ಹಾವೇರಿಯಲ್ಲಿ ಜ.೨೩ರಂದು
ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ
ಹಾವೇರಿ: ಜನವರಿ 28 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯ ಶೋಷಿತರ ಜಾಗೃತಿ ಸಮಾವೇಶ ದ ಕುರಿತು ಚರ್ಚಿಸಲು
ಹಾವೇರಿ ಜಿಲ್ಲಾಮಟ್ಟದಲ್ಲಿ ಪೂರ್ವಭಾವಿ ಸಭೆಯನ್ನು ಜ.೨೩ರಂದು ಮಂಗಳವಾರ ಬೆಳಿಗ್ಗೆ ೧೧ಕ್ಕೆ ಹಾವೇರಿಯ ಮುಸ್ಲಿಪಲ್ ಮೈದಾನದ ಹತ್ತಿರ ಇರುವ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಕರೆಯಲಾಗಿದೆ.
ಪೂರ್ವಭಾವಿ ಸಭೆಗೆ ರಾಜ್ಯ ನಾಯಕರುಗಳಾದ ಕೆ. ಎಂ. ರಾಮಚಂದ್ರಪ್ಪ, ಅನಂತನಾಯಕ್
ಎಣ್ಣೆಗೆರೆ ವೆಂಕಟರಾಮಯ್ಯ, ಹೊದಿಗೇರೆ ರಮೇಶ್ ಆಗಮಿಸಿ ಮಾರ್ಗದಶನ ನೀಡುವರು.
ಈ ಸಭೆಗೆ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘಟನೆಗಳ ಮುಖಂಡರು ತಪ್ಪದೇ ಭಾಗವಹಿಸಲು ಸಂಘಟಕರಾದ ರವಿ ಹಾದಿಮನಿ, ನಾಗರಾಜ ಬಡಮ್ಮನವರ, ರಮೇಶ್ ಆನವಟ್ಟಿ ತಿಳಿಸಿದ್ದಾರೆ.