ರಾಣೇಬೆನ್ನೂರ: ಬೈಕ್ ವ್ಯಾಮೋಹ ಆತ್ಮಹತ್ಯೆಗೆ ಶರಣಾದ ಪುತ್ರ, ರೈಲಿಗೆ ತಲೆಕೊಟ್ಟ ತಾಯಿ  

Date:

ಹಾವೇರಿ:  ಬೈಕ್ ವ್ಯಾಮೋಹಕ್ಕೆ ಒಳಗಾದ ಯುವಕ ಬೈಕ್ ಕೊಡಿಸಿ ಎಂದು ಹಠ ಹಿಡಿದು ತಾಯಿಯೊಂದಿಗೆ ಜಗಳವಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಗ ಆತ್ಮಹತ್ಯೆಮಾಡಿಕೊಂಡಿರುವುದರನ್ನು ಕಂಡ ತಾಯಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜಿಲ್ಲೆಯ  ರಾಣೇಬೆನ್ನೂರ ತಾಲೂಕಿನ ಕರೂರ ಗ್ರಾಮದಲ್ಲಿ ಜು.೧೩ರಂದು ಶನಿವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಧನರಾಜ ಸುರೇಶ ಹಾದಿಮನಿ
(೧೮) ಹಾಗೂ ಈತನ ತಾಯಿ ಬಾಗ್ಯಮ್ಮ ನಾಯಕ (೪೩) ಎಂದು ತಿಳಿದು ಬಂದಿದೆ. ಧನರಾಜ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ತನಗೆ ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ- ತಾಯಿ ಬಳಿ ಶನಿವಾರ ಬೆಳಗ್ಗೆ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ ಆಯ್ತು ಹೇಗಾದರೂ ಮಾಡಿ ಕೊಡಿಸುತ್ತೇನೆ ಎಂದು ಕೆಲಸಕ್ಕೆ ಹೋಗಿದ್ದರು.
ನಂತರದಲ್ಲಿ ತಾಯಿ ಮಗನಿಗೆ ಬೈಕ್ ತಗೆದುಕೊಳ್ಳವುದು ಬೇಡ ಎಂದು ತಮ್ಮ ಸ್ಥಿತಿಯ ಬಗ್ಗೆ ಬುದ್ದಿ ಮಾತು ಹೇಳಿದ್ದರೆಂದು, ತಾಯಿ ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ತಾಯಿ ಮಗನಿಗೆ ಬುದ್ದಿ ಹೇಳಿ ಓದಿನ ಕಡೆಗೆ ಗಮನ ಹರಿಸುವಂತೆ ಹೇಳಿದ್ದಾರೆ. ಆದರೆ ಮಗ ತಾಯಿಯ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾನೆ. ಇದರಿಂದ ಬೇಸತ್ತ ಭಾಗ್ಯಮ್ಮ ರೈಲಿಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ, ಆಗ ಜನರು ತಾಯಿಯನ್ನು ತಡದು ಮನೆಗೆ ಕರೆತಂದಿದ್ದಾರೆ.
ಇತ್ತ ಮನೆಗೆ ತಾಯಿ ಬಂದ ವೇಳೆ  ಮಧ್ಯಾಹ್ನ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಗೆ ಬಂದ ತಾಯಿ ಮಗ ಆತ್ಮ
ಹತ್ಯೆ ಮಾಡಿಕೊಂಡಿರುವುದನ್ನು ಕಂಡು  ದಂಗಾಗಿದ್ದಾರೆ. ದುಃಖಿತರಾದ ತಾಯಿ ಭಾಗ್ಯಮ್ಮ
ಅವರು ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಥಳಕ್ಕೆ ಕುಮಾರಪಟ್ಟಣ ಪಿಎಸ್‌ಐ ಪ್ರವೀಣ ವಾಲೀಕಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...