ಹಾವನೂರ ಶ್ರೀ ಗ್ರಾಮದೇವತಾ ಜಾತ್ರೆ: ಮದ್ಯ ಮಾರಾಟ ನಿಷೇಧ
ಹಾವೇರಿ: ಜಿಲ್ಲೆಯ ಹಾವನೂರ ಗ್ರಾಮದ ಶ್ರೀ ಗ್ರಾಮದೇವತಾ (ಶ್ರೀ ದ್ಯಾಮವ್ವದೇವಿ) ಜಾತ್ರೆ ನಿಮಿತ್ಯ ಹಾವನೂರ ಗ್ರಾಮದಲ್ಲಿ ಫೆ.೪ ರಂದು ಬೆಳಿಗ್ಗೆ ೬ ರಿಂದ ಫೆ.೫ರ ರಾತ್ರಿ ೧೨ ಗಂಟೆವರೆಗೆ ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.