ಸಂತ್ರಸ್ತೆಗೆ ಶಾಸಕ ಬಸವರಾಜ ಶಿವಣ್ಣನರ ಸಾಂತ್ವನ
ಹಾವೇರಿ: ನಗರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ತಂಗಿರುವ ಹಾನಗಲ್ಲ ಪ್ರಕರಣದ ಸಂತ್ರಸ್ತೆಯನ್ನು ಶನಿವಾರ ಮಾಜಿಸಚಿವರು, ಶಾಸಕರಾದ ಬಸವರಾಜ ಶಿವಣ್ಣನವರ ಭೇಟಿ ಮಾಡಿ ಸಾಂತ್ವನ ಹೇಳಿದರು. ಸಾಂತ್ವನ ಕೇಂದ್ರದ ಮುಂದೆ ನಿಂತು ಮಹಿಳೆಗೆ ಧೈರ್ಯ ತುಂಬಿದ ಶಾಸಕರು ನಿಮ್ಮ ಜೊತೆಗೆ ಸರ್ಕಾರವಿದೆ ಎಂದು ಸಂತ್ರಸ್ತ ಮಹಿಳಿಗೆ ೫೦.ಸಾವಿರ ಪರಿಹಾರ ನೀಡಿದರು.
ನಂತರದಲ್ಲಿ ಮಾದ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಈ ಘಟನೆ ನಡೆಯಬಾರದಿತ್ತು, ಬಹಳ ನೋವಿನ ಸಂಗತಿಯಾಗಿದೆ. ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುತ್ತಾರೆ. ತಪ್ಪಿತಸ್ಥ ರಿಗೆ ಶಿಕ್ಷೆ ಯಾಗುತ್ತದೆ ಎಂದರು.
ಸಿಐಡಿ ತನಿಖೆಯಾದರೆ ಒಳಿತು: ಹಾನಗಲ್ ಘಟನೆಯ ತನಿಖೆಯನ್ನು ಸ್ಥಳೀಯ ಪೊಲೀಸರು ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.ಬಿಜೆಪಿಯ ಮುಖಂಡರು ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿರುವುದು ಸರಿಯಾದುದಲ್ಲ. ಸಿಐಡಿ ತನಿಖೆಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಸಿಐಡಿ ತನಿಖೆ ನಡೆಸುವುದು ಸೂಕ್ತ, ಸಿಐಡಿ ತನಿಖೆ ಯನ್ನು ಸ್ವಾಗತಿಸುವುದಾಗಿ ಶಾಸಕ ಬಸವರಾಜ್ ಶಿವಣ್ಣನವರ ಹೇಳಿದರು.
ಹಾನಗಲ್ಲ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಹಾನಗಲ್ಲ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈರೀಯ ಘಟನೆಗಳು ಆಗಬಾರದು, ತಪ್ಪಿಸ್ಥರಮೇಲೆ ಯೋಗ್ಯ ಕ್ರಮ, ಸಂತ್ರಸ್ಥ ಮಹಿಳೆಗೆ ಪರಿಹಾರ ನೀಡುವುದರ ಜೊತೆಗೆ ಧೈರ್ಯದಿಂದ ಇರುವಂತೆ ಹೇಳಿದ್ದೇವೆ. ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಯುವುದರ ಜೊತೆಗೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಹಾನಗಲ್ಲ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ಶಹರ ಸಿಪಿಐ ಪವಾರ ಮತ್ತಿತರರು ಇದ್ದರು.

Date: