News Week
Magazine PRO

Company

ಹೋರಾಟಕ್ಕೆ ಮಣಿದ ಜಿ.ಎಂ.ಶುಗರ್‍ಸ್, ೪ಕೋಟಿ ಕಬ್ಬಿನ ಬಾಕಿ ರೈತರ ಖಾತೆಗೆ ಜಮಾ

Date:

ಹಾವೇರಿ: ಸಂಗೂರಬಳಿ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ್‍ಸ್‌ನವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸಲು ವಿಳಂಭಮಾಡಿದ ಹಿನ್ನಲೆಯಲ್ಲಿ ಸೋಮವಾರ ರೈತರು ಕರೆ ನೀಡಿದ್ದ ಹಾವೇರಿ-ಹಾನಗಲ್ಲ ರಾಜ್ಯ ಹೆದ್ದಾರಿ ಬಂದ್ ಕರೆಗೆ ಮಣಿದು ರೈತರ ಖಾತೆಗೆ ೪ಕೋಟಿ ರೂ ಹಣವನ್ನು ಜಮೆ ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆ ಎದುರು ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಡಿ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳು, ಜಿಲ್ಲಾ ಫುಡ್ ಡಿ ಡಿ ಅವರು ಹಾಗೂ ಪೊಲೀಸ್ ಇಲಾಖೆಯವರು ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಎರಡು ದಿನಗಳ ಒಳಗಾಗಿ ನಾಲ್ಕು ಕೋಟಿ ರೂಗಳನ್ನು ರೈತರಿಗೆ ಜಮಾ ಮಾಡಿರುತ್ತಾರೆ. ಫೆ. ೨೮ ರ ಒಳಗಾಗಿ ಎಲ್ಲ ರೈತರ ಕಬ್ಬಿನ ಬಾಕಿ ಹಣವನ್ನುಉ ಪಾವತಿಸುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ನಾಲ್ಕು ಕೋಟಿ ಹಣವನ್ನು ಪಾವತಿಸಲಾಗಿದೆ, ಉಳಿದ ಹಣವನ್ನು ತಕ್ಷಣವೇ ಬಿಡುಗಡೆ ಮಾಡುತ್ತೇವೆ ಎಂದು ಕಾರ್ಖಾನೆಯ ಅಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರೈತರ ಸಮಕ್ಷಮ ಭರವಸೆ ನೀಡಿದ ಕಾರಣ ಹೋರಾಟವನ್ನು ರೈತರು ಹೋರಾಟವನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ್ ಬೆಟಗೆರಿ, ದಾನೇಶಪ್ಪ ಕೆಂಗೊಂಡ, ಮಂಜುನಾಥ ಅಸುಂಡಿ, ನಾಗಪ್ಪ ಕೆಮ್ಮಗೊಂಡ, ಮಲ್ಲಪ್ಪ ಬೈಲನಾಯಕರ, ಎಸ್. ವ್ಹಿ. ಸಂಗೂರಮಠ , ಬಸಣ್ಣ ಕಳಸೂರ , ಗುರ್ನಂಜಪ್ಪ ವರದಿ, ಗಿರೀಶ ಕೆರೆಗೊಂಡರ, ಸೇರಿ ಅನೇಕ ನೂರಾರು ಕಬ್ಬು ಬೆಳೆಗಾರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ

  ಹಾವೇರಿಯ ಗೆಳೆಯರ ಬಳಗಕ್ಕೆ ಪ್ರತಿಷ್ಠಿತ ರಾ.ಹ. ದೇಶಪಾಂಡೆ ಪ್ರಶಸ್ತಿಯ ಸಂಭ್ರಮ ಹಾವೇರಿ _...

“ಎಕ್ಕ ಪೈಸಾ ವಸೂಲಿ ಪಕ್ಕಾ”

"ಎಕ್ಕ ಪೈಸಾ ವಸೂಲಿ ಪಕ್ಕಾ" ಬಹುದಿನಗಳ ನಂತರ ಪಕ್ಕಾ ಪೈಸಾ ವಸೂಲಿ ಎನ್ನಬಹುದಾದ...

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ ರೆಡ್ಡಿ ವಂಟಗೋಡಿ ಅಧಿಕಾರ ಸ್ವೀಕಾರ

ಹಾವೇರಿ ಜಿಲ್ಲೆಯ ನೂತನ ಹಾಗೂ ಪ್ರಥಮ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಯಶೋದಾ...

“ಎಡ ಪಂಥದವರು ಜಡಪಂಥದವರಾಗಬೇಡಿ” ಹಾವೇರಿಯಲ್ಲಿ‌ ಪ್ರೊ.ಬರಗೂರು ರಾಮಚಂದ್ರಪ್ಪ

"ಎಡ ಪಂಥದವರು ಜಡಪಂಥದವರಾಗಬೇಡಿ" ಹಾವೇರಿಯಲ್ಲಿ‌ ಪ್ರೊ.ಬರಗೂರು ರಾಮಚಂದ್ರಪ್ಪ  ಹಾವೇರಿ: ಧರ್ಮಕ್ಕಿಂತ ಧಾರ್ಮಿಕ ವಾದ,...