“ಪೂರ್ಣ ಪ್ರಮಾಣದ ಬೆಳೆ ವಿಮಾ ಪರಿಹಾರ ನೀಡದೇ ಹೋದರೆ ಲೋಕಸಭಾ ಚುನಾವಣೆ ಬಹಿಷ್ಕಾರ” ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹಾವೇರಿ ಕ.ರಾ.ರೈ.ಸಂಘ ಎಚ್ಚರಿಕೆ
ಹಾವೇರಿ: ಶತಮಾನಗಳಿಂದ ಎಂದೂ ಕಂಡು ಕೇಳರಿಯದ ಬರಗಾಲವನ್ನು ಹಾವೇರಿ ಜಿಲ್ಲೆಯ ರೈತರು ಅನುಭವಿಸಿ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಎರೆಡೆರಡು ಬಾರಿ ಬಿತ್ತನೆ ಮಾಡಿದರೂ ಮಳೆ ಬಾರದೆ ಬೆಳೆ ಕಳೆದುಕೊಂಡು ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದಾರೆ. ಕೇಂದ್ರ ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಎಕರೆಗೆ ರೂ. ೨೫,೦೦೦/- ಗಳಂತೆ ಬರಪರಿಹಾರ ಘೋಷಿಸಿ, ಬೆಳೆ ವಿಮೆ ತುಂಬಿದ ರೈತರಿಗೆ ಕೊಡುವಂತಾಗಬೇಕು. ಇಲ್ಲದೇ ಹೋದಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದರ ಮೂಲಕ ಉಗ್ರ ಪ್ರತಿಭಟನೆ ಕೈಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಾವೇರಿ ಜಿಲ್ಲಾ ಘಟಕದ ಪದಾಧಿಕಾರಿಗಳು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಅರ್ಪಿಸಿ ಎಚ್ಚರಿಸಿದ್ದಾರೆ.
ಶುಕ್ರವಾರ ಜಿಲ್ಲೆಯ ಬ್ಯಾಡಿಗಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸಚಿವ ಜೋಶಿ ಅವರಿಗೆ ಮನವಿ ಅರ್ಪಿಸಿದ ಸಂಘಟನೆಯ ರೈತ ಮುಖಂಡರುಗಳು. ರಾಜ್ಯ ಸರಕಾರ ರೈತ ಸಂಘಟನೆಯ ಹೋರಾಟಕ್ಕೆ ಮಣಿದು ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಕಾಗದದಲ್ಲಿ ಮಾತ್ರ ಘೋಷಿಸಿ ಕೈತೊಳೆದುಕೊಂಡಿರುತ್ತದೆ. ಈ ವರೆಗೂ ರೈತರಿಗೆ ಯಾವುದೇ ಪರಿಹಾರ ನೀಡದೇ ಕಾಟಾಚಾರಕ್ಕೆ ಎರಡು ಸಾವಿರ ರೂಪಾಯಿಗಳನ್ನು ಕೊಡುತ್ತೇವೆ ಎಂದು ಹೇಳುತ್ತಿರುವುದು ಎಷ್ಟರಮಟ್ಟಿಗೆ ಸರಿ? ರಾಜ್ಯದಲ್ಲಿ ೨೮ ಜನ ಲೋಕಸಭಾ ಸದಸ್ಯರಿದ್ದರೂ ಬರಗಾಲದ ಕುರಿತು ತುಟಿ ಬಿಚ್ಚದೇ ಮೌನಕ್ಕೆ ಶರಣಾಗಿದ್ದಾರೆ.
ಕೇಂದ್ರದ ಮೇಲೆ ರಾಜ್ಯ ರಾಜ್ಯದ ಮೇಲೆ ಕೇಂದ್ರ ಸರಕಾರಗಳು ಬರಪರಿಹಾರದ ಕುರಿತು ಬೆರಳು ತೋರಿಸುತ್ತಾ ರಾಜಕೀಯ ಮಾಡುತ್ತಿರುವುದು ರೈತರಿಗೆ ಮಾಡುವ ದ್ರೋಹವಾಗಿದೆ. ಈಗಾಗಲೇ ಚುನಾವಣೆಯ ಗುಂಗಿನಲ್ಲಿ ರಾಜ್ಯದ ಮಂತ್ರಿಗಳು, ಶಾಸಕರು, ಸಂಸತ್ ಸದಸ್ಯರು ಚುನಾವಣೆಯ ಸಲುವಾಗಿ ಹಗಲಿರಳು ದುಡಿಯುತ್ತಿರುವಾಗ ರೈತರ ಸಮಸ್ಯೆಗಳ ಕುರಿತು ಚರ್ಚಿಸದಿರುವುದು ವಿಷಾಧನೀಯ. ಬರುವ ಚುನಾವಣೆಯಲ್ಲಿ ಜಿಲ್ಲೆಯ ರೈತರು ಚುನಾವಣೆ ಬಹಿಷ್ಕರಿಸುವುದರ ಜೊತೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ಈ ಕೂಡಲೇ ಎಚ್ಚೆತ್ತುಕೊಂಡು ಬರಪರಿಹಾರ ಘೋಷಿಸಿಬೇಕೆಂದು ಒತ್ತಾಯಿಸಿದರು.
ಬೀಜ, ಗೊಬ್ಬರ, ಕ್ರೀಮಿನಾಶಕ, ಉಳಿಮೆಯ ಖರ್ಚು ಸೇರಿ ಪ್ರತಿ ಎಕರೆಗೆ ರೂ. ೨೦ ಸಾವಿರ ಖರ್ಚು ಬರುವುದರಿಂದ ಬರಗಾಲದಿಂದ ತತ್ತರಿಸಿರುವ ರೈತರಿಗೆ ಪ್ರತಿ ಎಕರೆಗೆ ೨೫,೦೦೦/- ರೂಗಳ ಬರಪರಿಹಾರ ಘೋಷಿಸಬೇಕು. ರೈತ ಸಂಘಟನೆಯ ಹೋರಾಟಕ್ಕೆ ಮಣಿದು ಬೆಳೆವಿಮಾ ಕಂಪನಿಯವರು ಶೇ. ೨೫% ಮದ್ಯಂತರ ವಿಮಾ ಪರಿಹಾರ ಕೇವಲ ಮೆಕ್ಕೆಜೋಳಕ್ಕೆ ಮಾತ್ರ ಕೊಟ್ಟಿರುತ್ತಾರೆ. ಬರಗಾಲ ಬಂದರೆ ಎಲ್ಲ ಬೆಳೆಗಳು ಹಾನಿಯಾಗುತ್ತವೆ. ಮೆಕ್ಕೆಜೋಳ ಹೊರತುಪಡಿಸಿ ಉಳಿದ ಬೆಳೆಗಳಿಗೆ ವಿಮಾ ಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡಿದ್ದಾರೆ.
ಬೆಳೆವಿಮೆ ತುಂಬುವಾಗ ನಿರ್ದಿಷ್ಟ ದಿನಾಂಕ ನಿಗಧಿಯಾಗಿರುತ್ತದೆ. ಆದರೆ ವಿಮಾ ಕಂಪನಿಯವರು ವಿಮಾ ಪರಿಹಾರ ಕೊಡುವಾಗ ನಿರ್ದಿಷ್ಟ ದಿನಾಂಕ ಮತ್ತು ಅವಧಿ ಇದ್ದರೂ ಕೂಡಾ ಜಾಣ ಕುರುಡನಂತೆ ಕಂಪನಿಯವರು ರೈತರನ್ನು ಸತಾಯಿಸುತ್ತಿರುವುದು ಖಂಡನೀಯ. ಕಾರಣ ಕೇಂದ್ರ ಸರಕಾರ ಈ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಎಕರೆಗೆ ರೂ. ೨೫,೦೦೦/- ಗಳಂತೆ ಬರಪರಿಹಾರ ಘೋಷಿಸಿ ಬೆಳೆ ವಿಮೆ ತುಂಬಿದ ರೈತರಿಗೆ ಪೂರ್ಣ ಪ್ರಮಾಣದ ಬೆಳೆ ವಿಮಾ ಪರಿಹಾರ ಕೊಡುವಂತಾಗಬೇಕು. ಇಲ್ಲದೇ ಹೋದಲ್ಲಿ ಮುಂದೆ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದರ ಮೂಲಕ ಉಗ್ರ ಪ್ರತಿಭಟನೆ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಅರ್ಪಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಾವೇರಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳಾರಿ, ಆರ್. ಬಿ. ಕಾಡನಗೌಡ, ಗಂಗಣ್ಣ ಎಲಿ,ಕಿರಣಕುಮಾರ ಗಡಿಗೋಳ, ಚಿಕ್ಕಪ್ಪ ಛತ್ರದ,ಕೆ. ವಿ. ದೊಡ್ಡಗೌಡ್ರ ಮತ್ತಿತರರು ಇದ್ದರು.

Date: