ಹಾವೇರಿ ಲೋಕಸಭೆ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುವೆ: ಕಲ್ಲಂಗಡಿ ಘೋಷಣೆ
ಹಾವೇರಿ: ಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹಾವೇರಿ ತಾಲೂಕಿನ ಸಾಮಾಜಿಕ ಕಾರ್ಯಕರ್ತ, ತಾಲೂಕಿನ ಕನವಳ್ಳಿಗ್ರಾಮದ ಅಲ್ಪಸಂಖ್ಯಾತರ ಮುಖಂಡ ಮಹ್ಮದಹನೀಫಸಾಬ ಸಣ್ಣಪೀರಸಾಬ ಕಲ್ಲಂಗಡಿ ಘೋಷಿಸಿದ್ದಾರೆ.
ಹಲವಾರು ವರ್ಷಗಳಿಂದ ಸಾಮಾಜಿಕ ರಂಗದಲ್ಲಿದ್ದುಕೊಂಡು ಸಾರ್ವಜನಿಕ ಸೇವೆ ಸಲ್ಲಿಸುತ್ತಾ ಬಂದಿರುವೆ. ೧೯೮೦ ರಿಂದ ೨೦೨೩ರವರೆಗೂ ಕನವಳ್ಳಿ ಅಂಜುಮನ್ ಅಧ್ಯಕ್ಷನಾಗಿ ಹಾಗೂ ಕನವಳ್ಳಿಯ ಸರ್ಕಾರಿ ಶಾಲೆಯ ಅಧ್ಯಕ್ಷನಾಗಿ ಹಾಗೂ ಹಾವೇರಿ ಜಿಲ್ಲೆಯ ಮುಸ್ಲಿಂ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಅನೇಕಬಾರಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದರು ಸಹ ನನಗೆ ಮಾನ್ಯತೆ ಸಿಕ್ಕಿರುವುದಿಲ್ಲ. ಈ ಹಿಂದೆ ಧಾರವಾಡ ದಕ್ಷಿಣ ಕ್ಷೇತ್ರವಾಗಿದ್ದ ಈಗಿನ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಅ;ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ ಅನೇಕರು ಲೋಕಸಭೆಗೆ ಆಯ್ಕೆಯಾಗಿದ್ದರು. ಈಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ಸಲ್ಪಸಖ್ಯಾತರಿಗೆ ಅವಕಾಶ ನೀಡದ ಕಾರಣಕ್ಕೆ ತಾವು ಹಾವೇರಿ ಲೋಕಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಹ್ಮದಹನೀಫಸಾಬ ಕಲ್ಲಂಗಡಿ ಘೋಷಣೆ ಮಾಡಿದ್ದಾರೆ.

Date: