ಹಾವೇರಿ : ಕೊಲೆ ಆರೋಪಿತಳಿಗೆ ಜೀವಾವಧಿ ಶಿಕ್ಷೆ-ದಂಡ

Date:

ಹಾವೇರಿ : ಕೊಲೆ ಆರೋಪಿತಳಿಗೆ ಜೀವಾವಧಿ ಶಿಕ್ಷೆ-ದಂಡ

ಹಾವೇರಿ : ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿ ಮದುವೆಯಾಗುವ ವಿಷಯ ತಿಳಿದು ಆ ವ್ಯಕ್ತಿಯನ್ನು ಕೊಲೆಮಾಡಿದ ಆರೋಪಿತಳಾದ ಶ್ರೀಮತಿ ಎಲ್ಲವ್ವ ಹೊಸಳ್ಳಿ ಎಂಬ ಮಹಿಳೆಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಹಾವೇರಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಗುರುವಾರ ತೀರ್ಪು ನೀಡಿದ್ದಾರೆ.
ಆರೋಪಿತಳಾದ ಎಲ್ಲವ್ವ ಹೊಸಳ್ಳಿ ಇವಳು ಮೃತ ನಾಗರಾಜ ಮಣ್ಣಿಕೇರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಮೃತ ನಾಗರಾಜನ ಮದುವೆಗೆ ಮನೆಯವರು ಹುಡುಗಿ ನೋಡುತ್ತಿರುವ ವಿಷಯ ತಿಳಿದ ಎಲ್ಲವ್ವ ಹೊಸಳ್ಳಿ ಇವಳು ದಿನಾಂಕ ೨-೮-೨೦೨೧ ರಂದು ಮೃತ ನಾಗರಾಜನನ್ನು ಕರೆದುಕೊಂಡು ಹೋಗಿ ಹಲವು ಕಡೆ ತಿರುಗಾಡಿ ದಿನಾಂಕ ೭-೦೮-೨೦೨೧ ರಂದು ಹುಬ್ಬಳ್ಳಿಯಿಂದ ಲಾರಿಯಲ್ಲಿ ಬರುವಾಗ ಲಾರಿ ಚಾಲಕನು ಊಟಕ್ಕೆ ಹೋದ ಸಮಯದಲ್ಲಿ ತನ್ನ ವೆಲ್‌ನಿಂದ ಕುತ್ತಿಗೆಗೆ ಬಿಗಿದು ಸಾಯಿಸಿ, ಮೊಟೇಬೆನ್ನೂರ ಬಳಿ ಮೃತ ನಾಗರಾಜ ಶವವನ್ನು ಹೈವೆ ಮೇಲೆ ಬಿಟ್ಟು ಪರಾರಿಯಾದ ಕುರಿತು ದೂರು ದಾಖಲಾಗಿತ್ತು.
ಈ ಪ್ರಕರಣದ ಕುರಿತು ಹಾವೇರಿ ಡಿಎಸ್‌ಪಿ ಶಂಕರ ವಾರಿಹಾಳ ಅವರು ತನಿಖೆಕೈಗೊಂಡು, ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿತಳಾದ ಶ್ರೀಮತಿ ಎಲ್ಲವ್ವ ಹೊಸಳ್ಳಿ ಮೇಲೆ ವಿವಿಧ ಕಲಂಗಳಡಿ ಆಪಾದನೆಗಳು ಜುರುವಾತಾದ ಹಿನ್ನಲೆಯಲ್ಲಿ ಆರೋಪಿತಳಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.೩೫ ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಅಭಿಯೋಜನೆ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ

೨೦೨೮ರ ಚುನಾವಣೆಯಲ್ಲಿ ನಾನೆ ಅಭ್ಯರ್ಥಿ: ಬಸವರಾಜ ಶಿವಣ್ಣನವರ ಹಾವೇರಿ: ೨೦೨೮ ವಿಧಾನಸಭೆ ಚುನಾವಣೆಯಲ್ಲಿ...

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಾಕೀತು

೨ ತಿಂಗಳು ಒಳಗೆ ಆಶ್ರಯ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಉಪಸಭಾಧ್ಯಕ್ಷ ರುದ್ರಪ್ಪ...

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ

ಹಾವೇರಿ ವಿಶ್ವವಿದ್ಯಾಲಯದ ಘಟಿಕೋತ್ಸವ ವಿವಿ ಕ್ಯಾಂಪಸ್‌ನಲ್ಲಿಯೇ ನಡೆಸಲು ಎಸ್‌ಎಫ್‌ಐ ಒತ್ತಾಯ ಹಾವೇರಿ: ಹಾವೇರಿ...

ಏ. ೧೦ರಂದು ರಾಜ್ಯಾದ್ಯಂತ “ಗ್ಯಾಂಗ್ಸ್ ಆಫ್ ಯುಕೆ” ಚಿತ್ರದ ಬಿಡುಗಡೆ

ಏ. ೧೦ರಂದು ರಾಜ್ಯಾದ್ಯಂತ "ಗ್ಯಾಂಗ್ಸ್ ಆಫ್ ಯುಕೆ" ಚಿತ್ರದ ಬಿಡುಗಡೆ ಹಾವೇರಿ: ಡೆಡ್ಲಿ...