ಪ್ರಶಸ್ತಿ ಪುರಸ್ಕೃತ ನಾಂಗೇದ್ರ ಹಾನಗಲ್ಲಗೆ ಎಡಿಸಿ ಎಸ್ ರವಿ ಅವರಿಂದ ವಿಶೇಷ ಸನ್ಮಾನ

Date:

ಹಾವೇರಿ: ಜಿಲ್ಲಾ ಸೈಬರ್ ಕೇಂದ್ರ ವಿಭಾದಲ್ಲಿ ಅಡ್ಮಿನಿ ಆಗಿರುವ ಪೊಲೀಸ್ ಇಲಾಖೆಯ ನಾಗೇಂದ್ರ ಹಾನಗಲ್ಲ ಅವರಿಗೆ ಗೃಹ ಇಲಾಖೆಯ ಎಡಿಜಿಪಿ ಹಾಗೂ ಪ್ರಿನ್ಸಿಪಲ್ ಸೆಕರೆಟರಿಯಾದ ಎಸ್ ರವಿ ಅವರು ಶಿರಸಿಯಲ್ಲಿ ನಡೆದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ನಾಂಗ್ರೇದ್ರ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.
ನಾಂಗೇದ್ರ ಹಾನಗಲ್ಲ ಅವರು ಪೊಲೀಸ್ ಇಲಾಖೆಯಲ್ಲಿ ಕಳೆದ ೧೮ ವರ್ಷ ಗಳಿಂದ ಕ್ರಿಯಾಶೀಲವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಗೇಂದ್ರ ಅವರು ಕಾರವಾರಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ೨೦೦೫ ರಲ್ಲಿ ಕಾನಸ್ಟೇಬಲ್ ಆಗಿ ವೃತ್ತಿ ಆರಂಭಿಸಿ ೨೦೦೮ ರಂದು ಹಾವೇರಿಗೆ ಆಗಮಿಸಿ ವೃತ್ತಿನಿರತರಾಗಿ ವಿವಿಧ ವಿಭಾಗದಲ್ಲಿ ವಿಶೇಷ ತಂಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದು, ಇವರಿಗೆ ೨೦೧೧ ರಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಪೊಲೀಸ್ ಪ್ರಶಸ್ತಿಗೆ ಭಾಜರಾಗಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡರಿಂದ ಪ್ರಶಸ್ತಿ ಪಡೆದುಕೊಂಡವರು. ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಬುದ್ದಿವಂತಿಕೆಯಿಂದ ವಿವಿಧ ತಂತ್ರಜ್ಞಾನ, ಇಂಗ್ಲಿಷ್ ಜ್ಞಾನವನ್ನು ಕರಗತ ಮಾಡಿಕೊಂಡಿದ್ದು, ಬಿ.ಇ ಇಲೆಕ್ಟ್ರಾನಿಕ್ ಪದವಿ ಪಡೆದಿದ್ದಾರೆ.
ಇತ್ತೀಚೆಗೆ ಶಿರಸಿಯಲ್ಲಿ ನಡೆದ ಪೊಲೀಸ್ ಇಲಾಖೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಎಡಿಜಿಪಿ ಎಸ್ ರವಿ ಅವರು ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಗೃಹ ಇಲಾಖೆ ಪ್ರಿನ್ಸಿಪಲ್ ಸೆಕರೆಟರಿ ಹಾಗೂ ಎಡಿಜಿಪಿ ಎಸ್.ರವಿ,ಕಾರವಾರ ಎಸ್.ಪಿ ಎನ್ ವಿಷ್ಣುವರ್ಧನ್, ಸೇರಿದಂತೆ ಪೊಲೀಸ್ ಇಲಾಖೆಯ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...