ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಜುಲೈ ೨೯ ರಂದು ಅಧಿಸೂಚನೆ
ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಸಕಲ ಸಿದ್ಧತೆ
-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
ಹಾವೇರಿ : ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜಕೀಯ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಯಶಸ್ವಿ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಚುನಾವಣಾ ವೇಳಾಪಟ್ಟಿ : ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ ೨೯-೦೭-೨೦೨೫ ಮಂಗಳವಾರ, ನಾಮ ಪತ್ರ ಸಲ್ಲಿಸಲು ಕೊನೆಯ ದಿನಾಂಕ ೦೫-೦೮-೨೦೨೫ ಮಂಗಳವಾರ, ನಾಮ ಪತ್ರ ಪರಿಶೀಲನೆ ದಿನಾಂಕ ೦೬-೦೮-೨೦೨೫ ಬುಧವಾರ, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ೦೮-೦೮-೨೦೨೫ ಶುಕ್ರವಾರ, ಮತದಾನ ನಡೆಯುವ ದಿನಾಂಕ ೧೭-೦೮-೨೦೨೫ ಭಾನುವಾರ ಬೆಳಿಗ್ಗೆ ೭ ಗಂಟೆಯಿAದ ಸಾಯಂಕಾಲ ೫ ಗಂಟೆವರೆಗೆ, ಮರು ಮತದಾನ ಅವಶ್ಯವಿದ್ದಲ್ಲಿ ದಿನಾಂಕ ೧೯-೦೮-೨೦೨೫ ಮಂಗಳವಾರ ನಡೆಯಲಿದೆ. ಮತಗಳ ಎಣಿಕೆ ತಾಲೂಕಾ ಕೇಂದ್ರ ಸ್ಥಳದಲ್ಲಿ ದಿನಾಂಕ ೨೦-೦೮-೨೦೨೫ ಬುಧವಾರ ಬೆಳಿಗ್ಗೆ ೮ ಗಂಟೆಯಿAದ ಜರುಗಲಿದೆ.
ಚುನಾವಣಾ ಮಾದರಿ ನೀತಿ ಸಂಹಿತೆ : ಈ ಚುನಾವಣೆಯ ಮಾದರಿ ನೀತಿ ಸಂಹಿತೆಯು ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ ೨೯-೦೭-೨೦೨೫ರಿಂದ ದಿನಾಂಕ ೨೦-೦೮-೨೦೨೫ರ ವರೆಗೆ ಜಾರಿಯಲ್ಲಿರುತ್ತದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ವಾರ್ಡುವಾರು ಮೀಸಲಾತಿ: ರಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ೧೫ ವಾರ್ಡುಗಳಿದ್ದು, ವಾರ್ಡ್ ನಂ. ೧ ಪರಿಶಿಷ್ಟ ಪಂಗಡ, ವಾರ್ಡ್ ನಂ. ೨ ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ನಂ. ೩ ಸಾಮಾನ್ಯ, ವಾರ್ಡ್ ನಂ. ೪ ಸಾಮಾನ್ಯ, ವಾರ್ಡ್ ನಂ.೫ ಹಿAದುಳಿದ ವರ್ಗ (ಎ), ವಾರ್ಡ್ ನಂ. ೬ ಸಾಮಾನ್ಯ ಮಹಿಳೆ, ವಾರ್ಡ್ ನಂ.೭ ಹಿAದುಳಿದ ವರ್ಗ (ಬಿ),ವಾರ್ಡ್ ನಂ. ೮ ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ನಂ. ೯ ಸಾಮಾನ್ಯ, ವಾರ್ಡ್ ನಂ.೧೦ ಸಾಮಾನ್ಯ, ವಾರ್ಡ್ ನಂ.೧೧ ಹಿಂದುಳಿದ ವರ್ಗ (ಎ), ವಾರ್ಡ್ ನಂ. ೧೨ ಸಾಮಾನ್ಯ ಮಹಿಳೆ, ವಾರ್ಡ್ ನಂ. ೧೩ ಸಾಮಾನ್ಯ ಮಹಿಳೆ, ವಾರ್ಡ್ ನಂ.೧೪ ಪರಿಶಿಷ್ಟ ಜಾತಿ ಹಾಗೂ ವಾರ್ಡ್ ನಂ.೧೫ ಸಾಮಾನ್ಯ ಮಹಿಳೆ ಹೀಗೆ ಅಂತಿಮ ಮೀಸಲಾತಿಯನ್ನು ಹೊರಡಿಸಲಾಗಿದೆ.
ಮತದಾರರ ವಿವರ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ೫,೮೬೯ ಪುರುಷರು, ೫,೮೪೨ ಮಹಿಳೆಯರು ಹಾಗೂ ಇತರೆ ಓರ್ವರು ಸೇರಿ ೧೧,೭೧೨ ಮತದಾರರಿದ್ದಾರೆ.
ಒಂದು ಲಕ್ಷ ವೆಚ್ಚ: ಪಟ್ಟಣ ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವೆಚ್ಚ ಗರಿಷ್ಟ ರೂ.೧,೦೦,೦೦೦/- (ಒಂದು ಲಕ್ಷ) ಮೀರುವಂತಿಲ್ಲ.
ಠೇವಣಿ: ಪಟ್ಟಣ ಪಂಚಾಯತಿ ಚುನಾವಣೆಗೆ ಸಾಮಾನ್ಯ ಅಭ್ಯರ್ಥಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವಾಗ ರೂ. ಒಂದು ಸಾವಿರ ಹಾಗೂ ಹಿಂದುಳಿದ ವರ್ಗ/ಅನುಸೂಚಿತ ಜಾತಿ/ಅನುಸೂಚಿತ ಪಂಗಡ/ಮಹಿಳೆ ಆಗಿದ್ದಲ್ಲಿ ರೂ.೫೦೦ ಮೊತ್ತದ ಠೇವಣಿ ಸಲ್ಲಿಸಬೇಕು ಎಂದು ತಿಳಿಸಿದರು.
ಚುನಾವಣಾಧಿಕಾರಿಗಳ ನೇಮಕ: ವಾರ್ಡ್ ನಂ. ೧ ರಿಂದ ೮ಕ್ಕೆ ಚುನಾವಣಾಧಿಕಾರಿಯಾಗಿ ಹಿರೇಕೆರೂರು ಸರಕಾರಿ ಪದವಿ ಪೂರ್ವ ಕಾಲ್ಭೆಜು ಪ್ರಾಚಾರ್ಯ ಡಿ.ಮಹಾದೇವ (೯೯೦೧೯೧೨೯೮೦) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಯಡಗೋಡ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಆರ್.ತೇವರಿ (ಮೊ.೯೪೪೯೧೭೫೫೮೬) ಅವರನ್ಮ್ನ ನೇಮಕ ಮಾಡಲಾಗಿದೆ. ವಾರ್ಡ್ ನಂ. ೯ ರಿಂದ ೧೫ಕ್ಕೆ ಚುನಾವಣಾಧಿಕಾರಿಯಾಗಿ ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಸಹಾಯಕ ಪ್ರಾಧ್ಯಾಪಕರು ಗಂಗರಾಜು (ಮೊ.೭೮೯೨೮೧೪೪೩೮) ಸಹಾಯಕ ಚುನಾವಣಾಧಿಕಾರಿಯಾಗಿ ಹಿರೇಕಬ್ಬಾರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶಿವಪ್ಪ ಸಣ್ಣಶಿವಣ್ಣನವರ(ಮೊ.೯೬೧೧೬೪೬೮೫೯) ಅವರನ್ನು ನೇಮಕ ಮಾಡಲಾಗಿದೆ. ರಟ್ಟಿಹಳ್ಳಿ ಕೃಷಿ ಇಲಾಖೆ ಕಟ್ಟಡದಲ್ಲಿ ಚುನಾವಣಾ ಕಚೇರಿ ಆರಂಭಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು.
ಸದಾಚಾರ ಸಂಹಿತೆ ತಂಡ: ಈ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲಿಸಲು ಅಗತ್ಯವಿರುವ ಅಧಿಕಾರಿಗಳನ್ನು ನೇಮಿಸಲಾಗಿದೆ. ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಬ್ಬರು ಎ-ಗ್ರೇಡ್ ಅಧಿಕಾರಿ, ಒಬ್ಬರು ಪೋಲೀಸ್ ಅಧಿಕಾರಿ, ಒಬ್ಬರು ಬಿ-ಗ್ರೇಡ್ ಅಧಿಕಾರಿಗಳು ಮತ್ತು ಪೋಲೀಸ್ ಸಿಬ್ಬಂದಿ, ಕ್ಯಾಮರಾಮ್ಯಾನ್ ಸೇರಿದಂತೆ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ಒಂದು ತಂಡವನ್ನು ರಚಿಸಲಾಗಿದೆ.
ವಿವಿಧ ಅಧಿಕಾರಿಗಳ ನೇಮಕ: ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದ ಎಲ್ಲ ಸಿದ್ದತೆಗಳು ಕಾರ್ಯಗಳ ಮೇಲುಸ್ತುವಾರಿಗಾಗಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ಅಭ್ಯರ್ಥಿಗಳ ಪ್ರಚಾರ ಸಾಮಗ್ರಿ ಅನುಮತಿಗೆ ಹಾಗೂ ಪರಿಶೀಲನೆಗೆ ಜಿಲ್ಲಾ ಮಟ್ಟದ ಮಾಧ್ಯಮ ಸಮಿತಿ ರಚನೆ.
ಮತಯಂತ್ರಗಳ ಬಳಕೆ: ಈ ಚುನಾವಣೆಯಲ್ಲಿ ರಾಜ್ಯ ಚುನಾವಣಾ ಆಯೋಗದವರು ಈ ಜಿಲ್ಲೆಗೆ ಹಂಚಿಕೆ ಮಾಡಿದ ಇ.ವಿ.ಎಂಗಳನ್ನು ಬಳಸಲಾಗುವುದು. ಈ ಇ.ವಿ.ಎಂಗಳನ್ನು ಪ್ರಥಮ ಹಂತದ ತಪಾಸಣೆ (ಎಫ್‌ಎಲ್‌ಸಿ) ಮಾಡಿ ಈ ಕಾರ್ಯಾಲಯದಿಂದ ತಹಶೀಲ್ದಾರರಿಗೆ ಕಳುಹಿಸಲಾಗುವುದು. ಈ ಚುನಾವಣೆಯಲ್ಲಿ ವಿವಿಪ್ಯಾಟ್ ಇರುವುದಿಲ್ಲ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುವುದು.
ತರಬೇತಿ: ಚುನಾವಣೆಗಾಗಿ ನೇಮಕಗೊಂಡ ಸೆಕ್ಟ್ರ್ ಅಧಿಕಾರಿ, ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು.
ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಮತ ಎಣಿಕೆ: ರಟ್ಟಿಹಳ್ಳಿ ಪಟ್ಟಣದ ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯ ಜರುಗಲಿದೆ. ಮತಗಳ ಎಣಿಕೆಯ ನಂತರ ಈ ಮತ ಯಂತ್ರಗಳನ್ನು ತಹಶೀಲ್ದಾರರ ಅಭಿರಕ್ಷೆಯಲ್ಲಿ ಸುರಕ್ಷಿತವಾಗಿ ಇಡಲಾಗುವುದು.
ಸಿಬ್ಬಂದಿಗಳ ನೇಮಕಾತಿ: ಪ್ರತಿ ಮತಗಟ್ಟೆಗೆ ಒಬ್ಬರು ಪಿಆರ್‌ಓ, ಏಪಿಆರ್‌ಓ, ಒಬ್ಬರು ಮೊದಲನೇ ಪೋಲಿಂಗ್ ಅಧಿಕಾರಿ, ಒಬ್ಬರು ಎರಡನೇ ಪೋಲಿಂಗ್ ಅಧಿಕಾರಿ ಹೀಗೆ ಒಟ್ಟು ೪ ಜನ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಜೊತೆಗೆ ಪ್ರತಿಶತ:೧೦ ರಷ್ಟು ಕಾಯ್ದಿರಿಸಿದ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಪಿ.ಆರ್.ಓ ಹಾಗೂ ಎ.ಪಿ.ಆರ್.ಓ ತಲಾ ೨೩ ಹಾಗೂ ಪಿ.ಓ೧ ಮತ್ತು ೨ ಹೀಗೆ ೪೬ ಸೇರಿ ಒಟ್ಟು ೯೨ ಜನ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪೋಲೀಸ್ ಬಂದೋಬಸ್ತ್ : ರಟ್ಟಿಹಳ್ಳಿ ಪಟ್ಟಣ ಪಂಚಾಯತಿ ಸಾರ್ಚತ್ರಿಕ ಚುನಾವಣೆಗೆ ಸಂಬAಧಿಸಿದAತೆ ಸೂಕ್ಷö್ಮ/ಅತೀಸೂಕ್ಷö್ಮ ಮತಗಟ್ಟೆಗಳ ಆಧಾರದ ಮೇಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅಗತ್ಯ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಚುನಾವಣಾ ತಹಶೀಲ್ದಾರ ಅಮೃತಗೌಡ ಪಾಟೀಲ, ವಿವಿಧ ಪಕ್ಷದ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

Date: