“ಕಾಂಗ್ರೆಸ್‌ದುರಾಡಳಿತದಿಂದ ರಾಜ್ಯದಲ್ಲಿ ತಾಲಿಬಾನ್ ಸಂಸ್ಕ್ರತಿ ತಲೆಎತ್ತುತ್ತಿದೆ”
ಹಾನಗಲ್ಲ ಅತ್ಯಾಚಾರ ಪ್ರಕರಣ ಎಸ್‌ಐಟಿಗೆ ವಹಿಸಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ
ಹಾವೇರಿ: ಹಾನಗಲ್‌ನಲ್ಲಿ ನಡೆದ ಸಾಮೂಹಿಕ ಅತ್ಯಚಾರದಂತಹ ಘಟನೆಗಳು ಮೇಲಿಂದ ಮೇಲೆ ರಾಜ್ಯದಲ್ಲಿ ಹಾಗೂ ಹಾವೇರಿಜಿಲ್ಲೆಯಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ದುರಾಡಳಿತದಿಂದ ರಾಜ್ಯದಲ್ಲಿ ತಾಲಿಬಾನ್ ಸಂಸ್ಕ್ರತಿ ತಲೆಎತ್ತುತ್ತಿದೆ. ಹಾನಗಲ್ಲ ನಡೆದ ಪ್ರಕರಣವನ್ನು ಸ್ಥಳೀಯ ಪೊಲೀಸರು ಮುಚ್ಚಿಹಾಕುವ ಪ್ರಯತ್ನಮಾಡುತ್ತಿದ್ದಾರೆ. ಸರ್ಕಾರಕ್ಕೆ ಅಲ್ಪಸಂಖ್ಯಾತರ ಬಗ್ಗೆ ನಿಜವಾದ ಕಾಳಜಿ ಇದ್ದರೇ ಹಾನಗಲ್ಲ ಘಟನೆಯನ್ನು ಎಸ್‌ಐಟಿಗೆ ವಹಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಜ.೨೦ರಂದು ಶನಿವಾರ ಭಾರತೀಯ ಜನತಾ ಪಕ್ಷದಿಂದ ಕರೆ ನೀಡಲಾಗಿದ್ದ ಹಾನಗಲ್ ಸಾಮೂಹಿಕ ಆತ್ಯಾಚಾರ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಗೆ ವಹಿಸುವಂತೆ ಆಗ್ರಹಿಸಿ ಕರೆ ನೀಡಲಾಗಿದ್ದ ಎಸ್‌ಪಿ ಕಚೇರಿ ಮುತ್ತಿಗೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅತ್ಯಾಚಾರಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡಯುತ್ತಿದೆ ಎನ್ನುತ್ತಾರೆ. ಹಾಗಾದರೆ ಸಿಪಿಐ-ಪೊಲೀಸರನ್ನು ಅಮಾನತು ಮಾಡಿದ್ದು ಏಕೆ..? ಎಂದು ಅವರು ಪ್ರಶ್ನಿಸಿದರು. ಅಪರಾಧ ಕೃತ್ಯ ಎಸಗಿದವರಲ್ಲಿ ವೋಟ್ ಬ್ಯಾಂಕ್ ಇದೆ. ಈ ಕಾರಣದಿಂದಲೇ ಕರ್ನಾಟಕ ರಾಜ್ಯ ಸರ್ಕಾರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರದವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ಆಪಾದಿಸಿದರು.
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿಸುವುದು ಇವರಿಂದ ಆಗಿಲ್ಲ. ಇಂತಹ ಘಟನೆಯಾದಾಗ ಸರ್ಕಾರವೇ ಸಂತ್ರಸ್ತರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಆಡಳಿತ ವ್ಯವಸ್ಥೆ ರೇಪಿಸ್ಟ್ ಜತೆ ನಿಂತಿದೆ, ಹಲವರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸಗಿರಿ ಮಾಡುತ್ತಿದ್ದಾರೆ. ಈ ರೀತಿಯಾಗಿ ಒಂದು ಗ್ಯಾಂಗ್ ನಿರಂತರವಾಗಿ ಮಾಡುತ್ತಿದೆ. ರಾಜಕೀಯ ಒತ್ತಡ ವಿದ್ದು, ಪೊಲೀಸರು ಪಕ್ಷಪಾತ ಮಾಡಿ, ಕೇಸ್ ಮುಚ್ಚುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಪೋಕ್ಸೋ ಕಾಯ್ದೆಯಲ್ಲಿ ರೇಪ್ ಎಂದು ದೂರು ಕೊಟ್ಟರೆ ಕೂಡಲೇ ಎಫ್‌ಐಆರ್ ಮಾಡಿ ತನಿಖೆ ಮಾಡಬೇಕು. ಆದರೆ ಅದನ್ನು ಪೊಲೀಸರು ಮಾಡಿಲ್ಲ. ಪ್ರಕರಣ ನಡೆದು ಐದು ದಿನಕ್ಕೆ ದಾಖಲೆ ಮಾಡಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಲ್ಲ. ಸುಳ್ಳು ವರದಿ ಸೃಷ್ಟಿಸಿದ್ದಾರೆ. ಇದೆಲ್ಲ ನೋಡಿದರೆ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಹೆಣ್ಣು ಮಗಳಿಗೆ ೫೦ ಲಕ್ಷ ಪರಿಹಾರ ಕೊಡುವುದಾಗಿ ಹೇಳಿದ್ದರು. ಮೆಡಿಕೋ ಲೀಗಲ್ ಕೇಸ್‌ನಲ್ಲಿ ಸರ್ಕಾರ ಹೆಣ್ಣು ಮಗಳ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಈ ಬಗ್ಗೆ ಸರ್ಕಾರ ನಿರ್ಲಕ್ಷೆ ವಹಿಸಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತ್ರಸ್ತೆಯ ಚಿಕಿತ್ಸೆಯ ಬಗ್ಗೆ ಶಾಸಕರಿಗೆ ಹೇಳಿದ್ದೇನೆ ಎಂದು ತಿಳಿಸುತ್ತಾರೆ. ಸರ್ಕಾರ, ಆರೋಗ್ಯ ಇಲಾಖೆ ಸತ್ತಿದೆಯಾ?, ಅವರ ಮುಖಾಂತರ ಕೂಡ ಮುಚ್ಚಿ ಹಾಕುವ ಕೆಲಸ ನಡೆಯುತ್ತಿವೆ. ನಿರ್ಭಿತಿಯಾಗಿ ಕ್ರಿಮಿನಲ್‌ಗಳು ರಾಜ್ಯದ ತುಂಬಾ ಓಡಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರಮಾತನಾಡಿದರು. ಮಾಜಿ ಬಿ.ಸಿ.ಪಾಟೀಲ, ಬೋಜರಾಜ ಕರೂದಿ, ಮಂಜುನಾಥ ಮಡಿವಾಳರ, ಜಗದೀಶ ಕನವಳ್ಳಿ, ಸೌಭಾಗ್ಯಮ್ಮ ಹಿರೇಮಠ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಫೆ.೧೨ರಂದು ಸದನದಲ್ಲಿ ಹೋರಾಟ; ಆರ್.ಅಶೋಕ
ಹಾವೇರಿ; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಗುಂಡಾರಾಜ್ಯ ತಲೆ ಎತ್ತಿದೆ, ಆಕ್ರಮ ಚಟುವಟಿಕೆಗಳು ಜೋರಾಗಿವೆ. ಅಲ್ಪಸಂಖ್ಯಾತರ ರಕ್ಷಣೆ ನಮ್ಮ ಸರ್ಕಾರ ಬದ್ದ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತ ಮಹಿಳೆಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ. ಇನ್ನು ಅವರು ಹೇಗೆ ರಾಜ್ಯದ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುತ್ತಾರೆ. ಹಾನಗಲ್ಲನಡೆದ ಸಾಮೋಹಿಕ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿಗೆ ವಹಿಸುವಂತೆ ಆಗ್ರಹಿಸಿ ಫೆ.೧೨ರಂದು ವಿಧಾನಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಜ.೨೦ರಂದು ಹಾವೇರಿಯ ಎಸ್ಪಿ ಕಚೇರಿಮುತ್ತಿಗೆ ಪ್ರತಿಭಟನೆಯಲ್ಲಿ ಅವರ ಮಾತನಾಡಿದರು, ಹಾನಗಲ್ಲ ಘಟನೆಯನ್ನು ಮುಚ್ಚಿಹಾಕುಲು ಸ್ಥಳೀಯ ಪೊಲೀಸರು ಮುಂದಾಗಿರುವುದುನ್ನು ಅಧಿವೇಶನದಲ್ಲಿ ದಾಖಲೆಸಮೇತ ಬಹಿರಂಗ ಪಡಿಸುವುದಾಗಿ ಹೇಳಿದ ಅವರು, ಬಿಜೆಪಿ ಹಾನಗಲ್ಲ ಘಟನೆಯನ್ನು ಸದನದ ಒಳಗೆ ಮತ್ತು ಸದನದ ಹೊರೆಗೆ ಹೋರಾಟಮಾಡುವು ಮೂಲಕ ತಾರ್ಕಿಕ ಅಂತ್ಯಕ್ಕೆ ಒಯ್ಯಲಿದೆ ಎಂದರು.
ಎಸ್‌ಪಿ ಕಚೇರಿ ಮುತ್ತಿಗೆಗೆ ಮುಂದಾದ ಬೊಮ್ಮಾಯಿ, ಅಶೋಕ ಬಂಧನ-ಬಿಡುಗಡೆ
ಹಾವೇರಿ: ಹಾನಗಲ್ಲ ಘಟನೆಯನ್ನು ಮುಚ್ಚಿಹಾಕಲು ಪೊಲೀಸರು ಮುಂದಾಗಿದ್ದಾರೆಂದು ಆರೋಪಿಸಿ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿರೋಧಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ೪೫ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಪೊಲೀಸ್ ವಾಹನ ಹಾಗೂ ಬಸ್‌ನಲ್ಲಿ ಶಹರ ಪೊಲೀಸ್‌ಠಾಣೆಗೆ ಕರೆದುಕೊಂಡು ಹೋಗಿ ನಂತರದಲ್ಲಿ ಬಿಡುಗಡೆ ಮಾಡಿದರು.