ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ಆಗ್ರಹ-ಒಳಮೀಸಲಾತಿ ಹೋರಾಟ ಸಮಿತಿ ಬ್ರಹತ್ ಪ್ರತಿಭಟನೆ

Date:

ಹಾವೇರಿ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿ? ಜಾತಿಗೆ ಒಳಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಶುಕ್ರವಾರ ಒಳಮೀಸಲಾತಿ ಹೋರಾಟ ಸಮಿತಿಹಾವೇರಿ ಜಿಲ್ಲಾ ಸಮಿಯು ಜನಾಕ್ರೋಶ ಪ್ರತಿಭಟನೆ ನಡೆಸಿ ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.
ಇಲ್ಲಿನ ಜಿಲ್ಲಾಡಳಿತ ಕಛೇರಿಯ ಮುಂದೆ ಒಳಮೀಸಲಾತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ ರಾಜ್ಯದಲ್ಲಿ ಪರಿಶಿ? ಜಾತಿಗಳ ಸಮುದಾಯದೊಳಗಿನ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಒಳ ಮೀಸಲಾತಿಯ ಬೇಡಿಕೆ ಈಡೇರಿಕೆಗೆ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಶೀಘ್ರವಾಗಿ ಒಳಮೀಸಲಾತಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ. ಎಸ್. ಮಾಳಗಿ ಮಾತನಾಡಿ ಅಸಮಾನತೆಯನ್ನು ಸರಿಪಡಿಸಲು, ದಿನಾಂಕ ೧-೦೮-೨೦೨೪ ರಂದು ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ಪ?ವಾಗಿ ಪರಿಶಿ? ಜಾತಿ ಪಟ್ಟಿಯಲ್ಲಿರುವ ೧೦೧ ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.
ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ನಮಗೆ ಆಗಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲಾ ನಮ್ಮ ಬೇಡಿಕೆ ಈಡೇರಿಕೆ ಮಾಡಲು ಸರ್ಕಾರ ಮುಂದಾಗಬೇಕೆಂದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಲಗಮನಿ ಮಾತನಾಡಿ ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ತುರ್ತು ನಿಗಾವಹಿಸಿ ಒಳಮೀಸಲಾತಿಯನ್ನು ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಒದಗಿಸಿವೆ. ರಾಜ್ಯ ಸರ್ಕಾರದ ನಿರ್ಲಕ್ಷದಿಂದಾಗಿ ನಾಗಮೋಹನ್ ದಾಸ್ ಆಯೋಗಕ್ಕೆ ಆರು ತಿಂಗಳಾದರು ಸರಿಯಾದ ಮಾಹಿತಿಗಳು ಆಯೋಗಕ್ಕೆ ಬಂದಿಲ್ಲ.ಸರ್ಕಾರ ಕುಂಟು ನೆಪಹೇಳದೇ ಶೀಘ್ರವಾಗಿ ಒಳಮೀಸಲಾತಿ ಮಾಡಲು ಮುಂದಾಗಬೇಕು ಎಂದರು.
ರಾಜ್ಯ ಸಂಘಟನಾ ಸಂಚಾಲಕರಾದ ಉಡಚಪ್ಪ ಮಾಳಗಿ ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ ಮಾಳಗಿ ಮಾತನಾಡಿ ಸರ್ಕಾರ ಅಗಸ್ಟ್-೧೫ ಒಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿ? ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು,ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದರು.
ಮುಖಂಡರಾದ ಹೊನ್ನಪ್ಪ ತಗಡಿನಮನಿ, ನೀಲಕಂಠಪ್ಪ ಕುಸನೂರ, ಪ್ರಕಾಶ ಪೂಜಾರ, ಅಶೋಕ ಮರೆಣ್ಣನವರ,ತಿರಕಪ್ಪ ಚಿಕ್ಕೇರಿ, ಬಿ.ಆರ್. ಪುಟ್ಟಣ್ಣನವರ, ಸುಭಾಷ ಬೆಂಗಳೂರು,ಸಂತೋಷ ಗುಡ್ಡಪ್ಪನವರ,ಕರಿಯಪ್ಪ ಕಟ್ಟಿಮನಿ,ಮಲ್ಲೇಶ ಕುನ್ನೂರ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾಲತೇಶ ಯಲ್ಲಾಪುರ, ಜಗದೀಶ ಹರಿಜನ, ಸುರೇಶ ಆಶಾದಿ, ಕೃಷ್ಣ ಕರ್ಜಗಿ, ಮಲ್ಲೇಶ ಕಡಕೋಳ, ಮಹೇಶ ಹರಿಜನ, ಸುಭಾಸ ಮಾಳಗಿ, ಸುನೀಲಬೇಟಗೇರಿ, ರಾಜು ಹರಿಜನ ಸೇರಿದಂತೆ ಜಿಲ್ಲೆಯ ವಿವಿಧಭಾಗಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ೨ಕೋಟಿ ಸಾಲ ಮಾಡಿದ ಮಾನಿನಿ-ತುಂಬಿಹರಿವ ತುಂಗಭದ್ರಾನದಿಗೆ ಜಿಗಿದಳು!

 ಹಾವೇರಿ: ೨ಕೋಟಿ ಸಾಲ ಮಾಡಿದ ಮಾನಿನಿ-ತುಂಬಿಹರಿವ ತುಂಗಭದ್ರಾನದಿಗೆ ಜಿಗಿದಳು! ಹಾವೇರಿ: ಕೋಟ್ಯಾಂತರರೂಗಳ...

ನಾಗರಪಂಚಮಿ ಹಬ್ಬದಲ್ಲಿ ನಾಗರಹಾವಿನ ರಕ್ಷಣೆ !

ನಾಗರಪಂಚಮಿ ಹಬ್ಬದಲ್ಲಿ ನಾಗರಹಾವಿನ ರಕ್ಷಣೆ ! ಹಾವೇರಿ: 'ಕಲ್ಲ ನಾಗರ ಕಂಡರೆ ಹಾಲನ್ನೆರಿವವರು,...

ಕರ್ನಾಟಕದಿಂದ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆಗಾಗಿ ಭಾರತ್ ಗೌರವ್ ಯಾತ್ರೆಗೆ ವಿಶೇಷ ರೈಲುಗಳು

ಐಆರ್'ಸಿಟಿಸಿ: ಕರ್ನಾಟಕದಿಂದ ಕಾಶಿ ದರ್ಶನ ಮತ್ತು ದಕ್ಷಿಣ ಯಾತ್ರೆಗಾಗಿ ಭಾರತ್ ಗೌರವ್...

ಹಾಲು ಅಮೃತಕ್ಕೆ ಸಮಾನ, ಅಪವ್ಯಯ ಬೇಡ; ರಮೇಶ ಆನವಟ್ಟಿ

ಹಾಲು ಅಮೃತಕ್ಕೆ ಸಮಾನ, ಅಪವ್ಯಯ ಬೇಡ; ರಮೇಶ ಆನವಟ್ಟಿ ಹಾವೇರಿ: ಹಾಲು...