ಹಾವೇರಿ: ವರದಕ್ಷಿಣೆ ಬಾಕಿ ಹಣಕ್ಕಾಗಿ ಪತ್ನಿಯ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Date:

ಹಾವೇರಿ : ಬಾಕಿ ವರದಕ್ಷಿಣೆ ಹಣ ತರುವಂತೆ ಹೊಡೆದು ಸೀರೆಯಿಂದ ಉರುಳುಹಾಕಿ ಕೊಲೆ ಮಾಡಿದ ಕರ್ಜಗಿ ಗ್ರಾಮದ ಆರೋಪಿ ಮಹೇಶ ರಾಮಚಂದ್ರಪ್ಪ ಗಂಗಮ್ಮನವರ ಈತನಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ಕು ಸಾವಿರ ದಂಡವಿಧಿಸಿ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಮಂಗಳವಾರ ತೀರ್ಪು ನೀಡಿದ್ದಾರೆ.
ಒಂಭತ್ತು ವರ್ಷಗಳ ಹಿಂದೆ ಐದು ತೊಲೆ ಬಂಗಾರ ಹಾಗೂ ಐದು ಸಾವಿರ ವರದಕ್ಷಿಣೆ ನೀಡಿ, ಬಾಕಿ ರೂ.೨೦ ಸಾವಿರ ನಂತರ ಕೊಡುವುದಾಗಿ ಹೇಳಿ ಹಿರಿಯರ ಸಮಕ್ಷಮದಲ್ಲಿ ನಿರ್ಮಲಾಳನ್ನು ಮಹೇಶ ರಾಮಚಂದ್ರಪ್ಪ ಗಂಗಮ್ಮನವರ ಈತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ನಿರ್ಮಲಾಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದನು. ದಿನಾಂಕ:೦೯-೦೩-೨೦೨೦ ರಂದು ಕರ್ಜಗಿ ಗ್ರಾಮದ ಗಂಡನ ಮನೆಯಲ್ಲಿ ನಿರ್ಮಲಾಳಿಗೆ ಹೊಡೆದು ಸೀರೆಯಿಂದ ಉರುಳುಹಾಕಿ ಕೊಲೆ ಮಾಡಿದ್ದಾಗಿ ದೂರು ದಾಖಲಿಸಲಾಗಿತ್ತು.
ಹಾವೇರಿ ಮಹಿಳಾ ಪೊಲೀಸ್ ಠಾಣೆ ಇನ್ಸಪೆಕ್ಟರ್ ಟಿ.ಮಂಜಣ್ಣ ಅವರು ಪ್ರಕರಣದ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರೋಪಿತನಮೇಲೆ ಕಲಂ:೪೯೮(ಎ), ೩೦೨ ಐಪಿಸಿ ಮತ್ತು ಡಿ.ಪಿ. ಕಾಯ್ದೆ ೩ ಮತ್ತು ೪ರ ಅಡಿಯಲ್ಲಿ ಆಪಾದನೆಗಳು ಋಜುವಾತಾದ ಹಿನ್ನಲೆಯಲ್ಲಿ ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ಕು ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...