ಶಿಗ್ಗಾಂವ : ಹೊಲದಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಐವರು ಪಾರು

Date:

ಸೋಲೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್‌

ಹಾವೇರಿ: ಭಾರತೀಯ ವಾಯುಪಡೆಗೆ ಸೇರಿದ ಹೆಲಿಕಾಪ್ಟರ್‌ವೊಂದು ತಾಂತ್ರಿಕ ದೋಷದಿಂದ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಕಾಮನಹಳ್ಳಿ ಗ್ರಾಮದ ಸಮೀಪದ ಹೊಲವೊಂದರಲ್ಲಿ ಬುಧವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಐವರು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕಾಮನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿರುವ ರೈತರೊಬ್ಬರ ಹೊಲದಲ್ಲಿ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ ಮಾಡಿದೆ. ZD 4050 ನೋಂದಣಿ ಸಂಖ್ಯೆಯ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಇದಾಗಿದ್ದು, ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಹೊಲದಲ್ಲಿ ಇಳಿಸಲಾಗಿದೆ.

ಹೆಲಿಕಾಪ್ಟರ್‌ನಲ್ಲಿ ವಾಯುಪಡೆಯ ದೀಪಕ್ ಶರ್ಮಾ ಸೇರಿದಂತೆ ಐವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ತಮಿಳುನಾಡಿನ ಸೋಲೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಹೆಲಿಕಾಪ್ಟರ್‌ ಅನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿಗ್ಗಾಂವ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ

ಹಾವೇರಿಯಲ್ಲಿ ರೋಮಾಂಚಕ ಹೋರಿ ಹಬ್ಬದ ವೈಭವ ಹಾವೇರಿ:...

ಹಾವೇರಿ ಉದ್ಯಮಿಗೆ ಬೆಂಗಳೂರಲ್ಲಿ ಹನಿಟ್ರ್ಯಾಪ್ … !

      ಹಾವೇರಿ ಉದ್ಯಮಿಗೆ ಬೆಂಗಳೂರಲ್ಲಿ ಹನಿಟ್ರ್ಯಾಪ್ ... !ಹಾವೇರಿ ಉದ್ಯಮಿಗೆ ಬೆಂಗಳೂರಲ್ಲಿ ಹನಿಟ್ರ್ಯಾಪ್ ......