ಹಾವೇರಿ: ವಿದ್ಯಾರ್ಥಿನಿ ಸಾವಿನ ಸತ್ಯ ಭೇದಿಸಿದ ಪೊಲೀಸರು, ಬ್ಲಾಕ್ ಮೇಲ್ ಮಾಡಿದ್ದ ಇಬ್ಬರ ಬಂಧನ
ಹಾವೇರಿ: ಜಿಲ್ಲೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಸವಣೂರ ತಾಲೂಕಿನ ನದಿನೀರಲಗಿ ಗ್ರಾಮದ ವಿದ್ಯಾರ್ಥಿನಿಯ ನಿಗೂಡ ಸಾವಿನ ಸತ್ಯವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿ ಆಕೆಯನ್ನು ಬ್ಲಾಕ್ ಮೇಲ್ ಮಾಡಿದ್ದ ಇಬ್ಬರನ್ನು ಗುರುವಾರ ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಹುಬ್ಬಳ್ಳಿಯ ಸರಕಾರಿ ಡಿಪ್ಲೋಮ ಕಾಲೇಜಿನಲ್ಲಿ ಪ್ರಥಮ ವರ್ಷ ಅಭ್ಯಾಸ ಮಾಡುತ್ತಿದ್ದ ಜಿಲ್ಲೆಯ ಸವಣೂರ ತಾಲೂಕಿನ ನದಿನೀರಲಗಿ ಗ್ರಾಮದ ವಿದ್ಯಾರ್ಥಿನಿಯ ಶವ ಹಾವೇರಿಜಿಲ್ಲೆಯ ಅರಳಿಹಳ್ಳಿ ವರದಾ ನದಿಯಲ್ಲಿ ನ.೭ರಂದು ಪತ್ತೆಯಾಗಿತ್ತು. ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ, ತಪ್ಪಿತಸ್ಥರನ್ನು ಬಂಧಿಸಿ ನ್ಯಾಯ ದೊರಕಿಸಿ ಕೊಡುವಂತೆ ಜಿಲ್ಲಾಪೊಲೀಸ್ ಇಲಾಖೆಯನ್ನು, ಜಿಲ್ಲಾಡಳಿತವನ್ನು ಜಿಲ್ಲಾ ಮಾದಿಗ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದ್ದವು.
ಈ ಪ್ರಕರಣದ ತನಿಖೆ ಕೈಗೊಂಡ ತನಿಖಾಧಿಕಾರಿಗಳು ಅನುಮಾನಸ್ಪದ ವ್ಯಕ್ತಿಗಳಾದ ಜಿ೧ ಬಾಗಲಕೋಟೆಯ ೨೩ ವರ್ಷದ ಶಿವಾನಂದ ವಿಠ್ಠಲ ಮಾದರ, ಹಾವೇರಿ ತಾಲೂಕಿನ ಕೆಸರಳ್ಳಿಗ್ರಾಮದ ೧೯ ವರ್ಷದ ಕೋಟೆಪ್ಪ ಫಕ್ಕಿರೇಶ ಹರಿಜನ ಇವರನ್ನು ವಿಚಾರಣೆ ಮಾಡಿದ್ದು, ವಿಚಾರಣೆಯ ಕಾಲಕ್ಕೆ ಶಿವಾನಂದ ಮಾದರ ಮೃತ ಬಾಲಕಿ ಅಪ್ರಾಪ್ತ ವಯಸ್ಸಿನ ಬಾಲಕಿ ಎಂದು ಗೊತ್ತಿದ್ದರು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಹಾಗೂ ಕೋಟೆಪ್ಪ ಹರಿಜನ ಮೃತಳಿಗೆ ಪ್ರೀತಿ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದು, ಇದರಿಂದ ಮೃತಳು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಕಂಡುಬಂದಿದೆ.
ಈ ಬಗ್ಗೆ ೨೨೫/೨೦೨೪ : ೬೪ (೨)(೨), ೧೦೮, ೩೦೮(೨), ೨.೨.೨. ಕಲಂ: ೬,೮,೧೨, ಪೋಕ್ಸೋ ಕಾಯ್ದೆ ಪ್ರರಕಣ ದಾಖಲಿಸಿಕೊಂಡು ಆರೋಪಿತರಾದ ಶಿವಾನಂದ ಮಾದರ, ಕೋಟೆಪ್ಪ ಹರಿಜನ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖಾಧಿಕಾರಿಗಳು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

Date: