ಹಾವೇರಿ:ಬೆಂಕಿ ಅವಘಡ, ಏಳು ಲಕ್ಷ ರೂ ಮೌಲ್ಯದ ಮೆಕ್ಕೆಜೋಳ ನಾಶ
ಹಾವೇರಿ ; ಇಲ್ಲಿನ ನಾಗೇಂದ್ರನ ಮಟ್ಟಿಯಲ್ಲಿರುವ ಕಣಿಯ ಬಳಿ ಕಣದಲ್ಲಿ ಸಂಗ್ರಹಿಸಲಾಗಿದ್ದ ಅಂದಾಜು 17 ಟ್ಯಾಕ್ಟರ್ ಮೆಕ್ಕೆಜೋಳದ ತೆನೆಯಬಣವಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಂದಾಜು 7 ಲಕ್ಷ ರೂ ಮೌಲ್ಯದ ಮೆಕ್ಕೆಜೋಳ ಸುಟ್ಟು ಬಸ್ಮವಾಗಿರುವ ಘಟನೆ ಭಾನುವಾರ ನಡೆದಿದೆ.
ನಾಗೇಂದ್ರ ಮಟ್ಟಿಯಲ್ಲಿ ಭಾನುವಾರ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಜನತೆ ಭಾಗವಹಿಸಿದ್ದ ವೇಳೆ ಯಾರೋ ದುಷ್ಕರ್ಮಿಗಳು ಮೆಕ್ಕೆಜೋಳದ ಬಣವಿಗೆ ಬೆಂಕಿ ಹಚ್ಚಿದ ಕಾರಣ ಶಿವಬಸಪ್ಪ ಮುದ್ದಿ ಎನ್ನುವವರಿಗೆ ಸೇರಿದ್ದ ಮೆಕ್ಕೆಜೋಳದ ಬಣವಿ ಸುಟ್ಟು ಹೋಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಾಹನಗಳಲ್ಲಿ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದರು.ಆದರೆ ಅದಾಗಲೇ ಬೆಂಕಿಯ ಕೆನ್ನಾಲಿಗೆ ಮೆಕ್ಕೆಜೋಳದ ಬಣವಿಯನ್ನು ಆವರಿಸಿಕೊಂಡು ಮೆಕ್ಕೆಜೋಳದ ತೆನೆಗಳು ಸುಟ್ಟು ಹೋಗಿವೆ. ಸ್ಥಳೀಯರು ಸಹ ಬೆಂಕಿ ನಂದಿಸಲು ಶ್ರಮಿಸಿದರು ಬೆಂಕಿ ಹತೋಟಿಗೆ ಬರದೆ ಮೆಕ್ಕೆಜೋಳದ ಬಣವಿ ಸುಟ್ಟಿದೆ.
ಶಿವಬಸಪ್ಪ ಮುದ್ದಿ ಅವರು ತಮ್ಮ೧೭ ಎಕರೆ ನೀರಾವರಿ ಹಾಗೂ ಮಳೆಯಾಶ್ರಿತ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು.ಇನ್ನೇನು ಮೆಕ್ಕೆಜೋಳ ದ ಒಕ್ಕಲುಮಾಡಬೇಕೆಂದುತಯಾರಿದ್ದರು. ಆದರೆ ಅಗ್ನಿ ಅವಘಡದಿಂದ ೭ಲಕ್ಷರೂ ಮೌಲ್ಯ ದ ಬೆಳೆಹಾಳಾಗಿದೆ.
ಪರಿಹಾರ ಕ್ಕೆ ಆಗ್ರಹ :೧೭ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಟ್ಟಿದ್ದು, ಆಕಸ್ಮಿಕವಾಗಿ ಬೆಂಕಿ ತಗಲಿ ಅಂದಾಜು 7 ಲಕ್ಷ ರೂ ಮೌಲ್ಯದ ಮೆಕ್ಕೆಜೋಳ ಹಾಳಾಗಿದ್ದು, ಜಿಲ್ಲಾಡಳಿತ ಸೂಕ್ತ ಪರಿಹಾರವನ್ನು ನೀಡಬೇಕೆಂದು ನಗರಸಭೆಯ ಮಾಜಿ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.