‘ಸಾಮರಸ್ಯ, ಸೌಹಾರ್ದತೆ ಮನುಷ್ಯರ ಉಸಿರಾಗಬೇಕಿದೆ’ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಬಸವ ಶಾಂತಲಿಂಗ ಸ್ವಾಮೀಜಿ

Date:

‘ಸಾಮರಸ್ಯ, ಸೌಹಾರ್ದತೆ ಮನುಷ್ಯರ ಉಸಿರಾಗಬೇಕಿದೆ’
ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಬಸವ ಶಾಂತಲಿಂಗ ಸ್ವಾಮೀಜಿ
ಹಾವೇರಿ: ಭಾರತವು ಸೌಹಾರ್ದ ಹಾಗೂ ಸಧ್ಭಾವದ ದೇಶವೆಂದು ಜಗತ್ತು ಕೊಂಡಾಡುತ್ತದೆ, ಭಾವೈಕ್ಯತೆಯೇ ನಮ್ಮ ಭಾರತದ ಅಂತಸತ್ವವಾಗಿದೆ. ಈ ಭಾವೈಕ್ಯತೆ, ಸಾಮರಸ್ಯವನ್ನು ಗಟ್ಟಿಗೊಳ್ಳುವುದು ಅಗತ್ಯವಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮಿಜಿ ಅಭಿಪ್ರಾಯ ಪಟ್ಟರು.
ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೌಹಾರ್ದ ಕರ್ನಾಟಕ ಹಾವೇರಿ ನೇತೃತ್ವದಲ್ಲಿ ನಡೆದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು, ಸಾಮರಸ್ಯ ಪರಂಪರೆಯು ಚಿರಸ್ಥಾಯಿಯಾಗಿ ಉಳಿಯಬೇಕು. ಹಲವಾರು ನಿಂದನೆ, ಅವಮಾನ ಎದುರಿಸಿದರೂ ಅನಿಷ್ಠ ಅಷ್ಪೃಶ್ಯತೆಯನ್ನು ತೊಲಗಿಸಲು ದಿಟ್ಟ ಹೆಜ್ಜೆ ಇಟ್ಟ ಗಾಂಧೀಜಿಯವರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದರು ಎಂದು ಸ್ಮರಿಸಿದರು.
ಹಲವು ಅವಯವಗಳನ್ನು ಹೊಂದಿರುವ ನಮ್ಮ ದೇಹದಂತೆ ದೇಶವು ಕೂಡ ಐಕ್ಯತೆ, ಸೌಹಾರ್ದತೆಯಿಂದ ಕೂಡಿರಬೇಕಾಗುತ್ತದೆ. ಮೇಲು ಕೀಳು, ಜಾತಿ ಭೇಧ ತಾರತಮ್ಯವಿಲ್ಲದೇ ಜಾತ್ಯಾತೀತ ತತ್ವದಡಿಯಲ್ಲಿ ಪ್ರೀತಿಯಿಂದ ಈ ದೇಶವನ್ನು ಕಟ್ಟಿರುವುದನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಹೋರಾಟಗಾರರಾದ ಬಸವರಾಜ ಹಾದಿಮನಿ ಮಾತನಾಡಿ,ಜನತೆಯ ನಡುವೆ ಸೌಹಾರ್ದತೆ ಸಂದೇಶವನ್ನು ಬಲಪಡಿಸುವ, ಸಂವಿಧಾನದ ಆಶಯದಂತೆ ದೇಶದ ಏಕತೆ, ಸಮಾನತೆ, ಬಂಧುತ್ವ, ಸಾರ್ವಭೌಮತ್ವ ಕಾಪಾಡುವುದು ಅತ್ಯಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗೌರಿ ಮಠದ ಶ್ರೀ ಗುರುಪಾದಯ್ಯ ದೇವರು, ಸೆಂಟ್ ಅ?ಯನ್ ಚರ್ಚ್ ಪಾದ್ರಿ ಮುಖ್ಯಸ್ಥರಾದ ಜೋಸೆಫ್ ಆಲಯ, ಮೌಲವಿಗಳಾದ ದಾದಾಪೀರ್ ಮುಲ್ಲಾ ಅವರು ಶಾಂತಿ, ಸೌಹಾರ್ದತೆಯ ಸಂದೇಶ ನೀಡಿದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಹಸೀನಾ ಹೆಡಿಯಾಲ, ಪರಿಮಳ ಜೈನ್,ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಜಿಲ್ಲಾ ಸಂಚಾಲಕ ನಾರಾಯಣ ಕಾಳೆ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧೀ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೂ ಭಾವೈಕ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸೋಣ; ಸೌಹಾರ್ದ ಭಾರತ ಕಟ್ಟೋಣ ಘೋಷಣೆಗಳು ಮಾರ್ದನಿಸಿದವು. ನಂತರ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೌಹಾರ್ದ ಮಾನವ ಸರಪಳಿ ರಚಿಸುವ ಮೂಲಕ ಐಕ್ಯತೆಯ ಸಂದೇಶ ಸಾರಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಎಸ್, ಶಿವಬಸಪ್ಪ ಗೋವಿ, ಶೆಟ್ಟಿ ವಿಭೂತಿ ನಾಯಕ, ಅಶೋಕ ಮರೆಣ್ಣನವರ, ನಿಂಗಪ್ಪ ಗಾಳೆಮ್ಮನವರ, ಎಂ.ಕೆ. ಮಕಬುಲ್, ಜಿಲಾನಿ ಪಟವೇಗಾರ, ರಮೇಶ ಜಾಲಿಹಾಳ, ಶೋಭಾ ಮುದೇನೂರು, ಪೃಥ್ವಿರಾಜ್ ಬೆಟಗೇರಿ, ಶಂಕರ ತುಮ್ಮಣ್ಣವರ, ಈರಣ್ಣ ಬೆಳವಡಿ, ಎಸ್.ಎಫ್ ಸುತಾರ, ರೇಣುಕಾ ಗುಡಿಮನಿ, ರುದ್ರಪ್ಪ ಜಾಬೀನ, ಮಹ್ಮದ್ ಹನೀಪ್ ಬಂಕಾಪುರ, ರೇವಣಸಿದ್ದಯ್ಯ ಚಿಕ್ಕಮಠ, ಬಾಬುಸಾಬ ಮೋಮಿನಗಾರ, ಗಣೇಶ ಬಿಷ್ಠಣ್ಣವರ, ಬಸಯ್ಯ ಹೀರೇಮಠ, ಜಯದೇವ ಕೆರೂಡಿ, ನನ್ನೂರಸಾಬ ನದಾಫ್, ಅತೀಖ್, ಸಿಎಚ್ ಬಾರ್ಕಿ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...