ಹಾವೇರಿ ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯ ಧನದಲ್ಲಿ ಲೋಪ; ಸಮಗ್ರ ತನಿಖೆಗೆ ಆಗ್ರಹ
ಹಾವೇರಿ: ಇಲ್ಲಿನ ಕನ್ನೆ ಮತ್ತು ಸಂಸ್ಕ್ರತಿ ಇಲಾಖೆಯಿಂದ ಕಳೆದ ೨೦೧೬ ರಿಂದ ೨೦೨೩ ವರೆಗೆ ನೀಡಲಾದ ಸಹಾಯ ಧನ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬಹಳಷ್ಟು ಲೋಪ -ದೋಷಗಳಾಗಿದ್ದು, ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮತ್ತಿತರರು ಮಂಗಳವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ.
ಸಂಸ್ಕ್ರತಿ ಇಲಾಖೆಯ ಅಧಿಕಾರಿಗಳು ಮಧ್ಯವರ್ತಿಗಳನ್ನು ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಸಹಾಯ ಧನದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ, ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಕೆಲವರು ಅಧಿಕಾರಿಗಳನ್ನು ಹೆಸರಿಸಿ ಸಮರ್ಪಕ ಕಾರ್ಯಕ್ರಮ ನಡೆಸದೇ ಬಿಲ್, ಪೋಟೋ ಬಿಲ್ ಗಳನ್ನು ಸಲ್ಲಿಸಿ ಅಧಿಕಾರಿಗಳಿಗೆ ಹಣ ಕೊಟ್ಟು ಸಹಾಯ ಧನವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ. ಅಂತವರ ಬಿಲ್‌ಗಳನ್ನು ತಡೆಹಿಡಿದು ಸಮಗ್ರ ಪರೀಶಿಲನೆ ನಡಸಿ ತಪಿತಸ್ಥರ ಮೇಲೆ ಕಾನೂನು ಕ್ರಮ ಜರಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಡಿಯಲ್ಲಿ ನಡೆಸಲಾಗುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೂಲ ಕಲಾವಿದರಿಗೆ ಅವಕಾಶ ನೀಡದೇ ಯಾರು ಹಣ ಕೊಡಲು ಒಪ್ಪುತ್ತಾರೋ ಅವರಿಗೆ ಪದೇ, ಪದೆ ಸಹಾಯಧನ ನೀಡಿಕೊಂಡು ಬರಲಾಗಿದೆ. ಇದರಿಂದ ಸಾಕಷ್ಟು ವೃತ್ತಿ ಕಲಾವಿದರಿಗೆ ಅನ್ಯಾಯವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಇದೇ ರೀತಿ ನಡೆದಿದೆ. ನಿರಂತರವಾಗಿ ಈ ಅವ್ಯವಹಾರ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.
ಅರ್ಹ ಕಲಾವಿದರನ್ನು ಕಡೆಗಣಿಸಿ ಹಣ ಕೊಟ್ಟರಿಗೆ ಕಾರ್ಯಕ್ರಮ ಹಂಚಿ ಬಿಲ್ ನೀಡಿದ್ದು, ಇನ್ನು ಕೆಲ ಕಾರ್ಯಕ್ರಮಗಳು ಪೋಟೋಗೆ, ಬಿಲ್‌ಗಳಿಗೆ ಮಾತ್ರ ಸೀಮಿವಾಗಿವೆ. ನಿಯಮಾನುಸಾರ ಕಾರ್ಯಕ್ರಮ ನಡೆಸದೇ ಹಣ ಪಡೆದು ಬಿಲ್ ನೀಡಲಾಗಿದೆ. ಈಗಲೂ ಸಹಿತ ಸಾಕಷ್ಟು ಬಿಲ್‌ಗಳು ಪೋಟೋ, ಬಿಲ್ ಗಳಿಗೆ ಸೀಮಿತ ವಾಗಿವೆ. ಹಾಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಲ್ಲಿಸಲಾಗಿರುವ ಹಾಗೂ ಬಾಕಿಬಿಲ್‌ಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವವರೆಗೂ ಯಾವುದೇ ಬಿಲ್ಲ ನೀಡಬಾರದು, ಪರಿಶೀಲನೆಯಲ್ಲಿ ಸರಿಯಾಗಿ ಇದ್ದವರಿಗೆ ಮಾತ್ರ ಬಿಲ್ ನೀಡಬೇಕು. ಈ ಹಿಂದೆ ನೀಡಲಾದ ಎಲ್ಲ ಬಿಲ್ಲ ಗಳ ಬಗ್ಗೆ ಅಡಿಟ್ ನಡೆಸಬೇಕು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮಾಳಗಿ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ಮಾರುತಿ ಕಿಳ್ಳಿಕ್ಯಾತರ, ಅಲೆಮಾರಿ ಸಮಾಜದ ಅಧ್ಯಕ್ಷ ವಿಭೂತಿ ಶೆಟ್ಟಿ, ನಾಗಪ್ಪ ಮರೋಳ, ಭೀಮಪ್ಪ ಬಣಕಾರ, ರಾಮು ಪುಸಲ, ಮಾಲತೇಶ ಭಜಂತ್ರಿ, ಪುಟ್ಟಪ್ಪ ಬಾದಗಿ, ಜಯಶೀಲ ಭಜಂತ್ರಿ ಸೇರಿದಂತೆ ಅನೇಕರು ಹಾಜರಿದ್ದರು.