾಜ ಗವಾಯಿ ಅವರ ಜಯಂತಿ ಆಚರಿಸಲಾಯಿತು. ಪಂಡಿತ ಪುಟ್ಟರಾಜ ಗವಾಯಿ ಅವರು ಒಳ್ಳೆಯ ಆದರ್ಶವ್ಯಕ್ತಿಗಳಾಗಿದ್ದರು, ಸಂಗಿತ ಕ್ಷೆತ್ರದಲ್ಲಿ ಒಳ್ಳೆಯ ವಿದ್ವಾಂಸರಾಗಿದ್ದಾರೆ, ಇವರ ತತ್ವ ಸಿದಾಂತಗಳು ನಮಗೆ ಮಾದರಿಯಾಗಿವೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾವೇರಿ ವಿಕಲಚೇತನರ ಕ್ಷೇತ್ರದಲ್ಲಿ ಹಲವಾರು ಕೆಲಸ ಮಾಡುತ್ತಿದೆಂದು ಹಾವೇರಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ಸಂಜೀವಕುಮಾರ ನೀರಲಗಿ ಹೆಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಹೆಚ್. ಕಾಂತರಾಜು, ನಿಂಗಪ್ಪ ಆರೇರ, ಡಾ. ಪ್ರದೀಪ ದೊಡ್ಡಗೌಡ್ರ, ಪ್ರಭು ಹಿಟ್ನಳ್ಳಿ, ರವಿ ಹಿಂಚೀಗೇರಿ, ಹನುಮಂತಗೌಡ ಗೊಲ್ಲರ, ಉಡಚಪ್ಪ ಮಾಳಗಿ, ಲಲಿತಾ ಹಿರೇಮಠ, ನಾಗಪ್ಪ ಈರಪ್ಪ ಇಚ್ಚಂಗಿ, ಶಿವಯೋಗಯ್ಯ ಹಿರೇಮಠ, ಸಿದ್ದರಾಜ ಕಲಕೋಟಿ, ಡಾ.ಪಿ.ಆರ್ ಹಾವನೂರ, ವಿಜಯಕುಮಾರ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಕೊಟುರ, ನೋಡಲ್ ಆಫೀಸರ್ ಪೂರ್ಣಿಮಾ ಮಠದ, ಡಿ.ಡಿ.ಆರ್.ಸಿ ಕಾರ್ಯವೃಂದದವರು ಹಾಗೂ ಜಿಲ್ಲೆಯ ವಿಕಲಚೇತನರು ಪಾಲ್ಗೊಂಡಿದ್ದರು.

