“ಹಾವೇರಿ ವಿವಿಯಲ್ಲಿ ಕನಕ ಅಧ್ಯಯನ ಪೀಠ”: ಪ್ರೊ.ಸುರೇಶ ಜಂಗಮಶೆಟ್ಟಿ

Date:

ಹಾವೇರಿ: ಮನುಷ್ಯ ಕುಲದ ವರ್ಗೀಕರಣವನ್ನು ಸಹಿಸದ ದಾಸ ಪರಂಪರೆಯ ಅಗ್ರಗಣ್ಯ ಕನಕದಾಸರ ದರ್ಶನ ತತ್ವವನ್ನು ಪರಿಚಯಿಸುವ ಮೂಡಲಪಾಯ ಬಯಲಾಟಕ್ಕೆ ಸಂಬಂಧಿಸಿದ ಜ್ಞಾನದಾನಿ ಕನಕ ಪುಸ್ತಕ ಅಕ್ಷರ ಲೋಕದ ಮಾಧ್ಯಮದಲ್ಲಿ ವಿನೂತನ ಪ್ರಯತ್ನ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಹೇಳಿದರು.
ನಗರದ ಹೊಸಮಠದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ರಂಗಕರ್ಮಿ ಎಂ.ಎಸ್.ಮಾಳವಾಡರ ಜ್ಞಾನದಾನಿ ಕನಕ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ, ರಂಗಕರ್ಮಿ ಎಂ.ಎಸ್.ಮಾಳವಾಡರು ಕನಕದಾಸರ ಜೀವನ ಸಂದೇಶವನ್ನು ಹಾಗೂ ಹಾಸ್ಯ ಪ್ರಧಾನದಲ್ಲಿ ಆಧುನಿಕತೆಯ ಸ್ಪರ್ಶ ನೀಡಿರುವರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯ ಶ್ಲಾಘನೀಯ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಕನಕ ಅಧ್ಯಯನ ಪೀಠ ಆರಂಭಿಸುವ ಚಿಂತನೆ ನಮ್ಮದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ರವಿ ಮಾತನಾಡಿ, ಕನಕ ಎಂಬ ಜ್ಞಾನ ಹೊಸ ಹೊಸ ರೂಪದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಹೊಸ ಸಂಗತಿಗಳನ್ನು ಸ್ಪುರಿಸುವ ಜ್ಞಾನದಾನಿ ಕನಕ ಕೃತಿಕಾರ ಎಂ.ಎಸ್.ಮಾಳವಾಡರ ಅನಾರೋಗ್ಯದ ಮಧ್ಯ ಅವರಿಗೊಂದು ಆತ್ಮಚೈತನ್ಯ ತುಂಬಲಿದೆ. ಪ್ರಾಧಿಕಾರ ಪುಸ್ತಕ ಪ್ರಕಟಣೆಗೆ ಅಭಿಮಾನ ಪಡುತ್ತದೆ ಎಂದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ.ಜಗನ್ನಾಥ ಗೇನಣ್ಣವರ ಪ್ರಾಸ್ತಾವಿಕವಾಗಿ, ಕರ್ನಾಟಕ ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಪುಸ್ತಕ ಕುರಿತು ಹಾಗೂ ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಜಿ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಒರೆಗೆ ಹಚ್ಚುವ ಜೊತೆಗೆ ಬಂಡಾಯ ಸಾರಿದವರು ಕನಕರು. ಅಮೃತ ಸಾಗರದಂತಿರುವ ಅವರನ್ನು ಬಯಲಾಟದ ಮೂಲಕ ಇಡೀ ಸಮಾಜಕ್ಕೆ ಕನ್ನಡಿಯಾಗಿಸಿರುವ ಎಂ.ಎಸ್.ಮಾಳವಾಡರು ಅಭಿನಂದನಾರ್ಹರು ಎಂದರು.
ರಂಗಕರ್ಮಿ ಎಂ.ಎಸ್.ಮಾಳವಾಡ ಮಾತನಾಡಿ ಯಾವುದೇ ಕಲೆಗೆ ಸಾಮಾಜಿಕ ಬದ್ಧತೆ ಇರಬೇಕು. ಅದು ಸಮಾಜವನ್ನು ತಿದ್ದುವ ಸಾಧನವಾಗಬೇಕು. ಈ ಹಿನ್ನೆಲೆಯಲ್ಲಿ ಕನಕದಾಸರನ್ನು ಬಯಲಾಟದ ಮೂಲಕ ಜನಪದೀಯವಾಗಿಸಲು ಮತ್ತು ಶ್ರಮ ಸಂಸ್ಕೃತಿಯ ಬಿಂಬದಲ್ಲಿ ಕಾಣಲು ಯತ್ನಿಸಿರುವೆ. ಅದು ಪವಾಡಗಳನ್ನು ಮತ್ತು ಐತಿಹ್ಯಗಳನ್ನು ಮೀರಿದ ನಿಲುವಿನಿಂದ ಕೂಡಿದೆ ಎಂದರು.
ಸತೀಶ ಕುಲಕರ್ಣಿ, ವಿ.ಎನ್. ತಿಪ್ಪನಗೌಡ್ರ, ನಾಗೇಂದ್ರ ಕಡಕೋಳ, ಹನುಮಂತಗೌಡ ಗಾಜಿಗೌಡ್ರ, ಎಸ್.ಆರ್.ಹಿರೇಮಠ, ಮಾಲತೇಶ ಅಂಗೂರ, ಲೀಲಾವತಿ ಪಾಟೀಲ, ಮಹಾದೇವಿ ಕಣವಿ, ದಾಕ್ಷಾಯಣಿ ಗಾಣಗೇರ, ಅಮೃತಮ್ಮ ಶೀಲವಂತರ, ರೇಣುಕಾ ಗುಡಿಮನಿ, ಲೀಲಾ ಬೇವಿನಮರದ ಉಪಸ್ಥಿತರಿದ್ದರು.
ಭೂಮಿಕಾ ರಜಪೂತ ವಚನ ಗಾಯನ ಪ್ರಸ್ತುತಪಡಿಸಿದರು. ಪರಿಮಳಾ ಜೈನ್ ಸ್ವಾಗತಿಸಿದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿದರು. ಪೃಥ್ವಿರಾಜ್ ಬೆಟಗೇರಿ ವಂದಿಸಿದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...