ಹಾವೇರಿಯಲ್ಲಿ ಹೆಚ್ಚುತ್ತಿರುವ ಕಳ್ಳತನ, ಕ್ರಮಕ್ಕೆ ಜಯ ಕರ್ನಾಟಕ ಸಂಘಟನೆ ಮನವಿ
ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಗಲುಹೊತ್ತಿನಲ್ಲಿ ಹಾಗೂ ರಾತ್ರಿಯ ವೇಳೆ ಕಳ್ಳರು ಮನೆಗಳಿಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಮನೆಗಳಲ್ಲಿ ಚಿನ್ನಾಭರಣಗಳನ್ನು ಕಳುವುಮಾಡುತ್ತಿದ್ದಾರೆ. ಈಬಗ್ಗೆ ಕಠಿಣ ಕ್ರಮ ಕೈಗೊಂಡು ಕಳ್ಳರನ್ನು ಪತ್ತೆ ಹಚ್ಚುವ ಜೊತೆಗೆ ಅಗತ್ಯ ಇರುವ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ನಗರದಲ್ಲಿ ಬಂದ್ ಆಗಿರುವ ಸಿಸಿ ಕ್ಯಾಮರಾಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಗುರುವಾರ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗಣಾರೆ ಅವರಿಗೆ ಮನವಿ ಅರ್ಪಿಸಿದರು.
ಸೂಕ್ತ ಕ್ರಮ ಜರುಗಿಸುವ ಕುರಿತು.
ನಗರದಲ್ಲಿ ಕಳ್ಳರ ಹಾವಳಿ ವಿಪರಿತವಾಗಿ ಹೆಚ್ಚಾಗಿದ್ದು, ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ವಾಗುತ್ತಿದ್ದು, ಇದರಿಂದ ಸಾರ್ವಜನಿಕರು ಭಯದಿಂದ ಬದುಕುವ ವಾತಾವರಣ ಸೃಷ್ಠಿಯಾಗಿದೆ. ನಗರದಲ್ಲಿ ಜಿ. ಹೆಚ್, ಕಾಲೇಜ್ ಹತ್ತಿರ ‘ಹಿಟ್ & ರನ್’ ಅವಘಾತ ಹಲವು ಬಾರಿ ಸಂಭವಿಸಿವೆ, ಆದರೆ ಇದುವರೆಗೂ ಅವಘಾತ ಮಾಡಿದ ವಾಹನಗಳನ್ನು ಪತ್ತೆ ಹಚ್ಚಿರುವುದಿಲ್ಲ.
ನಗರದಲ್ಲ. ಹಲವಾರು ಕಡೆಗಳಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಜರುಗಲು ಕಾರಣವಾಗಿವೆ.
ಹಾವೇರಿ ನಗರಕ್ಕೆ ಪ್ರವೇಶಿಸುವ ಮತ್ತು ನಗರದಿಂದ ಹೊರಹೋಗುವವರ ಬಗ್ಗೆ ನಿಗಾವಹಿಸುವುದು ಅವಶ್ಯವಿದ್ದು, ಪ್ರಮುಖ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸುವುದು ಅತೀ ಅವಶ್ಯವಿದ್ದು, ಹಾಳಾಗಿರುವ ಸಿಸಿ ಕ್ಯಾಮರಾಗಳನ್ನು ದುರಸ್ತಿಗೆ ಅಗತ್ಯ ಕ್ರಮಕೈಗೊಳ್ಳಬೇಕು. ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಕೂಡಲೇ ಅಗತ್ಯ ಇರುವ ಸಿಬ್ಬಂದಿಗಳನ್ನು ನೇಮಕ ಮಾಡಬೇಕು.
ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ. ಬಿಲ್ಡಿಂಗ್ ಮಾಲಕರು ಕಟ್ಟಡ ಕಟ್ಟುವ ವೇಳೆ ಪಾರ್ಕಿಂಗ್ ಪರ್ಮಿಷನ್ ಪಡೆದುಕೊಂಡು, ಆ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡದೇ ಅಲ್ಲಿಯೂ ಸಹ ಕಟ್ಟಡಗಳನ್ನು ಕಟ್ಟಿ ಬಾಡಿಗೆ ಕೊಟ್ಟರುವ ಕಾರಣ ಬರ್ಕಿಂಗ್ ಸಮಸ್ಯೆ ಉದ್ದವವಾಗಿದೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು, ಇದರ ದಂಡವನ್ನು ಸಾರ್ವಜನಿಕರು ಕಟ್ಟುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಲು ನಗರಸಭೆ ಆಯುಕ್ತರಿಗೆ ಸೂಚಿಸಬೇಕು. ಹಾವೇರಿ ನಗರಕ್ಕೆ ಸೂಕ್ತ ಭದ್ರತೆ ಒದಗಿಸಿ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಜಯಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಆನವಟ್ಟಿ, ಜಿಲ್ಲಾಧ್ಯಕ್ಷ ಸುಭಾಸ ಬೆಂಗಳೂರ, ಉಪಾಧ್ಯಕ್ಷ ಸತೀಶ್ ಮಡಿವಾಳರ್, ಸಚಿನ್ ಉಪ್ಪಾರ್, ದಿಲೀಪ್ ಹರವಿ, ಹಂಪಣ್ಣ ಹಡಪದ್, ಸುಭಾನಿ, ಅಮೀರ್, ಶ್ರೀಕಾಂತ್ ತಳವಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Date: