ಹಾವೇರಿಜಿಲ್ಲೆಯಲ್ಲಿ ಕಳವು ಪ್ರಕರಣ ತಡೆಯಲು “ಲಾಕ್ ಹೌಸ್ಡ್ ಬೀಟ್ ಸಿಸ್ಟಮ್” ವ್ಯವಸ್ಥೆ ಜಾರಿ
ಹಾವೇರಿ: ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಮನೆಗಳ್ಳತನದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕಳ್ಳರು ಹಣ್ಣು, ತರಕಾರಿ ಹಾಗೂ ಬಟ್ಟೆ ಮಾರುವವರ ವೇಷದಲ್ಲಿ ವಿವಿಧ ಗ್ರಾಮ, ನಗರ ಮತ್ತು ಬಡಾವಣೆಗಳಲ್ಲಿ ಸಂಚರಿಸಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರುತ್ತದೆ. ರಾಜ್ಯ ಮತ್ತು ಹೊರ ರಾಜ್ಯ ದಿಂದ ಆಗಮಿಸುವ ಕಳ್ಳರು ಅಪರಾದ ಎಸಗುವ ಸಾಧ್ಯತೆಗಳಿರುತ್ತವೆ.
ಈ ಹಿನ್ನಲೆಯಲ್ಲಿ ಮನೆಗಳ ಸುರಕ್ಷತೆಗಾಗಿ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯು “ಲಾಕ್ ಹೌಸ್ಡ್ ಬೀಟ್ ಸಿಸ್ಟಮ್” “(ಐಔಅಏಇಆ ಊಔUSಇ ಃಇಂಖಿ SಙSಖಿಇಒ (ಐಊಃS)) ವಿಶೇಷ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಈ ವ್ಯವಸ್ಥೆಯು ಬೀಗ ಹಾಕಿದ ಮನೆಗಳ ಮೇಲೆ ಕೇಂದ್ರಿಕೃತವಾದ ಕಣ್ಣಾವಲು ನಡೆಸಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯಡಿ ಸಾರ್ವಜನಿಕರು ಊರಿಗೆ ಅಥವಾ ಹೊರಗಡೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗೆ ಬೀಗ ಹಾಕಿ ಹೊರಡುವ ಮುನ್ನ ಹೆಸರು, ವಿಳಾಸ, ಗೂಗಲ್‌ಲೋಕೇಶನ್, ಮನೆ ಮುಂದಿನ ಸೆಲ್ಪಿ ಮತ್ತು ಮನೆಯಿಂದ ಹೊರಗಡೆ ಹೋಗುವ ಅವಧಿ ಮುಂತಾದ ಮಾಹಿತಿಯನ್ನು ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಹಾವೇರಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ನಿಗದಿಪಡಿಸಲಾದ ಮೊಬೈಲ್ ನಂಬರ್ ೮೨೭೭೯೮೪೧೫೮ ನೇದ್ದಕ್ಕೆ ವಾಟ್ಸ್-ಅಪ್ ಮಾಡುವುದು.
ಈ ಮಾಹಿತಿಯನ್ನು ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಸಂಗ್ರಹಿಸಿ ಗೌಪ್ಯವಾಗಿಟ್ಟು ಬಳಿಕ ಸಂಬಂದಿತ ಪೊಲೀಸ್ ಠಾಣೆಯ ಬೀಟ್ ಪೊಲೀಸರಿಗೆ ಮಾಹಿತಿ ರವಾನಿಸಿ ಸದರಿ ಮನೆಗಳ ಮೇಲೆ ಬೀಟ್ ಪೊಲೀಸರು ವಿಶೇಷ ನಿಗಾವಹಿಸಿ ರಾತ್ರಿ ವೇಳೆಯಲ್ಲಿ ಗಸ್ತು ತಿರುಗುವುದಲ್ಲದೆ ಮನೆಗಳ್ಳತನ. ಅನುಮಾನಾಸ್ಪದ ವ್ಯಕ್ತಿಗಳ ಚಲನ-ವಲನ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕಾರ್ಯನಿರ್ವಸುತ್ತಾರೆ. ಇದರಿಂದ ಸಾರ್ವಜನಿಕರು ಆತಂಕವಿಲ್ಲದೆ ತಮ್ಮ ಕಾರ್ಯಕ್ರಮಗಳಿಗೆ ತೆರಳಲು ಅನುಕೂಲವಾಗುವುದು. ಈ ವ್ಯವಸ್ಥೆಯಿಂದ ಮನೆಗಳ್ಳತನ ಪ್ರಕಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಕಾರಣ ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯು ಮನೆಗಳ ಸುರಕ್ಷತೆಗಾಗಿ ಜಾರಿಗೊಳಿಸಲಾದ ಈ ಯೋಜನೆಯನ್ನು ಸಾರ್ವಜನಿಕರು ಪರಿಣಾಮಕಾರಿಯಾಗಿ ಸದುಪಯೋಗ ಪಡೆದುಕೊಳ್ಳಲು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

—
malatesh angur
sub-editor
kourava daily,
haveri
sub-editor
kourava daily,
haveri