


ಹಾವೇರಿಯಲ್ಲಿ ಮಹಾತ್ಮಾಗಾಂಧೀಜಿ ಪು
ಹಾವೇರಿ: ಹಾವೇರಿಯ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ಯವರ ವೃತ್ತದಲ್ಲಿನ ಮಹಾತ್ಮಾಗಾಂಧೀಜಿ ಪು
ದೇಶವನ್ನು ಸ್ವಾತಂತ್ರ್ಯ ಗೊಳಿಸಲು ಮಹಾತ್ಮಗಾಂಧಿಯವರು ಜನರಲ್ಲಿ ಜಾಗೃತಿ ಮೂಡಿಸಲು ನಡೆದಾಡಿದ ರಸ್ತೆ ಯನ್ನು ಮಹಾತ್ಮ ಗಾಂಧಿಯವರು ಹೆಸರು ಚಿರಸ್ಥಾಯಿಯಾಗಿ ಇರಲು ಮಹಾತ್ಮಾ ಗಾಂಧಿ ರಸ್ತೆ ಎಂದು ನಮ್ಮ ಹಿರಿಯರು ನಾಮಕರಣ ಮಾಡಿದ್ದು, ಹಾವೇರಿ ನಗರದ ಈ ಗಾಂಧಿ ರಸ್ತೆ ಯ ಹೃದಯ ಭಾಗ ಹಾಗೂ ನಗರಸಭೆ ಬಳಿಯ ಸರ್ಕಲ್ ನಲ್ಲಿ ಮಹಾತ್ಮ ಗಾಂಧಿ ಸರ್ಕಲ್ ಎಂದು ನಾಮಕರಣ ಮಾಡುವುದರ ಜೊತೆಗೆ ಮಹಾತ್ಮ ಗಾಂಧೀಜಿಯವರ ಪುತ್ತಳಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಮಹಾತ್ಮಾಗಾಂಧೀಜಿ ಪುತ್ಥಳಿಯನ್ನು ಕಿಡಗೇಡಿ ದುಷ್ಕರ್ಮಿಗಳು ಒಡೆದುಹಾಕುವ ಮೂಲಕ ಬಿಸಾಡಿ ವಿರೂಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.
ಹಾವೇರಿಯಲ್ಲಿ ೧೯೪೭ರಲ್ಲಿ ಮಹಾತ್ಮಗಾಂಧೀಜಿಯವರ ಪುತ್ಥಳಿಯನ್ನು ಸ್ಥಾಪಿಸಲಾಗಿದ್ದು, ಕಿಡಗೇಡಿಗಳು ಗಾಂಧೀಜಿಯವರ ಪ್ರತಿಮೆಯನ್ನು ಕಿತ್ತೆಸೆಯುವ ಮೂಲಕ ಪುತ್ಥಳಿಯನ್ನು ವಿರೂಪಗೊಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಗಾಂಧಿ ಯವರ ಪುತ್ಥಳಿಯನ್ನು ಕಿತ್ತು ಬಿಸಾಕಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ನಗರಸಭೆಯವರು ಬಿಸಾಕಲಾಗಿದ್ದ ಗಾಂಧಿಯವರ ಪ್ರತಿಮೆಯನ್ನು ನಗರಸಭೆಗೆ ತೆಗೆದುಕೊಂಡು ಹೋಗಿದ್ದಾರೆ.
ಪ್ರತಿಮೆಯನ್ನು ವಿರೂಪಗೊಳಿಸಿರುವುದಕ್ಕೆ ಸಾರ್ವಜನಿಕರ ಬೇಸರ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾತ್ಮನಿಗೆ ಈ ಗತಿ ಬರಬಾರದಿತ್ತು, ಈ ಕೃತ್ಯ ಬೇಸರದ ಸಂಗತಿಯಾಗಿದೆ. ಇದು ಕೇವಲ ಮಹಾತ್ಮಗಾಂಧೀಜಿಯವರಿಗೆ ಮಾಡಿದ ಅವಮಾನವಲ್ಲ, ನಮಗೆ ನಾವೇ ಮಾಡಿಕೊಂಡ ಅವಮಾನವಾಗಿದೆ. ಮುಂದೆ ಈ ರೀತಿಯ ಕೃತ್ಯಗಳ ನಡೆಯದಂತೆ ನಗರಸಭೆಯವರು ಗಾಂಧಿ ಪ್ರತಿಮೆಯ ಬಳಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
sub-editor
kourava daily,
haveri

