ಹಾಬೇರಿ:ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ-ಕಾಂಗ್ರೆಸ್ ಸದಸ್ಯತ್ವಕ್ಕೆ ಪಟ್ಟಣಶೆಟ್ರು ರಾಜೀನಾಮೆ

Date:

ಹಾಬೇರಿ: ನಾಗೇಂದ್ರನಮಟ್ಟಿ (ನಗರ) ಈ ಭಾಗದ ಮೂಲಭೂತ ಸೌಕರ್ಯಗಳ ಮಂಜೂರಾತಿ ಹಾಗೂ ಪ್ರೌಢ ಶಾಲೆಯ ಮಂಜೂರಿಯ ಬಗ್ಗೆ ಶಾಸಕರು ಹಾಗೂ ಸಚಿವರಾಗಿರುವ ರುದ್ರಪ್ಪ ಲಮಾಣಿ ಅವು ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿ ಹಾವೇರಿ ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮನೆ ನೀಡಿರುವುದುಗಾಗಿ ಈಭಾಗದ ಮುಖಂಡರು ಹಾಗೂ ನಗರಸಭೆಯ ಮಾಜಿ ಸದಸ್ಯ ಮಲ್ಲೇಶಪ್ಪ ಬಸವಲಿಂಗಪ್ಪ ಪಟ್ಟಣಶೆಟ್ರು ತಿಳಿಸಿದ್ದಾರೆ.
ಈ ಬಗ್ಗೆ ರಾಜೀನಾಮೆ ಪತ್ರವನ್ನು ಸಚಿವರಿಗೆ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.ನಾಗೇಂದ್ರನಮಟ್ಟಿ ಪ್ರದೇಶದ ಅಭಿವೃದ್ಧಿಗೆ ಪ್ರೌಢ ಶಾಲೆಯ ಮಂಜೂರಿಯ ಆನೇಕ ಬಾರಿ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಆದರೂ ಏನು ಪ್ರಯೋಜನವಾಗಿರುವುದಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾಗೇಂದ್ರನಮಟ್ಟಿಯ ಮತದಾರರು ಮತ್ತು ನಾಗರೀಕರಿಗೆ ಪ್ರಮುಖ ಬೇಡಿಕೆಗಳನ್ನು ಚುನಾವಣಾ ಸಂದರ್ಭದಲ್ಲಿ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ, ಚುನಾವಣೆ ಕಳೆದು ಮೂರುವರೆ ವರ್ಷಗಳಾದರು ಯಾವುದೇ ಒಂದು ಬೇಡಿಕೆಗಳನ್ನು ಇಲ್ಲಿಯವರೆಗೆ ಈಡೆರಿಸಿರುವುದಿಲ್ಲ. ಸಚಿವರು ಕೆಲವೇ ಕೆಲವು ವ್ಯಕ್ತಿಗಳ ಮಾತನ್ನು ಕೇಳಿ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಭರವಸೆ ಕೊಟ್ಟು ಯಾವುದೇ ಕೆಲಸ ಮಾಡದೇ ಅಸಹಾಯಕರಾಗಿದ್ದಾರೆ.
ಪ್ರಸ್ತುತ ರುದ್ರಪ್ಪ ಲಮಾಣೀ ಅವರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಮಗೆ ಹರ್ಷದ ಸಂಭ್ರಮವಾಗಿದೆ. ನಾಗರ ಪಂಚಮಿಯ ಅಂಗವಾಗಿ ಪ್ರತಿ ವರ್ಷ ಬಸವ ಬಳಗದವರು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಲನ್ನು ವಿತರಿಸಲು ಆಗಮಿಸಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ವಿಷಯ ಚರ್ಚೆಗೆ ಬಂದಿರುತ್ತದೆ. ನಂತರ ನಾವು ಬಸವ ಬಳಗದ ವತಿಯಿಂದ ಪ್ರೌಢ ಶಾಲೆ ಮಂಜೂರಾತಿಗೆ ಸಚಿವರಿಗೆ ಮನವಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು. ನಂತರ ಬಸವ ಬಳಗದಿಂದ ದಿನಾಂಕ:೨೨-೦೮-೨೦೨೬ರಂದು ಸಚಿವರ ನಿವಾಸದಲ್ಲಿ ಮನವಿ ಸಲ್ಲಿಸಲಾಯಿತು. ಆದರೆ, ಮನವಿಗೆ ಸಚಿವರಾದ ರುದ್ರಪ್ಪ ಲಮಾಣಿಯವರು ಯಾವುದೇ ತರಹದ ಸ್ಪಂದನೆ ನೀಡಲಿಲ್ಲಾ. ಈ ಸನ್ನಿವೇಶವನ್ನು ಬಸವ ಬಳಗದ ಸಮಿತಿಯವರು ಗಮನಿಸಿ ನಿರಾಶರಾದರು. ಜೊತೆಗೆ ಬಸವ ಬಳಗದವರು ಕೊಟ್ಟ ಮಾತಿನಂತೆ ನಡೆದು ಕೊಳ್ಳಲಿಲ್ಲವೆಂದು ಸಚಿವರ ಸಮ್ಮುಖದಲ್ಲಿ ಹೇಳಿ ಹೊರಟು ಹೋದರು. ಇಷ್ಟೆಲ್ಲಾ ಘಟನೆಯಾದ ನಂತರ ನಾನು ಮನನೊಂದು ನಗರ ಆಶ್ರಯ ಸಮಿತಿ ಸದಸ್ಯತ್ವಕ್ಕೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆಯನ್ನು ಸಲ್ಲಿಸಲು ಮುಂದಾಗಿರುತ್ತೇನೆಂದು ಮಲ್ಲೇಶಪ್ಪ ಪಟ್ಟಣಶೆಟ್ರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ

ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ರಿಗೆ ಸನ್ಮಾನ ಹಾವೇರಿ:ಕರ್ನಾಟಕ ವಿಧಾನಸಭೆಯ...

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ

ಹಾವೇರಿ: ಪ್ರೋತ್ಸಾಹ ಧನ ಬಿಡುಗಡೆಗೆ ಲಂಚ-ಸಮಾಲೋಚಕ ಲೋಕಾಯುಕ್ತ ಬಲೆಗೆ ಹಾವೇರಿ: ಪ್ರೋತ್ಸಾಹ ಧನ...

ಪತ್ರಿಕಾ ವಾಹನದಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಸಿಟಿ ರೌಂಡ್

ಪತ್ರಿಕಾ ವಾಹನದಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಸಿಟಿ ರೌಂಡ್ ಹಾವೇರಿ: ವಾರ್ತಾ ಮತ್ತು...

ಹಾವೇರಿ  :ರೂ.೧೫೦ ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ – ಸಚಿವ ರುದ್ರಪ್ಪ ಲಮಾಣಿ

ಹಾವೇರಿ  :ರೂ.೧೫೦ ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ -...