ಹಾನಗಲ್ಲ ಅತ್ಯಾಚಾರ ಪ್ರಕರಣ, ಮತ್ತೆ ಮೂವರು ಆರೋಪಿಗಳ ಬಂಧನ, ೧೫ಕ್ಕೇರಿದ ಬಂಧಿತರ ಸಂಖ್ಯೆ
ಹಾನಗಲ್ಲ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ಮೂವರುಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ. ಈ ಮೂವರ ಬಂಧನದಿಂದ ಬಂಧಿತರ ಸಂಖ್ಯೆ ೧೫ಕ್ಕೇರಿದೆ. ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಅಕ್ಕಿಆಲೂರಿನ ಆರೋಪಿ ಗಳಾದ ಇಸ್ಮಾಯಿಲ್ ಹುಬ್ಬಳ್ಳಿ, ರೆಯಾಜ್ ಸವಿಕೆರೆ, ನಿಯಾಜ್ ದರ್ಗಾ ಅವರನ್ನು ಬಂಧಿಸಲಾಗಿದೆಎಂದು ಹೆಚ್ಚು ವರಿಜಿಲ್ಲಾ ಪೊಲೀಸ್ ವರಿಷ್ಠ ಗೋಪಾಲ ತಿಳಿಸಿದ್ದಾರೆ.