ಹಾವೇರಿಯ ಮೀನಿ ವಿಧಾನಸೌಧದಲ್ಲಿ ಎಲ್ಲಂದರಲ್ಲಿ ಬೈಕ್ ನಿಲುಗಡೆಮಾಡಿರಿ ಜೋಕೆ….
ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾಗಿರುವ ಹಾವೇರಿನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿರುವ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಗಳಿದ್ದು, ಇಲ್ಲಿಗೆ ನಿತ್ಯ ಕೆಲಸ-ಕಾರ್ಯಗಳಿಗೆ ಆಗಮಿಸುವ ಸಾರ್ವಜನಿಕರು ತಮ್ಮ ದ್ವಿಚಕ್ರವಾಹನಗಳನ್ನು ಎಲ್ಲಂದರಲ್ಲಿ ಬೇಕಾಬಿಟ್ಟಿಯಾಗಿ ನಿಲುಗಡೆಮಾಡಿ ತಹಶೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳ ವಾಹನಗಳು ಕಚೇರಿಗೆ ಬರದ ಹಾಗೆ ಮಾಡಿದ್ದು, ಸೋಮವಾರ ಬೇಕಾ ಬಿಟ್ಟಿಯಾಗಿ ವಾಹನ ನೀಲುಗಡೆ ಮಾಡಿದ ವಾಹನಸವಾರರಿಗೆ ಸ್ಥಳೀಯ ಸಂಚಾರ ಪೊಲೀಸ್‌ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮಿನಿ ವಿಧಾನಸೌಧದಲ್ಲಿ ವಾಹನ ನಿಲುಗಡೆಗೆ ವಾಹನ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳವಿದ್ದು, ಆದರೆ ಆ ಸ್ಥಳದಲ್ಲಿ ವಾಹನ ಸವಾರರು ವಾಹನ ನಿಲುಗಡೆ ಮಾಡದೇ ಸಾರ್ವಜನಿಕರಿಗೆ, ಅಧಿಕಾರಿಗಳಿಗೆ, ಕಚೇರಿಯ ಸಿಬ್ಬಂದಿಗಳಗೆ ನಡೆದುಕೊಂಡು ಬರಲು ಸಹ ಆಗದಂತೆ ಮಿನಿ ವಿಧಾನಸೌಧದ ಮುಂಭಾಗದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಾರೆ. ಈ ರೀತಿಯ ಬೇಕಾಬಿಟ್ಟಿ ವಾಹನಗಳ ನಿಲುಗಡೆಯಿಂದ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ತಮ್ಮ ಸರಕಾರಿ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ನಡೆದುಕೊಂಡು ತಮ್ಮ ಕಚೇರಿಗಳಿಗೆ ಬರುತ್ತಾರೆ. ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ವಾಹನಗಳ ಬೇಕಾಬಿಟ್ಟಿ ನಿಲುಗಡೆಯ ಕಿರಿ ಕಿರಿ ತಪ್ಪಿಸಲು ಸಂಚಾರಿ ಪೊಲೀಸರು ನೋಟಿಸವ ನೀಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.