ಹಾವೇರಿ: ಷೇರು ಮಾರ್ಕೆಟ್‌ನಲ್ಲಿ ಹಣ ದ್ವಿಗುಣ ಮೋಸ-ಓರ್ವನ ಬಂಧನ

Date:

ಹಾವೇರಿ:ಷೇರು ಮಾರ್ಕೆಟ್‌ನಲ್ಲಿ ಹಣ ತೊಡಗಿಸಿದರೆ ಪ್ರತಿ ದಿನ ೨% ಗಿಂತ ಹೆಚ್ಚು ಲಾಭ ಕೊಡುವುದಾಗಿ ವಂಚಿಇದ್ದ ಓರ್ವನನ್ನು ಬಂಧಿಸುವಲ್ಲಿ ಹಾವೇರಿಯ ಸಿಇಎನ್ ಪೊಲೀಸ್‌ಠಾಣೆಯ ಅಧಿಕಾರಿಗಳು ಹಾಗ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಲೆದ ಹಲವಾರು ತಿಂಗಳಿಂದ ಷೇರು ಮಾರ್ಕೆಟ್‌ನಲ್ಲಿ ಹಣತೊಡಗಿಸಿದರೇ ಕೆಲವೇದಿನಗಳಲ್ಲಿ ಹಣ ದ್ವಿಗುಣಮಾಡುವುದಾಗಿ ನಂಬಿಸಿ ಹಲವಾರು ಜನರಿಂದ ವಂಚಕರ ಹಣ ಪಡೆದುಕೊಂಡು ಮೋಸಮಾಡಿದ್ದರು.
ಈ ಬಗ್ಗೆ ಮೋಸಹೋದ ಜಿಲ್ಲೆಯ ಹಾನಗಲ್ಲ ತಾಲೂಕಿನ ಸಿಗೇಹಳ್ಳಿಯ ಮನೋಜ ಭರಮಪ್ಪ ಹಾದಿಮನಿ ದಿ. ೦೫-೦೧-೨೦೨೪ ರಂದು ಸಾಯಂಕಾಲ ೬:೩೦ ಗಂಟೆಯಿಂದ ದಿ: ೦೫-೦೨-೨೦೨೪ ರಂದು ಸಾಯಂಕಾಲ ೦೬-೦೦ ಗಂಟೆ ನಡುವಿನ ಅವಧಿಯಲ್ಲಿ ಆರೋಪಿತನಾದ ಹಾನಗಲ್ಲನ ಚಂದ್ರಪ್ಪ ಶಿವಪ್ಪ ತೋಟದ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ, ಪ್ರತಿ ದಿನ ೨% ಗಿಂತ ಹೆಚ್ಚು ಲಾಭ ಕೊಡುವುದಾಗಿ ನಂಬಿಸಿ ಐಡಿಎಫ್‌ಸಿ ಬ್ಯಾಂಕ್ ಅಕೌಂಟ್‌ನಿಂದ ತನ್ನ ಕೆನರಾ ಬ್ಯಾಂಕ್ ಗೆ ಒಟ್ಟು ರೂ. ೫,೮೩,೫೦೦/- ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಇನ್ವೆಸ್ಟ್ ಮಾಡಿದ ಹಣ ಮತ್ತು ಲಾಭದ ಹಣವನ್ನು ಕೊಡದೆ ಮನೋಜಗೆ ನಂಬಿಕೆ ದ್ರೋಹ ಮಾಡಿ ವಂಚನೆ ಮಾಡಿದ್ದರಿಂದ ಮನೋಜ, ಚಂದ್ರಪ್ಪ ತೋಟದ ಅವರ ಮೇಲೆ ನೀಡಿದ ದೂರಿನ ಮೇರೆಗೆ ಹಾವೇರಿ ಸಿಇಎನ್ ಕ್ರೈಂ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣದ ಆರೋಪಿ ೩೪ ವರ್ಷಜ ಚಂದ್ರಪ್ಪ ಬ್ಯಾಡಗಿಯ ಗಾಂದಿ ನಗರದ ನಿವಾಸಿಯಾಗಿದ್ದು, ಬ್ಯಾಡಗಿ, ಸದ್ಯ ಹಾವೇರಿ ಬಸವೇಶ್ವರ ನಗರ ೧೭ನೇ ಕ್ರಾಸ್‌ನ ಮನೆಯಲ್ಲಿ ವಾಸಿ ಇದ್ದ ಇವನು ಮನೋಜ ಸೇರಿದಂತೆ ಇತರೆ ಸಾರ್ವಜನಿಕರಿಗೆ ಷೇರು ಮಾರ್ಕೆಟ್‌ನಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ಮೋಸ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಪ್ರಗ್ಯಾ ಆನಂದ, ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪೊಲೀಸ್ ಇನ್ಸಪೆಕ್ಟರ್ ಶಿವಶಂಕರ ಗಣಾಚಾರಿ, ಸಿಬ್ಬಂದಿಯವರಾದ ನಾಗೇಂದ್ರ ಹಾನಗಲ್, ಪಿ. ಆರ್. ಭಾವಿಕಟ್ಟಿ ,ಹೆಚ್. ಬಿ. ಭರಮಗೌಡ್ರ ಅವರೊಂದಿಗೆ ಸೇರಿ ಆರೋಪಿತರ ಬಗ್ಗೆ ಖಚಿತ ಮಾಹಿತಿ ತಿಳಿದುಕೊಂಡು ಫೆ.೨೮ ರಂದು ಆರೋಪಿ ಚಂದ್ರಪ್ಪ ಶಿವಪ್ಪ ತೋಟದನನ್ನು ಹುಬ್ಬಳ್ಳಿ ಬೈರಿದೇವರಕೊಪ್ಪದ ಲೆಕ್‌ವೀವ್ ನಗರದಲ್ಲಿ ಬಂಧಿಸಿದ್ದಾರೆ. .
ಆರೋಪಿ ಚಂದ್ರಪ್ಪ ಈ ಹಿಂದೆ ಹಾವೇರಿ ಜಿಲ್ಲೆಯ ಸಾರ್ವಜನಿಕರನ್ನು ಗುರಿಯಾಗಿಸಿಟ್ಟುಕೊಂಡು ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದರಿಂದ ಹಾವೇರಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಂಚನೆಯ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಈ ಹಿಂದೆ ಇವನನ್ನು ಬಂಧಿಸಲಾಗಿತ್ತು. ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು, ನಂತರ ಮತ್ತೆ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿದ್ದನು. ಇದೀಗ ಇತನನ್ನು ಹಾವೇರಿಯ ಸಿಇಎನ್ ಪೊಲೀಸರು ವಂಚನೆಯ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಆರೋಪಿ ಚಂದ್ರಪ್ಪ ಶಿವಪ್ಪ ತೋಟದ ಷೇರು ಮಾರ್ಕೆಟ್‌ನಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭ ಕೊಡುವುದಾಗಿ ನಂಬಿಸಿ ದನುಷ್ ಸ್ಟಾಕ್ಸ್ ಇನ್ವೆಸ್ಟಮೆಂಟ್ (ಡಿ ಸ್ಟಾಕ್ಸ್) ಎಂಬ ನಕಲಿ ಕಂಪನಿಯ ಹೆಸರಿನಲ್ಲಿ ನೀಡಿರುವ ನಕಲಿ ರಶೀದಿಗಳನ್ನು, ನಕಲಿ ಠೇವಣಿ ಭದ್ರತಾ ಪತ್ರಗಳನ್ನು ಮತ್ತು ನಕಲಿ ದಾಖಲೆಗಳನ್ನು ವಂಚನೆಗೆ ಒಳಗಾದ ಸಾರ್ವಜನಿಕರು, ಸೂಕ್ತ ದಾಖಲೆಗಳೊಂದಿಗೆ ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗಿ ಈ ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

More like this
Related

ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ

ಹಾವೇರಿ: ಹೆದ್ದಾರಿಯಲ್ಲಿ ೪೦.ಲಕ್ಷ ರೂ ದರೋಡೆ ಮಾಡಿದ್ದ ೯ ಜನರ ಬಂಧನ ಹಾವೇರಿ:...

ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ

ಸಮರ್ಪಕ ಜನಗಣತಿ ಕಾರ್ಯ ಯಶಸ್ವಿಗೆ ಸಹಕರಿಸಿ: ಡಾ. ವಿಜಯಮಹಾಂತೇಶ್ ದಾನಮ್ಮನವರ ಹಾವೇರಿ ವಾರ್ತೆ...

ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ : ಶಾಸಕ ಶ್ರೀನಿವಾಸ ಮಾನೆ

ಕೇಂದ್ರದ ಅನುದಾನ ಹಂಚಿಕೆ ನೀತಿಯಿಂದ ದಕ್ಷಿಣದ ರಾಜ್ಯಗಳಿಗೆ ಭಾರಿ ಅನ್ಯಾಯ :...

ನೊಂದವರ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಪರಿಹರಿಸುವುದು ಪೊಲೀಸರ ಕರ್ತವ್ಯ ಪ್ರಜ್ಞೆಯಾಗಿದೆ -ಸುರೇಖಾ ರಾಯ್ಕರ್

ನೊಂದವರ ಸಮಸ್ಯೆಗಳನ್ನು ಪ್ರಾಮಾಣಿಕತೆಯಿಂದ ಪರಿಹರಿಸುವುದು ಪೊಲೀಸರ ಕರ್ತವ್ಯ ಪ್ರಜ್ಞೆಯಾಗಿದೆ -ಸುರೇಖಾ...